ರಮೇಶ್​ ಜಾರಕಿಹೊಳಿ ಬೆಂಬಲಿಗರು ಮಾನಸಿಕ ಹಿಂಸೆ ನೀಡ್ತಿದ್ದಾರೆ, ಮಾರ್ಚ್​ 9ರಂದು ವಿಚಾರಣೆಗೆ ಹಾಜರಾಗ್ತೀನಿ: ದಿನೇಶ್ ಕಲ್ಲಹಳ್ಳಿ

ನಮ್ಮ ಸಚಿವರ ವಿರುದ್ಧ ದೂರು ಕೊಟ್ಟಿದ್ದೇಕೆ? ಇದರ ಪರಿಣಾಮ ಚೆನ್ನಾಗಿರೋದಿಲ್ಲ ಎಂದು ಅಪರಿಚಿತರು ಮೇಲಿಂದ ಮೇಲೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಹೀಗಾಗಿ ಸಂಪೂರ್ಣ ಭದ್ರತೆ ಸಿಗುವ ತನಕ ವಿಚಾರಣೆಗೆ ಹಾಜರಾಗುವುದು ಕಷ್ಟ ಎಂದು ದಿನೇಶ್​ ಕಲ್ಲಹಳ್ಳಿ ಹೇಳಿದ್ದಾರೆ.

  • TV9 Web Team
  • Published On - 13:35 PM, 4 Mar 2021
ರಮೇಶ್​ ಜಾರಕಿಹೊಳಿ ಬೆಂಬಲಿಗರು ಮಾನಸಿಕ ಹಿಂಸೆ ನೀಡ್ತಿದ್ದಾರೆ, ಮಾರ್ಚ್​ 9ರಂದು ವಿಚಾರಣೆಗೆ ಹಾಜರಾಗ್ತೀನಿ: ದಿನೇಶ್ ಕಲ್ಲಹಳ್ಳಿ
ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ

ರಮೇಶ್​ ಜಾರಕಿಹೊಳಿ ವಿರುದ್ಧ ದೂರು ಕೊಟ್ಟ ಕ್ಷಣದಿಂದ ನನಗೆ ನಿರಂತರವಾಗಿ ಬೆದರಿಕೆ ಕರೆ ಬರುತ್ತಿವೆ ಎಂದು ಹೇಳಿರುವ ದಿನೇಶ್​ ಕಲ್ಲಹಳ್ಳಿ, ಇಂದು ತನಿಖೆಯಿಂದ ವಿನಾಯಿತಿ ಪಡೆದಿರುವುದಾಗಿಯೂ ತಿಳಿಸಿದ್ದಾರೆ. ನಮ್ಮ ಸಚಿವರ ವಿರುದ್ಧ ದೂರು ಕೊಟ್ಟಿದ್ದೇಕೆ? ಇದರ ಪರಿಣಾಮ ಚೆನ್ನಾಗಿರೋದಿಲ್ಲ ಎಂದು ಅಪರಿಚಿತರು ಮೇಲಿಂದ ಮೇಲೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಹೀಗಾಗಿ ಸಂಪೂರ್ಣ ಭದ್ರತೆ ಸಿಗುವ ತನಕ ವಿಚಾರಣೆಗೆ ಹಾಜರಾಗುವುದು ಕಷ್ಟ ಎಂದು ಹೇಳಿದ್ದಾರೆ.

ಸದ್ಯ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿ, ಇಂದಿನ ತನಿಖೆಯಿಂದ ವಿನಾಯಿತಿ ಪಡೆದಿದ್ದೇನೆ. ಮಾರ್ಚ್​ 9ರಂದು ತನಿಖೆಗೆ ಹಾಜರಾಗುವುದಾಗಿ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ ದಿನೇಶ್​ ಭದ್ರತೆಗಾಗಿ ಇಬ್ಬರು ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ನಂತರ ಸೂಕ್ತ ಭದ್ರತೆ ಇಲ್ಲದೆ ಇರುವ ಕಾರಣ, ವಿಚಾರಣೆಗೆ ಹೋಗಲ್ಲ ಎಂದ ಬೆನ್ನಲ್ಲೇ ಒಬ್ಬರು ಪಿಎಸ್​ಐ ಹಾಗೂ ಮೂವರು ಕಾನ್ಸ್‌ಟೇಬಲ್‌ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ:
ರಮೇಶ್​ ಜಾರಕಿಹೊಳಿ ರಾಜೀನಾಮೆಗೆ ಕಾರಣರಾದ ದಿನೇಶ್ ಕಲ್ಲಹಳ್ಳಿ ಸಂದರ್ಶನ

‘ಸಂತ್ರಸ್ತೆ ಕುಟುಂಬ ಬಹಳ ಭಯದಲ್ಲಿ ಬದುಕುತ್ತಿದ್ದಾರೆ; ಅಧಿವೇಶನದ ಸಂದರ್ಭವೆಂದು ನಾನು ದೂರು ನೀಡಿಲ್ಲ’