ಸಿಡಿ ಬಗ್ಗೆ ಕುಮಾರಸ್ವಾಮಿ ಬಳಿ ಮಾಹಿತಿ ಸಂಗ್ರಹಿಸಿ: ರಮೇಶ್ ಜಾರಕಿಹೊಳಿ ಪ್ರಕರಣದ ಸಮಗ್ರ ತನಿಖೆಗೆ ಡಿ.ಕೆ.ಶಿವಕುಮಾರ್ ಒತ್ತಾಯ

ಘಟನೆ ನಡೆಯಿತಾ ಇಲ್ವಾ? ವೀಡಿಯೋದಲ್ಲಿ ಇದ್ದದ್ದು ಜಾರಕಿಹೊಳಿ ಧ್ವನಿಯಾ? ಅದು ಅವರದೇ ಮನೆಯಾ? ಈ ವಿವರಗಳು ಮೊದಲು ಗೊತ್ತಾಗಬೇಕು. ಹುಡುಗಿಗೆ ಜಾರಕಿಹೊಳಿ ಅವರಿಗೆ ಸಂಬಂಧ ಇತ್ತಾ? ಇಲ್ವಾ? ಈ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರಿ ಆದೇಶ ಆಗಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.

ಸಿಡಿ ಬಗ್ಗೆ ಕುಮಾರಸ್ವಾಮಿ ಬಳಿ ಮಾಹಿತಿ ಸಂಗ್ರಹಿಸಿ: ರಮೇಶ್ ಜಾರಕಿಹೊಳಿ ಪ್ರಕರಣದ ಸಮಗ್ರ ತನಿಖೆಗೆ ಡಿ.ಕೆ.ಶಿವಕುಮಾರ್ ಒತ್ತಾಯ
ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Apr 06, 2022 | 6:52 PM

ಬೆಂಗಳೂರು: ರಮೇಶ್ ಜಾರಕಿಹೊಳಿ ಒಮ್ಮೆ ಸಿಡಿ ನಂದು ಅಲ್ವೇ ಅಲ್ಲ ಅಂತಾರೆ. ಮತ್ತೊಮ್ಮೆ ಸಿಡಿ ವಿಚಾರವಾಗಿ ನಾಲ್ಕು ತಿಂಗಳಿನಿಂದ ಬ್ಲಾಕ್​ಮೇಲ್ ಮಾಡಿದ್ದಾರೆ. ಮೊದಲೇ ಗೊತ್ತಿತ್ತು ಅಂತಾರೆ. ನೂರು ಕೋಟಿಯ ಪ್ರಕರಣ ಅಂತಾರೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಇದು ಐದು ಕೋಟಿ ಡೀಲ್ ಅಂತಾರೆ. ಹಾಗಾದರೆ ನಿಜವಾಗಿಯೂ ಏನಾಗಿದೆ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಸದನದಲ್ಲಿ ಆಡಳಿತ ಪಕ್ಷವನ್ನು ಪ್ರಶ್ನಿಸಿದರು.

ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಇಂದು (ಮಾರ್ಚ್ 22) ಚರ್ಚೆ ನಡೆಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಯಲ್ಲಾಪುರ-ಮುಂಡಗೋಡ ಶಾಸಕ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸಿಡಿ ಕುರಿತು ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಸಿಡಿ ಪ್ರಕರಣ ಸಮಗ್ರವಾಗಿ ತನಿಖೆ ಆಗಬೇಕು ಎಂದು ಹೇಳಿದರು.

ನಾವು ವಿರೋಧಪಕ್ಷದವರಾಗಿ ಈ ಘಟನೆಯನ್ನು ಹಿಂಬಾಲಿಸುತ್ತಿದ್ದೇವೆ. ನಮಗೂ ಬೇಕಾದಷ್ಟು ಮಾಹಿತಿ ಬರುತ್ತೆ. ಹಾಗಾಗಿ, ಗೃಹ ಸಚಿವರಿಗೆ ಒಂದು ಮನವಿ ಮಾಡುತ್ತೇವೆ. ಈ ವೀಡಿಯೋ ನಿಜಾನಾ ಸುಳ್ಳಾ? ಎಡಿಟ್ ಆಗಿದ್ಯಾ ಇಲ್ವಾ? ಎಡಿಟಿಂಗ್ ಟೂಲ್, ಟ್ಯಾಂಪರ್ಡ್ ಮಾಡಲಾಗಿದ್ಯಾ ಇಲ್ವಾ? ಇಷ್ಟು ಮಾಹಿತಿ ತೆಗೆದುಕೊಂಡರೆ ಸಾಕು. ಗೃಹ ಸಚಿವರೇ ಸೈಬರ್ ಕ್ರೈಂ ವಿಭಾಗದಿಂದ ಈ ಕೆಲಸ ಮಾಡಿಸಿ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.

ಪ್ರಕರಣಕ್ಕೆ ಸಂಬಂಧಿಸಿ ಏಕಪಕ್ಷೀಯ ತನಿಖೆ ಆಗಬಾರದು. ಹೆಣ್ಣು ಮಗಳಿಗೆ ಏನು ಅನ್ಯಾಯ ಆಗಿದೆಯಾ ಎಂಬ ವಿವರ ಬೇಕು. ಘಟನೆ ನಡೆಯಿತಾ ಇಲ್ವಾ? ವೀಡಿಯೋದಲ್ಲಿ ಇದ್ದದ್ದು ಜಾರಕಿಹೊಳಿ ಧ್ವನಿಯಾ? ಅದು ಅವರದೇ ಮನೆಯಾ? ಈ ವಿವರಗಳು ಮೊದಲು ಗೊತ್ತಾಗಬೇಕು. ಹುಡುಗಿಗೆ ಜಾರಕಿಹೊಳಿ ಅವರಿಗೆ ಸಂಬಂಧ ಇತ್ತಾ? ಇಲ್ವಾ? ಈ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರಿ ಆದೇಶ ಆಗಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.

ಪ್ರಕರಣದ ಬಗ್ಗೆ ಎಫ್​ಐಆರ್ ಆಗಿಲ್ಲ. ಇದನ್ನು ಗಮನಿಸಬೇಕು. ಜೊತೆಗೆ, ಕುಮಾರಸ್ವಾಮಿ ಬಳಿ ಮಾಹಿತಿ ಸಂಗ್ರಹಿಸಿ. ಅವರೂ ಸಿಡಿ, 5 ಕೋಟಿ ಬಗ್ಗೆ ಬಹಳಷ್ಟು ಮಾತಾಡಿದ್ದಾರೆ. ಸರ್ಕಾರಿ ಆದೇಶ ಮಾಡಿಸಿ ತನಿಖೆ ನಡೆಸಿ ಎಂದು ಶಿವಕುಮಾರ್ ಸರ್ಕಾರವನ್ನು ಕುಟುಕಿದರು.

ಇದನ್ನೂ ಓದಿ: ‘ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ ಪ್ರಕರಣದ ತನಿಖೆಯಾಗಲಿ‘; ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

Published On - 6:12 pm, Mon, 22 March 21

ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್