ತಾಳಿ, ಕಾಲುಂಗುರ ರೂಪದಲ್ಲಿಯೂ ಚಿನ್ನ ಸಾಗಣೆ.. ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ವಶಕ್ಕೆ ಪಡೆದ ಕಸ್ಟಮ್ಸ್

|

Updated on: Apr 12, 2021 | 11:22 AM

ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮುಂಬೈನಿಂದ ಬೆಂಗಳೂರಿಗೆ ಕಾಲಿನ ಪಾದದಡಿ ಇಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಮತ್ತು ವಿದೇಶಿ ಸಿಗರೇಟ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ತಾಳಿ, ಕಾಲುಂಗುರ ರೂಪದಲ್ಲಿಯೂ ಚಿನ್ನ ಸಾಗಣೆ.. ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ವಶಕ್ಕೆ ಪಡೆದ ಕಸ್ಟಮ್ಸ್
ಅಕ್ರಮವಾಗಿ ತಂದಿದ್ದ ₹5.42 ಲಕ್ಷ ಮೌಲ್ಯದ ಚಿನ್ನ ಮತ್ತು ಸಿಗರೇಟ್ ವಶ
Follow us on

ದೇವನಹಳ್ಳಿ: ಕಾಲಿನ ಪಾದದಲ್ಲಿಟ್ಟುಕೊಂಡು ಅಕ್ರಮವಾಗಿ ತಂದಿದ್ದ ₹5.42 ಲಕ್ಷ ಮೌಲ್ಯದ ಚಿನ್ನ ಮತ್ತು ಸಿಗರೇಟ್​ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ‌ವಿಮಾನ ನಿಲ್ದಾಣದಲ್ಲಿ ನಡೆದಿದೆ. ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಿಂದಾಗಿ ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ತಂದಿದ್ದ ಚಿನ್ನ ಜಪ್ತಿಯಾಗಿದೆ.

ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮುಂಬೈನಿಂದ ಬೆಂಗಳೂರಿಗೆ ಕಾಲಿನ ಪಾದದಡಿ ಇಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಮತ್ತು ವಿದೇಶಿ ಸಿಗರೇಟ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರಿಂದ 5.44 ಲಕ್ಷ ಮೌಲ್ಯದ ಚಿನ್ನ ಮತ್ತು ಸಿಗರೇಟ್ ಜಪ್ತಿಯಾಗಿದೆ.

ಓರ್ವ ಮಹಿಳೆ ತಾಳಿ ಮತ್ತು ಕಾಲುಂಗುರದ ರೂಪದಲ್ಲಿ ಚಿನ್ನಕ್ಕೆ ಬೆಳ್ಳಿ ಕೋಟ್ ಮಾಡಿ ತಂದಿದ್ದು ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಆಕೆಯ ಬಳಿಯಿದ್ದ ಚಿನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಮತ್ತೊಂದು ಪ್ರಕರಣದಲ್ಲಿ ಲಗೇಜ್​ನಲ್ಲಿ ವಿದೇಶದಿಂದ ಬೆಂಗಳೂರಿನಲ್ಲಿ‌ ಮಾರಾಟ ಮಾಡಲು ಕಾರ್ಟೂನ್ ರೀತಿ ಸಿಗರೇಟ್​ಗಳನ್ನ ತಂದಿದ್ದ ವ್ಯಕ್ತಿಯನ್ನು ಟರ್ಮಿನಲ್​ನಲ್ಲಿ ಚೆಕಿಂಗ್ ವೇಳೆ ಪತ್ತೆ ಹಚ್ಚಿದ್ದಾರೆ. ಸದ್ಯ ಮಹಿಳೆ ಮತ್ತು ವ್ಯಕ್ತಿ ಸೇರಿ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಕೆಲ ತಿಂಗಳ ಹಿಂದೆ ಇದೇ ರೀತಿ ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 13 ಲಕ್ಷ ಮೌಲ್ಯದ ಚಿನ್ನ ಮತ್ತು ವಿದೇಶಿ ಸಿಗರೇಟ್​ಗಳನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ದುಬೈನಿಂದ ಬಂದಿದ್ದ ಪ್ರಯಾಣಿಕರೊಬ್ಬರು ಫುಡ್ ಪ್ಯಾಕೆಟ್​ಗಳ ರೀತಿಯಲ್ಲಿ ಚಿನ್ನ ಮತ್ತು ಫಾರಿನ್ ಸಿಗರೇಟ್​ಗಳನ್ನು ಸಾಗಿಸುತ್ತಿದ್ದರು. ಲಗೇಜ್ ಸ್ಕ್ಯಾನ್ ಮಾಡಿದ ವೇಳೆ ಅನುಮಾನ ಬಂದು ಪರಿಶೀಲಿಸಿದಾಗ ₹ 13.02 ಲಕ್ಷ ಮೌಲ್ಯದ 165.89 ಗ್ರಾಂ ಚಿನ್ನ ಹಾಗೂ 12 ಸಾವಿರ ಗ್ರಾಂನಷ್ಟು ಸಿಗರೇಟ್ ಪತ್ತೆಯಾಗಿತ್ತು. ಬಳಿಕ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ: ಏರ್​ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ.. 44.98 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ವಶಕ್ಕೆ

(Custom Officers Arrest Two For Illegal Supply of Gold and Cigarette in Kempegowda International Airport Bengaluru)