ಅಮಿತ್ ಶಾ ಅವರ ಪ್ರೇರಣೆಯಂತೆ ಮುಂದೆ ಚುನಾವಣೆ ಗೆಲ್ಲೋಣ: ನಳೀನ್ ಕುಮಾರ್ ಕಟೀಲ್
ತಾ.ಪಂ, ಜಿ.ಪಂ ಎಲೆಕ್ಷನ್‌ನಲ್ಲೂ ಇದೇ ಫಲಿತಾಂಶ ಬರಬೇಕು. ಈ ನಿಟ್ಟಿನಲ್ಲಿ ಅಮಿತ್ ಶಾ ಕೆಲವೊಂದು ಸೂಚನೆ ನೀಡಲಿದ್ದಾರೆ. ಅವರ ಪ್ರೇರಣೆಯಂತೆ ಮುಂದೆ ಚುನಾವಣೆಯಲ್ಲಿ ಗೆಲ್ಲೋಣ ಎಂದಿದ್ದಾರೆ ನಳೀನ್ ಕುಮಾರ್ ಕಟೀಲ್
ಬೆಳಗಾವಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಜನಸೇವಕ ಸಮಾವೇಶದಲ್ಲಿ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಅವರ ಕಾರ್ಯಗಳಿಂದಾಗಿ ಬಿಜೆಪಿ ಬೆಂಬಲಿತ 45 ಸಾವಿರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಫಲಿತಾಂಶದಿಂದ ಹಳ್ಳಿಹಳ್ಳಿಯಲ್ಲೂ ‘ಕೈ’ ಮುಕ್ತ ರಾಜ್ಯವಾಗಿದೆ. ತಾ.ಪಂ, ಜಿ.ಪಂ ಎಲೆಕ್ಷನ್‌ನಲ್ಲೂ ಇದೇ ಫಲಿತಾಂಶ ಬರಬೇಕು. ಈ ನಿಟ್ಟಿನಲ್ಲಿ ಅಮಿತ್ ಶಾ ಕೆಲವೊಂದು ಸೂಚನೆ ನೀಡಲಿದ್ದಾರೆ. ಅವರ ಪ್ರೇರಣೆಯಂತೆ ಮುಂದೆ ಚುನಾವಣೆಯಲ್ಲಿ ಗೆಲ್ಲೋಣ ಎಂದು ಕಟೀಲ್ ಹೇಳಿದ್ದಾರೆ.
ನಮ್ಮವರು ಸರ್ಕಾರದ ವಿರುದ್ಧ ಮಾತನಾಡದಂತೆ ಕೆಲಸ ಮಾಡಿ: ಯಡಿಯೂರಪ್ಪಗೆ ಅಮಿತ್ ಶಾ ಕಿವಿಮಾತು
Published On - 5:47 pm, Sun, 17 January 21