ಲವ್ ಜಿಹಾದ್ ವಿರುದ್ದ ಧ್ವನಿಯೆತ್ತುವ ಭಜರಂಗದಳದ ಕಾರ್ಯಕರ್ತನನ್ನೇ ವರಿಸಿದ ಮುಸ್ಲಿಂ ಯುವತಿ!

ನವೆಂಬರ್​ 30 ರಂದೇ ಸುರತ್ಕಲ್ ನಿವಾಸಿ ಆಯೇಷಾ ಎಂಬ ಯುವತಿಯ ಜೊತೆ ಪ್ರಶಾಂತ್ ತೆರಳಿದ್ದ ಎಂದು ತಿಳಿದುಬಂದಿದೆ. ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಬಳಿಕ ಜೋಡಿ ಈಗ ವಿವಾಹವಾಗಿದ್ದಾರಂತೆ.

ಲವ್ ಜಿಹಾದ್ ವಿರುದ್ದ ಧ್ವನಿಯೆತ್ತುವ ಭಜರಂಗದಳದ ಕಾರ್ಯಕರ್ತನನ್ನೇ ವರಿಸಿದ ಮುಸ್ಲಿಂ ಯುವತಿ!
ಭಜರಂಗದಳದ ಕಾರ್ಯಕರ್ತನನ್ನೇ ವರಿಸಿದ ಮುಸ್ಲಿಂ ಯುವತಿ!
Edited By: ಸಾಧು ಶ್ರೀನಾಥ್​

Updated on: Dec 08, 2023 | 3:37 PM

ಮಂಗಳೂರು, ಡಿಸಂಬರ್​ 8: ಲವ್ ಜಿಹಾದ್ (Love Jihad) ವಿರುದ್ದ ಧ್ವನಿಯೆತ್ತುವ ಭಜರಂಗದಳದಲ್ಲೇ ಅಂತರ್ಧರ್ಮೀಯ ವಿವಾಹ ಜರುಗಿದೆ. ಮುಸ್ಲಿಂ ಯುವತಿ ಭಜರಂಗದಳದ ಕಾರ್ಯಕರ್ತನನ್ನೇ ವರಿಸಿದ್ದಾಳೆ. ಮಂಗಳೂರಿನ ಸುರತ್ಕಲ್ (Surathkal, Mangalore) ನಲ್ಲಿ ಈ ಹಿಂದೂ-ಮುಸ್ಲಿಂ ಲವ್ ಸ್ಟೋರಿ (Muslim, Hindu) ಘಟಿಸಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ್ ಭಂಡಾರಿ ಎಂಬ ಯುವಕ ಮುಸ್ಲಿಂ ಯುವತಿಯ ಜೊತೆ ವಿವಾಹವಾಗಿದ್ದಾನೆ.

ನವೆಂಬರ್​ 30 ರಂದೇ ಸುರತ್ಕಲ್ ನಿವಾಸಿ ಆಯೇಷಾ ಎಂಬ ಯುವತಿಯ ಜೊತೆ ಪ್ರಶಾಂತ್ ತೆರಳಿದ್ದ ಎಂದು ತಿಳಿದುಬಂದಿದೆ. ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಬಳಿಕ ಜೋಡಿ ಈಗ ವಿವಾಹವಾಗಿದ್ದಾರೆ. ಅಂದಹಾಗೆ ಪ್ರಶಾಂತ್, ಸುರತ್ಕಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದಾನೆ.

ಇದನ್ನೂ ಓದಿ: ಧರ್ಮದ ಎಲ್ಲೆ ದಾಟಿದ ಪ್ರೇಮಕ್ಕೆ ಪೊಲೀಸರಿಂದ ಅಡ್ಡಿ, ಮಧ್ಯೆ ಪ್ರವೇಶಿಸಿದ ಬಜರಂಗ ದಳ -ಠಾಣೆಯಲ್ಲೇ ಮರು ಮದುವೆ ಮಾಡಿಸಿದ ಧಾರವಾಡ ಪೊಲೀಸ್! ​

ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹತ್ಯೆಗೂ ಪ್ರಶಾಂತ್ ಭಂಡಾರಿ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಕಾಲಾಂತರದಲ್ಲಿ ಸುರತ್ಕಲ್ ಮುಸ್ಲಿಂ ಯುವತಿಯನ್ನು ಪ್ರೀತಿಸಿ ವರಿಸಿದ್ದಾನೆ ಪ್ರಶಾಂತ್. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಆಯೇಷಾ ಪೋಷಕರು ಸದ್ಯ ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us