ತಮಿಳುನಾಡಿಗೆ ಮತ್ತೆ ನಿತ್ಯ 3128 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಸಿಡಬ್ಲ್ಯುಆರ್‌ಸಿ ಆದೇಶ
ತಮಿಳುನಾಡಿಗೆ ಮತ್ತೆ ನಿತ್ಯ 1030 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿದೆ. ಡಿಸೆಂಬರ್ ಅಂತ್ಯದವರೆಗೆ ಪ್ರತಿನಿತ್ಯ 3,128 ಕ್ಯೂಸೆಕ್ ನೀರು ಹರಿಸಬೇಕು ಎಂದು ಸೂಚಿಸಿದೆ.
ನವದೆಹಲಿ,( ಡಿಸೆಂಬಬರ್ 19): ತಮಿಳುನಾಡಿಗೆ (Tamil Nadu) ಮತ್ತೆ ಪ್ರತಿನಿತ್ಯ 1030 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ) ಸೂಚಿಸಿದೆ. ಡಿಸೆಂಬರ್ ಅಂತ್ಯದವರೆಗೆ 3,128 ಕ್ಯೂಸೆಕ್ ನೀರು ಹರಿಸಬೇಕು. ಹಾಗೇ ಜನವರಿಯಲ್ಲಿ 1,030 ಕ್ಯೂಸೆಕ್ ನೀರು ಬಿಡಬೇಕು ಎಂದು ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಹೊರಡಿಸಿದೆ.
ಕರ್ನಾಟಕದಲ್ಲಿ ಮಳೆ ಕೊರತೆಯಿಂದ ತೀವ್ರ ಬರಲಾಗ ಆವರಿಸಿದೆ. ಮುಂದೆ ಬರುವ ಬೇಸಿಗೆಗೆ ಜಲಾಶಯಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವ ಸಾಧ್ಯತೆಗಳಿವೆ. ಇಷ್ಟಾದರೂ ಸಹ ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಹೇಳಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಮುಂದುವರಿದ ಭಾರಿ ಮಳೆ: ಮೂವರು ಸಾವು, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಸಿಡಬ್ಲ್ಯುಆರ್‌ಸಿ ಮುಂದೆ ಕರ್ನಾಟಕದ ವಾದ ಹೇಗಿತ್ತು?
- 18-12-2023ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಳಹರಿವಿನ ಕೊರತೆ 52.84 ಪರ್ಸೆಂಟ್ ಇದೆ.
- ತಮಿಳುನಾಡಿನ ಕಾವೇರಿ ಜಲಾಯನ ಪ್ರದೇಶದಲ್ಲಿ ಈಶಾನ್ಯ ಮಾನ್ಯೂನ್ ಖುತುವಿನಲ್ಲಿ ಸಮತೋಲನ ಮಳೆಯನ್ನು ನಿರೀಕ್ಷಿಸಬಹುದು.ಆದ್ದರಿಂದ ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಮಣ್ಣಿನ ತೇವಾಂಶವನ್ನು ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶವು ಹೊಂದಿರುತ್ತದೆ.
- ತಮಿಳುನಾಡಿನ ಕುರುವಾಯಿ ಬೆಳೆ ಡಿಸೆಂಬರ್ ಮೊದಲ ವಾರದ ಅಂತ್ಯದ ವೇಳೆಗೆ ಕಟಾವಾಗಿರುವುದರಿಂದ ಈ ಬೆಳೆಗಳಿಗೆ ನೀರಿನ ಅಗತ್ಯವಿಲ್ಲ.
- ಮಟ್ಟೂರು ಮತ್ತು ಭವಾನಿ ಸಾಗರ ಜಲಾಶಯಗಳು 50.367 ಟಿಎಂಸಿ ಗಮನಾರ್ಹ ಸಂಗ್ರಹವನ್ನು ಹೊಂದಿದೆ. ಇದು ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಾಗಿರುತ್ತದೆ.
- ಕರ್ನಾಟಕದ 4 ಜಲಾಶಯಗಳಿಗೆ ಒಳಹರಿವು ಸ್ಥಗಿತಗೊಂಡಿದ್ದು, ಯಾವುದೇ ಒಳಹರಿವಿನ ನಿರೀಕ್ಷೆಗಳಿಲ್ಲ. ಮತ್ತು ಕರ್ನಾಟಕವು ಪ್ರಸ್ತುತ ಬೆಳೆದಿರುವ ಬೆಳಗಳ ಅವಶ್ಯಕತೆ, ಕುಡಿಯುವ ನೀರಿನ ಅಗತ್ಯತೆ ಮತ್ತು ಕೈಗಾರಿಕಾ ಅಗತ್ಯಾಗಳನ್ನು ಈಗಿನ ನೀರಿನ ಸಂಗ್ರಹಯಿಂದ ನಿರ್ವಹಿಸಲು ಬದ್ಧವಾಗಿದೆ.
- ಅನಿಯಂತ್ರಿಕ ಜಲಾನಯನ ಪ್ರದೇಶದಿಂದ ಉಂಟಾಗುವ ಕೊಡುಗೆಯನ್ನು ಹೊರತುಪಡಿಸಿ ಬಿಳಿಗುಂಡ್ಲು ತಲುಪಲು ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ತನ್ನ ವಾದ ಮಂಡಿಸಿದೆ.ಇನ್ನು ತಮಿಳುನಾಡು, ಕರ್ನಾಟಕವು 14 ಟಿಎಂಸಿ ನೀರು ಬಿಡಬೇಕು ಎಂದು ಒತ್ತಾಯಿಸಿದೆ. ಅಂತಿಮವಾಗಿ ಕಾವೇರಿ ನಿಯಂತ್ರಣ ಸಮಿತಿಯು ಡಿಸೆಂಬರ್ ಅಂತ್ಯದವರೆಗೆ 3128 ಕ್ಯೂಸೆಕ್ ಮತ್ತು ಮುಂದಿನ ವರ್ಷ ಜನವರಿ ಪೂರ್ಣ ಅವಧಿಗೆ ಪ್ರತಿ ದಿನ 1030 ಕ್ಯೂಸೆಕ್ ನೀಡು ಹರಿಸುವಂತೆ ಶಿಫಾರಸು ಮಾಡಿದೆ.
Published On - 2:44 pm, Tue, 19 December 23