ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದಿದ್ದ ಕುರಿಗಾಹಿ ಬಾಲಕನ ಜೀವ ಉಳಿಸಿ ತಾನು ಬಲಿಯಾದ 16 ವರ್ಷದ ಬಾಲಕಿ
ಉಯ್ಯಾಲೆ ಆಡುವಾಗಿ ಉಯ್ಯಾಲೆಯ ಸೀರೆ ಉರುಳಾಗಿ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೀರೆ ಉರುಳಾಗಿ 13 ವರ್ಷದ ಬಾಲಕ ಕಿಶೋರ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ: 16 ವರ್ಷದ ಬಾಲಕಿಯೋರ್ವಳು ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದಿದ್ದ ಕುರಿಗಾಹಿ ಬಾಲಕನ ಜೀವ ಉಳಿಸಿ ತಾನು ಬಲಿಯಾದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿಯಲ್ಲಿ ನಡೆದಿದೆ. ಕುರಿಗಾಹಿ ಬಾಲಕನೋರ್ವ ನೀರಿನ ಹೊಂಡದಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರು ಬಿದ್ದಿದ್ದ. ಇದನ್ನು ಗಮನಿಸಿದ ರಾಜಮ್ಮ ಕುರಿಗಾಹಿಯ ಜೀವ ಉಳಿಸಿದ್ದಾಳೆ. ಬಾಲಕನನ್ನು ರಕ್ಷಿಸುವ ಸಂದರ್ಭದಲ್ಲಿ ಬಾಲಕಿ ರಾಜಮ್ಮ ನೀರಿನ ಹೊಂಡದಲ್ಲಿ ಕಾಲು ಜಾರಿ ಬಿದ್ದಿದ್ದಾಳೆ. ಕುರಿಗಾಹಿಯ ಜೀವ ಉಳಿಸಿ ತನ್ನ ಪ್ರಾಣ ಕಳೆದುಕೊಂಡ ಬಾಲಕಿಯ ಕುರಿತು ಗ್ರಾಮಸ್ಥರು ಮಮ್ಮಲ ಮರುಗುತ್ತಿದ್ದಾರೆ. ಗ್ರಾಮಸ್ಥರು ಬಾಲಕಿಯ ಶವವನ್ನು ಹೊರ ತೆಗೆದಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಹಿಟ್ ಆ್ಯಂಡ್ ರನ್ನಲ್ಲಿ ಓರ್ವ ಮೃತ; ಇನ್ನೋರ್ವ ಗಂಭೀರ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಲಾವತ್ತಡ್ಕ ಗ್ರಾಮದಲ್ಲಿ ನಡೆದ ಹಿಟ್ ಆ್ಯಂಡ್ ರನ್ ಘಟನೆಯಲ್ಲಿ ಓರ್ವ ಬಲಿಯಾಗಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಲಾವತ್ತಡ್ಕ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಅಪಘಾತ ಸಂಭವಿಸಿದ್ದು, ಬೈಕ್ ಸವಾರನಿಗೆ ಬಸ್ ಡಿಕ್ಕಿಯಾಗಿ ಸಕಲೇಶಪುರ ಮೂಲದ ಅರುಣ್ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಬೈಕ್ನಲ್ಲಿ ಕುಳಿತಿದ್ದ ಇನ್ನೋರ್ವ ಮೋಹನ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಬಳಿಕ ಬಸ್ ನಿಲ್ಲಿಸದೇ ಬಸ್ ಚಾಲಕ ಪರಾರಿ ಆಗಿದ್ದು, ಪೊಲೀಸ್ ಸಿಬ್ಬಂದಿಗಳು ಚೇಸ್ ಮಾಡಿ ಬಸ್ನ್ನು ವಶಪಡಿಸಿಕೊಂಡಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಉಯ್ಯಾಲೆಯೇ ಉರುಳಾಗಿ ಬಾಲಕ ನಿಧನ ಉಯ್ಯಾಲೆ ಆಡುವಾಗಿ ಉಯ್ಯಾಲೆಯ ಸೀರೆ ಉರುಳಾಗಿ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೀರೆ ಉರುಳಾಗಿ 13 ವರ್ಷದ ಬಾಲಕ ಕಿಶೋರ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
(16 year old girl saves life of a boy one who had fallen in water pond and died in Yadgir)