ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಾರ್ಚ್ 1 ನೇ ತಾರೀಖು ಸಂತ್ರಸ್ಥೆ ಕುಟುಂಬದ ಸ್ನೇಹಿತನನ್ನ ದಿನೇಶ್ ಕಲ್ಲಹಳ್ಳಿ ರಾಮಕೃಷ್ಣ ಲಾಡ್ಜ್ನಲ್ಲಿ ಭೇಟಿ ಮಾಡಿದ್ದರು ಎಂಬ ಮಾಹಿತಿ ಮೇರೆಗೆ ನಿನ್ನೆ ಲಾಡ್ಜ್ಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿರುವ ಪೊಲೀಸರು ಅಲ್ಲಿನ ಸಿಸಿ ಕ್ಯಾಮೆರಾ ಡಿವಿಆರ್ ವಶಕ್ಕೆ ಪಡೆದಿದ್ದಾರೆ.
ಸಂತ್ರಸ್ಥೆ ಕುಟುಂಬದ ಸ್ನೇಹಿತನಿಂದ ಸಿಡಿಯನ್ನ ಪಡೆದಿದ್ದ ದಿನೇಶ್ ಕಲ್ಲಹಳ್ಳಿ ಅವರ ಹೇಳಿಕೆಯನ್ನು ಆಧರಿಸಿ ರಾಮಕೃಷ್ಣ ಲಾಡ್ಜ್ನಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು, ಆ ದಿನದ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ದಿನೇಶ್ ಕಲ್ಲಹಳ್ಳಿ ಹಾಗೂ ಅವರು ಭೇಟಿ ಮಾಡಿದ್ದ ವ್ಯಕ್ತಿ ಮಾತನಾಡುತ್ತಿರುವ ದೃಶ್ಯಗಳನ್ನ ವಶಕ್ಕೆ ಪಡೆದಿರುವ ಕಬ್ಬನ್ ಪಾರ್ಕ್ ಹಾಗೂ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ, ಈವರೆಗೆ ದೃಶ್ಯಾವಳಿಗಳಲ್ಲಿದ್ದ ವ್ಯಕ್ತಿಗಳ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ:
ಸಂತ್ರಸ್ತ ಯುವತಿ ತಮ್ಮದು ಸಹಮತ ಸೆಕ್ಸ್ ಎಂದು ಹೇಳಿದರೆ.. ನಾನು ಕಾನೂನು ಹೋರಾಟ ನಡೆಸುತ್ತೇನೆ -ದಿನೇಶ್ ಕಲ್ಲಹಳ್ಳಿ