ಮಂಗಳೂರಿನಲ್ಲಿ ಎಂಬಿಬಿಎಸ್ ಸೀಟ್ ಅಕ್ರಮ; ಜಿ.ಆರ್.ಮೆಡಿಕಲ್ ಕಾಲೇಜು ವಿರುದ್ಧ ಗಂಭೀರ ಆರೋಪ

| Updated By: ಆಯೇಷಾ ಬಾನು

Updated on: Aug 13, 2023 | 9:32 AM

MBBS Medical Seat Scam: ಮಂಗಳೂರಿನ ನೀರುಮಾರ್ಗದಲ್ಲಿ ಎರಡು ವರ್ಷಗಳ ಹಿಂದೆ ಜಿ.ಆರ್.ಮೆಡಿಕಲ್ ಕಾಲೇಜು ಆರಂಭವಾಗಿತ್ತು. ಈಗ ಲಕ್ಷಾಂತರ ಶುಲ್ಕ ತೆತ್ತು ಪ್ರವೇಶ ಪಡೆದ 150 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಮಂಗಳೂರಿನಲ್ಲಿ ಎಂಬಿಬಿಎಸ್ ಸೀಟ್ ಅಕ್ರಮ; ಜಿ.ಆರ್.ಮೆಡಿಕಲ್ ಕಾಲೇಜು ವಿರುದ್ಧ ಗಂಭೀರ ಆರೋಪ
ಜಿ.ಆರ್.ಮೆಡಿಕಲ್ ಕಾಲೇಜು
Follow us on

ಮಂಗಳೂರು, ಆ.13: ಜಿಲ್ಲೆಯಲ್ಲಿ ಎಂಬಿಬಿಎಸ್ ಮೆಡಿಕಲ್ ಸೀಟ್(MBBS Medical Seat Scam) ಹೆಸರಿನಲ್ಲಿ ಭಾರೀ ಅಕ್ರಮ ನಡೆದಿದೆ. ಮಂಗಳೂರಿನ ಜಿ.ಆರ್.ಮೆಡಿಕಲ್ ಕಾಲೇಜು(Mangaluru GR Medical College) ಹೆಸರಿನಲ್ಲಿ ಸರ್ಕಾರದ ಅನುಮತಿಯನ್ನೇ ಪಡೆಯದೆ ನೂರಾರು ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಮಾರಾಟ ಮಾಡಿದ ಆರೋಪ ಕೇಳಿ ಬಂದಿದೆ. ಸದ್ಯ ಈಗ ಈ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಸಮಗ್ರ ತನಿಖೆಗೆ ಸೂಚಿಸಿದೆ. ಈ ಪ್ರಕರಣವನ್ನು ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ(Karnataka Government) ಆಯೋಗ ಪತ್ರ ಬರೆದಿದೆ.

ಮಂಗಳೂರಿನ ನೀರುಮಾರ್ಗದಲ್ಲಿ ಎರಡು ವರ್ಷಗಳ ಹಿಂದೆ ಜಿ.ಆರ್.ಮೆಡಿಕಲ್ ಕಾಲೇಜು ಆರಂಭವಾಗಿತ್ತು. ಈಗ ಲಕ್ಷಾಂತರ ಶುಲ್ಕ ತೆತ್ತು ಪ್ರವೇಶ ಪಡೆದ 150 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಅನುಮತಿ‌ ಇಲ್ಲದೇ ಸೀಟು ನೀಡಿರುವುದು ಅಕ್ರಮ ಮತ್ತು ಕಾನೂನು ಬಾಹಿರ ಎಂದು ವರದಿಯಾಗಿದೆ. 2022-23 ಸಾಲಿಯಲ್ಲಿ 150 ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ದಾಖಲಾತಿ ನೀಡಲಾಗಿದೆ. 2021-22ರಲ್ಲಿ ಎಂಎಆರ್ಬಿ ಮೆಡಿಕಲ್ ಕಾಲೇಜು ನಡೆಸಲು ಅನುಮತಿ ನೀಡಿತ್ತು. ಆದರೆ 2022ರ ಸೆಪ್ಟೆಂಬರ್ ನಲ್ಲಿ ಎಂಎಆರ್ಬಿ ತಂಡ ಕಾಲೇಜಿನಲ್ಲಿ ಪರಿಶೀಲನೆ ನಡೆಸಿತ್ತು. ಈ ವೇಳೆ ಕಾಲೇಜಿನಲ್ಲಿ ರಿಸರ್ಚ್ ಸೆಂಟರ್ ಅಗತ್ಯ ಮಾನದಂಡ ಮತ್ತು ನುರಿತ ಸಿಬ್ಬಂದಿ ಇರಲಿಲ್ಲ. ಹೀಗಾಗಿ ಎರಡನೇ ಬ್ಯಾಚ್ ನಲ್ಲಿ ಎಂಬಿಬಿಎಸ್ ದಾಖಲಾತಿಗೆ ಅವಕಾಶ ನೀಡಿರಲಿಲ್ಲ. ಹೀಗಿದ್ದರೂ ಕಾನೂನು ಬಾಹಿರವಾಗಿ 150 ಮಂದಿಗೆ ಸೀಟು ಹಂಚಿಕೆ ಮಾಡಲಾಗಿದೆ. ಕೋಟ್ಯಾಂತರ ರೂ. ಶುಲ್ಕ ಪಡೆದು ಸೀಟು ಹಂಚಿದ್ದಾರೆ.

ಇದನ್ನೂ ಓದಿ: ಮೆಡಿಕಲ್ ಕಾಲೇಜ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಅನಾಥ ಶವಗಳ ಮೇಲೆ ನಡೆಯುತ್ತಿದ್ಯಾ ಹಣ ಮಾಡುವ ದಂಧೆ?

ಆಯೋಗ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಎರಡು ಬಾರಿ ತನಿಖೆಗೆ ಸೂಚಿಸಿದೆ. ಹೀಗಾಗಿ ಇಲಾಖೆ ನಿರ್ಲಕ್ಷ್ಯದ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಪತ್ರ ಬರೆದಿದೆ. ಅನುಮತಿ ರದ್ದತಿ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಜಿ.ಆರ್.ಮೆಡಿಕಲ್ ಕಾಲೇಜು ಆಡಳಿತ ಮೇಲ್ಮನವಿ ಸಲ್ಲಿಸಿದೆ.

ಮಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ