ಲವ್ ಲೆಟರ್ ಯಾವುದು, ನೋಟಿಸ್ ಯಾವುದು? ಎನ್ನುವ ಜ್ಞಾನ ಇಲ್ಲದವರ ಬಗ್ಗೆ ಏನು ಮಾತಾಡ್ತಿರಾ: ನಳಿನ್ ಕುಮಾರ್ ಕಟೀಲ್

ಹಾದಿ ಬೀದಿಯಲ್ಲಿ ಹೋಗುವವರ ಮಾತಿಗೆ ಪ್ರಾಶಸ್ತ್ಯ ಬೇಡ. ರಾಜ್ಯ ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಶಾಸಕ ಯತ್ನಾಳ್ ಹೇಳಿಕೆಗೆ ನಳೀನ್ ಕುಮಾರ್ ತಿರುಗೆಟು ನೀಡಿದ್ದಾರೆ.

ಲವ್ ಲೆಟರ್ ಯಾವುದು, ನೋಟಿಸ್ ಯಾವುದು? ಎನ್ನುವ ಜ್ಞಾನ ಇಲ್ಲದವರ ಬಗ್ಗೆ ಏನು ಮಾತಾಡ್ತಿರಾ: ನಳಿನ್ ಕುಮಾರ್ ಕಟೀಲ್
ನಳೀನ್ ಕುಮಾರ್ ಕಟೀಲ್
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Apr 12, 2021 | 11:33 AM

ಬಾಗಲಕೋಟೆ: ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಇಲ್ಲ ಏಕೆ ಎಂಬ ಪ್ರಶ್ನೆಗೆ ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್​ ಉತ್ತರಿಸಿದ್ದು, ಯತ್ನಾಳ್​ಗೆ ನೋಟಿಸ್ ಕೊಡಲಾಗಿದೆ ಎಂದು ತಿಳಿಸಿದ್ದಾರೆ. ನಂತರದಲ್ಲಿ ಬಿಜೆಪಿ ಕೊಟ್ಟಿರುವ ನೋಟಿಸ್​ಗೆ ಲವ್ ಲೆಟರ್ ಎಂದು ಯತ್ನಾಳ್​ ಪ್ರತಿಕ್ರಿಯಿಸಿದ್ದಾರೆ. ಅವರಿಗೆ (ಯತ್ನಾಳ್​) ಲವ್ ಲೆಟರ್ ಯಾವುದು? ನೋಟಿಸ್ ಯಾವುದು? ಎನ್ನುವ ಜ್ಞಾನ ಇಲ್ಲ, ಅವರ ಬಗ್ಗೆ ಏನು ಮಾತಾಡ್ತಿರಾ? ಎಂದು ನಳೀನ್‌ ಕುಮಾರ್ ತಿರುಗೇಟು ನೀಡಿದ್ದಾರೆ.

ನನ್ನನ್ನ ಪಕ್ಷದಿಂದ ಹೊರ ಹಾಕೋಕೆ ಆಗಲ್ಲ ಎಂಬ ಯತ್ನಾಳ್​ ಹೇಳಿಕೆ ಬಗ್ಗೆ ಮಾತನಾಡಿದ ನಳಿನ್ ಕುಮಾರ್ ಅವರು ಇದೆಲ್ಲ ರಾಷ್ಟ್ರೀಯ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು. ಉಚ್ಛಾಟನೆ, ಶಿಸ್ತು ಕ್ರಮ ತೆಗೆದುಕೋಳ್ಳಬೇಕಾದರೆ, ನಮ್ಮಲ್ಲಿ ಅದಕ್ಕೊಂದು ಶಿಸ್ತು ಸಮಿತಿ ಇದೆ. ಇದೆಲ್ಲವನ್ನೂ ಆ ಸಮಿತಿ ಅವಲೋಕನ ಮಾಡುತ್ತದೆ. ಈಗಾಗಲೇ ಅದರ ಬಗ್ಗೆ ಅವಲೋಕನ ನಡೆಯುತ್ತಿದೆ. ಈಗ ಯತ್ನಾಳ್​ಗೆ ನೋಟಿಸ್ ನೀಡಲಾಗಿದೆ. ಅದಕ್ಕೆ ಅವರು ಉತ್ತರ‌ ಕೊಟ್ಟಿಲ್ಲ. ಇನ್ನೊಂದು ನೋಟಿಸ್ ಹೋಗುತ್ತೆ. ಇದೆಲ್ಲವೂ ಒಂದು ಪ್ರಕ್ರಿಯೆಯಾಗಿದ್ದು, ಏಕಾಏಕಿ ಏನೂ ಮಾಡುವ ಹಾಗಿಲ್ಲ. ಆ ಪ್ರಕ್ರಿಯೆ ಒಳಗಡೆ ಇನ್ನೊಮ್ಮೆ ಹದ್ದು‌ ಮೀರಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ನಮ್ಮ ಪಕ್ಷದಲ್ಲಿ ಸರ್ವಸಮ್ಮತ ನಾಯಕ. ಇನ್ನು ಎರಡೂವರೆ ವರ್ಷ ಅವರೇ ಮುಖ್ಯಮಂತ್ರಿ ಆಗಿ ಇರುತ್ತಾರೆ. ರಾಜ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾದಿ ಬೀದಿಯಲ್ಲಿ ಹೋಗುವವರ ಮಾತಿಗೆ ಪ್ರಾಶಸ್ತ್ಯ ಬೇಡ. ರಾಜ್ಯ ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಶಾಸಕ ಯತ್ನಾಳ್ ಹೇಳಿಕೆಗೆ ನಳೀನ್ ಕುಮಾರ್ ತಿರುಗೇಟು ನೀಡಿದ್ದಾರೆ.

ಚುನಾವಣೆ ಬಗ್ಗೆ ಮಾತನಾಡಿದ ನಳೀನ್ ಕುಮಾರ್ ರಾಜ್ಯದಲ್ಲಿ ಎರಡು ವಿಧಾನಸಭೆ, ಒಂದು ಲೋಕಸಭೆ ಚುನಾವಣೆ ನಡೆಯುತ್ತಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಗಲಿದೆ. ಮತದಾರರ ಒಲವು ಬಿಜೆಪಿ ಪಕ್ಷದ ಕಡೆಗಿದೆ. ನರೇಂದ್ರ ಮೋದಿ ಆಡಳಿತ, ಅಭಿವೃದ್ಧಿ ಮಂತ್ರ, ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರ ಆಡಳಿತ, ಅತ್ಯುತ್ತಮ ಬಜೆಟ್,‌ ನೆರೆ-ಬರ ನಿರ್ವಹಣೆ ಮಾಡಿದ ರೀತಿ ಇವನೆಲ್ಲಾ ಗಮನಿಸಿರುವ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಲು ಒಲವು ತೋರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐದು ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ. ಪಶ್ಚಿಮ ಬಂಗಾಳ, ಆಸ್ಸಾಂ, ಪಾಂಡಿಚೇರಿಯಲ್ಲಿ ಬಿಜೆಪಿ ಗೆಲ್ಲುತ್ತದೆ. ತಮಿಳುನಾಡು ಹಾಗೂ ಕೇರಳದಲ್ಲಿ, ಬಿಜೆಪಿ ಅಕೌಂಟ್ ಓಪನ್‌ ಮಾಡುತ್ತದೆ. ಕರ್ನಾಟಕದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತದೆ. ಕಾಂಗ್ರೆಸ್ ತಾಕತ್ತಿದ್ದರೆ ಒಂದು ರಾಜ್ಯದಲ್ಲಿ ಗೆಲ್ಲಲಿ ಎಂದು ನಳೀನ್ ಕುಮಾರ್ ಸವಾಲು ಹಾಕಿದ್ದಾರೆ.

ಉಪಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದರೆ ನಾಯಕತ್ವ ಬದಲಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ನಳೀನ್ ಕುಮಾರ್ ಅದಕ್ಕೂ ನಾಯಕತ್ವಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಶಿಸ್ತಿನ ಪಕ್ಷದಲ್ಲಿ ನಾಯಕತ್ವವನ್ನು ಪದೇ ಪದೇ ಪ್ರಶ್ನೆ ಮಾಡೋದು ಬೇಕಿತ್ತಾ ಎಂಬ ಪ್ರಶ್ನೆ ಉದ್ಭವವಾಗಿದ್ದು, ನಮ್ಮ ಪಾರ್ಟಿ ಎಷ್ಟಿದ್ದರೂ ಅದು ಶಿಸ್ತಿನ ಚೌಕಟ್ಟಿನಲ್ಲಿ ಇದೆ. ಶಿಸ್ತು ಇದೆ ಅಂದರು ಪ್ರಜಾಪ್ರಭುತ್ವದ ಕೊರತೆ ಆಗಬಾರದು. ಪ್ರಜಾಪ್ರಭುತ್ವ ಅತಿಯಾದರೆ ಆಗ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಹಾಗಾಗಿ ಶಿಸ್ತು, ಪ್ರಜಾಪ್ರಭುತ್ವ ಮೀರಿದವರಿಗೆ ಪಾರ್ಟಿ ನೋಟಿಸ್ ಕೊಡುವ ಕೆಲಸ ಮಾಡಿದೆ. ಪಾರ್ಟಿಗಳಲ್ಲಿ ಕೆಲವೊಂದು ನಿಯಮಗಳಿವೆ. ನಮ್ಮದು ಪ್ರಜಾಪ್ರಭುತ್ವದ ಸಾಂವಿಧಾನಿಕವಾದ ಪಕ್ಷ. ಬಿ-ಫಾರ್ಮ್ ತೆಗೆದುಕೊಂಡಂತವರಿಗೆ ನೋಟೀಸ್ ಕೊಡುವುದಕ್ಕೆ ಕೆಲವು ನಿಯಮಗಳಿವೆ ಎಂದು ಹೇಳಿದ್ದಾರೆ. ​ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಬಿಜೆಪಿ ಮುಳುಗುತ್ತಿರುವ ಹಡಗು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ನಳೀನ್ ಕುಮಾರ್ ಸಿದ್ದರಾಮಯ್ಯ ಅಧಿಕಾರ ಕಳ್ಕೊಂಡ ಮೇಲೆ, ಸ್ಥಿಮಿತ ಕಳೆದುಕೊಂಡಿದ್ದಾರೆ. ಯಾರೂ ಮುಳುಗೋ ಹಡಗು? ಅವರ ಹಡಗು ತೂತಾಗಿದೆ. ನೀರು ಒಳಗೆ ಬರುತ್ತಿದೆ. ಭಯದಿಂದ ಆ ಹಡಗು ಮುಳುಗಿದೆ ಎಂದು ಹೇಳಿದ್ದಾರೆ. ಆ ಹಡಗನ್ನ ಎತ್ತಲಿಕ್ಕೂ ಜನ ಇಲ್ಲ ಅಲ್ಲಿ. ಸಿದ್ದರಾಮಯ್ಯ ಮುಳುಗುತ್ತಾರಾ ಎಂದು ಡಿಕೆಶಿ ನೋಡುತ್ತಿದ್ದಾರೆ. ಡಿಕೆಶಿ ಮುಳುಗುತ್ತಾರ ಎಂದು ಸಿದ್ದರಾಮಯ್ಯ ನೋಡುತ್ತಿದ್ದಾರೆ‌. ಇಬ್ಬರು ನಾಯಕರು ಆಚೆ -ಈಚೆ ಮುಖಮಾಡಿಕೊಂಡು ಕುಳಿತ್ತಿದ್ದಾರೆ. ಹಡಗು ಎಲ್ಲೆಲ್ಲೋ ಹೋಗುತ್ತಿದೆ ಎಂದು ನಳೀನ್​ ಕುಮಾರ್ ವ್ಯಂಗ್ಯ ಮಾಡಿದ್ದಾರೆ.

( Nalin kumar kateel reaction on yatnal statement in Bagalkot)

ಇದನ್ನೂ ಓದಿ: ಅಮಿತ್ ಶಾ ಅವರ ಪ್ರೇರಣೆಯಂತೆ ಮುಂದೆ ಚುನಾವಣೆ ಗೆಲ್ಲೋಣ: ನಳೀನ್ ಕುಮಾರ್ ಕಟೀಲ್

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ