ನಾನು ಗೆದ್ದು ದೆಹಲಿಗೆ ಹೋಗಿ ಮೆರೆಯಬೇಕಿರಲಿಲ್ಲ -ಮಂಡ್ಯ ಸೋಲನ್ನು ಮರೆಯದ ನಿಖಿಲ್ ಕುಮಾರಸ್ವಾಮಿ

ಕಳೆದ ಚುನಾವಣೆಯಲ್ಲಿ ಸೋತಿರೋದರ ಬಗ್ಗೆ ನಂಗೆ ಚಿಂತೆ ಇಲ್ಲ. ನಾನು ಗೆದ್ದು ದೆಹಲಿಗೆ ಹೋಗಿ ಮೆರೆಯಬೇಕಿರಲಿಲ್ಲ ಎಂದು ಜಿಲ್ಲೆಯ ಮಳವಳ್ಳಿಯಲ್ಲಿ JDS​ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ನಾನು ಗೆದ್ದು ದೆಹಲಿಗೆ ಹೋಗಿ ಮೆರೆಯಬೇಕಿರಲಿಲ್ಲ -ಮಂಡ್ಯ ಸೋಲನ್ನು ಮರೆಯದ ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ
Follow us
KUSHAL V
|

Updated on:Jan 17, 2021 | 4:42 PM

ಮಂಡ್ಯ: ಕಳೆದ ಚುನಾವಣೆಯಲ್ಲಿ ಸೋತಿರೋದರ ಬಗ್ಗೆ ನಂಗೆ ಚಿಂತೆ ಇಲ್ಲ. ನಾನು ಗೆದ್ದು ದೆಹಲಿಗೆ ಹೋಗಿ ಮೆರೆಯಬೇಕಿರಲಿಲ್ಲ ಎಂದು ಜಿಲ್ಲೆಯ ಮಳವಳ್ಳಿಯಲ್ಲಿ JDS​ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ, ನಿಖಿಲ್ ತಮ್ಮ ಸೋಲಿನ ಅನುಭವವನ್ನು ಹಂಚಿಕೊಂಡಿದ್ದಾರೆ.

ಗ್ರಾ.ಪಂ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್​ ಜಿಲ್ಲೆಯ ಎಲ್ಲಾ ಶಾಸಕರು ನಾನು ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದ್ರು. ಅವರ ಅಭಿಪ್ರಾಯದ ಪ್ರಕಾರ ನಾನು ಚುನಾವಣೆಗೆ ನಿಂತೆ ಎಂದು ಹೇಳಿದರು.

ಚುನಾವಣೆಯಲ್ಲಿ ಸೋತ ಬಗ್ಗೆ ನಂಗೆ ಚಿಂತೆ ಇಲ್ಲ. ನೀವು ನಾನು ಗೆಲ್ಲುತ್ತೇನೆ ಅಂದುಕೊಂಡಿದ್ರಿ. ಆಗ ನನಗೆ ಜಿಲ್ಲೆಯ ಅಷ್ಟೊಂದು ಸಂಪರ್ಕವಿರಲಿಲ್ಲ. ಹಾಗಂತ, ನನ್ನ ವಿರುದ್ಧ ಚುನಾವಣೆಗೆ ನಿಂತಿದ್ದವರಿಗೂ ಸಹ ಜಿಲ್ಲೆಯ ಜನರ ಅಷ್ಟು ಸಂಪರ್ಕ ಇರಲಿಲ್ಲ. ಕೇವಲ ಕುಮಾರಣ್ಣನವರ ಶಕ್ತಿ ಕುಗ್ಗಿಸಲು ವಿರೋಧಿ ಬಣ ಸೃಷ್ಟಿಯಾದವು ಎಂದು ಸಂಸದೆ ಸುಮಲತಾ ಹೆಸರು ಹೇಳದೆ ನಿಖಿಲ್ ವಾಗ್ದಾಳಿ ನಡೆಸಿದರು.

ಎಲೆಕ್ಷನ್​ನಲ್ಲಿ ನಾನು ಸೋತರೂ ನನಗೆ ಬೇಸರವಿಲ್ಲ. ಚುನಾವಣೆಗೂ ಮೊದಲು ನನಗೆ ಮಂಡ್ಯ ಕ್ಷೇತ್ರದ ಜೊತೆ ಅಷ್ಟೊಂದು ಒಡನಾಟ ಇರಲಿಲ್ಲ. ನಾನು ಗೆದ್ದು ದೆಹಲಿಗೆ ಹೋಗಿ ಮೆರೆಯಬೇಕಿರಲಿಲ್ಲ. ಆದರೆ, ಆ ವಿಚಾರ ಈಗ ಮಾತನಾಡುವುದು ಬೇಡ ಎಂದು ಹೇಳುತ್ತಲೇ ತಮ್ಮ ಸೋಲಿನ ಬಗ್ಗೆ ನಿಖಿಲ್ ಮಾತನಾಡಿದರು.

ನಾನು ಏನೇ ಹೇಳಿದ್ರೂ RSSನವರು ವಿವಾದ ಮಾಡುತ್ತಾರೆ: ಸಿದ್ದರಾಮಯ್ಯ ಬೇಸರ

Published On - 4:29 pm, Sun, 17 January 21