ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷನ ಹತ್ಯೆಗೆ ಸಂಚು ಆರೋಪ: ಪೊಲೀಸ್​ ಕಮಿಷನರ್​ಗೆ ದೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 22, 2022 | 3:20 PM

ಆಗಸ್ಟ್​ 17 ರಂದು 5 ಜನ ನನ್ನನ್ನ ವಿಚಾರಿಸಿಕೊಂಡು ಬಂದಿದ್ದಾರೆ. ನನ್ನ ಮಾಜಿ ಡ್ರೈವರ್ ಮನೆಗೆ ಹೋಗಿ ಬಂದೂಕು ತೋರಿಸಿ ವಿಚಾರಿಸಿದ್ದಾರೆ. ಪ್ರಶ್ನಿಸಿದಾಗ ಸಿಸಿಬಿ ಅಧಿಕಾರಿಗಳು ಎಂದು ಡ್ರೈವರ್ ಬಳಿ ಹೇಳಿಕೊಂಡಿದ್ದಾರೆ. 

ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷನ ಹತ್ಯೆಗೆ ಸಂಚು ಆರೋಪ: ಪೊಲೀಸ್​ ಕಮಿಷನರ್​ಗೆ ದೂರು
ರಾಜ್ಯಾಧ್ಯಕ್ಷ ರಾಜೇಶ್​ ಪವಿತ್ರನ್
Follow us on

ಮಂಗಳೂರು: ಹಿಂದೂ ಮಹಾಸಭಾ (Hindu Mahasabha) ರಾಜ್ಯಧ್ಯಕ್ಷ ರಾಜೇಶ್​ ಪವಿತ್ರನ್​ ಅವರ ಕೊಲೆಗೆ ಸಂಚಿನ ಆರೋಪ ಮಾಡಲಾಗಿದೆ ಎಂದು ಕೊಲೆ ಸಂಚಿನ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿಲಾಗಿದೆ. ಸುರತ್ಕಲ್​ ಪೊಲೀಸ್ ಠಾಣೆಯಲ್ಲೂ ಅಧ್ಯಕ್ಷ ದೂರು ದಾಖಲಿಸಿದ್ದು, ಮಾದ್ಯಮಗಳಿಗೆ ತನ್ನ ಕೊಲೆ ಸಂಚಿನ ಬಗ್ಗೆ ರಾಜೇಶ್ ಮಾಹಿತಿ ನೀಡಿದರು. ಹದಿನೈದು ದಿನಗಳ ಹಿಂದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ರಾಜ್ಯ ಗೃಹ ಇಲಾಖೆಗೂ ಜಿಲ್ಲೆಯಲ್ಲಿ ಹಿಂದೂ ನಾಯಕರ ಕೊಲೆಗೆ ಸಂಚು ನಡೆಯುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ ಆಗಸ್ಟ್​ 17 ರಂದು 5 ಜನ ನನ್ನನ್ನ ವಿಚಾರಿಸಿಕೊಂಡು ಬಂದಿದ್ದಾರೆ. ನನ್ನ ಮಾಜಿ ಡ್ರೈವರ್ ಮನೆಗೆ ಹೋಗಿ ಬಂದೂಕು ತೋರಿಸಿ ವಿಚಾರಿಸಿದ್ದಾರೆ. ಪ್ರಶ್ನಿಸಿದಾಗ ಸಿಸಿಬಿ ಅಧಿಕಾರಿಗಳು ಎಂದು ಡ್ರೈವರ್ ಬಳಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಗಂಡನ ಕುಟುಂಬವನ್ನೇ ಟಾರ್ಗೇಟ್ ಮಾಡಿ, ಮಾನಸಿಕ ಹಿಂಸೆ ಕೊಟ್ಟು ಹಣ ಚಿನ್ನಾಭರಣ ಸಮೇತ ಪತ್ನಿ ಗ್ರೇಟ್​ ಎಸ್ಕೇಪ್!

ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಬಂದವರು ಹಿಂದುಗಳೇ ಆಗಿರುವ ಕಾರಣ ಈ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಬಿಜೆಪಿಯ ಕಿವಿ ಹಿಂಡುವ ಕೆಲಸವನ್ನು ಹಿಂದೂ ಮಹಾಸಭಾ ಮಾಡಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಹಿಂದುತ್ವ ವಿರೋಧಿ ಕೆಲಸ ಮಾಡಿದೆ. ಹೀಗಾಗಿ ಹಿಂದೂ ಮಹಾಸಭಾ ರಾಜಕೀಯ ಪಕ್ಷವಾಗಿ ಚುನಾವಣೆ ಎದುರಿಸುತ್ತಿದೆ. ಈ ಕಾರಣದಿಂದ ಪೊಲೀಸರು ಸೂಕ್ತ ತನಿಖೆಯನ್ನ ನಡೆಸಲು ಆಗ್ರಹಿಸಲಾಗಿದೆ.

ವಿಎಚ್​ಪಿ ಕಾರ್ಯಕರ್ತನಿಗೆ ಜೀವ ಬೆದರಿಕೆ, ಹತ್ಯೆಗೆ ಯತ್ನ

ನಗರದ ವಿಶ್ವ ಹಿಂದೂ ಪರಿಷತ್ (Vishwa Hindu Parishad – VHP) ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿರುವ ದುಷ್ಕರ್ಮಿಗಳು ಹತ್ಯೆಗೂ ಯತ್ನಿಸಿರುವ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ. ಮೂರು ಬಾರಿ ಬೈಕ್​ನಲ್ಲಿ ಕಾರ್ಯಕರ್ತನನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳು ಹತ್ಯೆಗೆ ಯತ್ನಿಸಿದ್ದರು. ಮಾತ್ರವಲ್ಲದೆ, ದೂರವಾಣಿ ಮೂಲಕವೂ ಹಲವು ಬಾರಿ ಜೀವ ಬೆದರಿಕೆ ಹಾಕಿದ್ದರು. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್​​ 506, 507ರ ಅನ್ವಯ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: ಗಣೇಶನ ವಿಸರ್ಜನೆಗೆಂದು ಕೆರೆಯ ಆಳ ತಿಳಿಯಲು ಸ್ನೇಹಿತರ ಜೊತೆ ಹೋದಾಗ ಯುವಕ ನೀರಿನಲ್ಲಿ ಮುಳುಗಿ ಸಾವು

ಮಂಗಳೂರಿನ ಬಜ್ಜೋಡಿ-ಬಿಕರ್ನಕಟ್ಟೆ ರಸ್ತೆಯಲ್ಲಿ ಕಾರು ಹಿಂಬಾಲಿಸಿದ್ದ ದುಷ್ಕರ್ಮಿಗಳು ಆಗಸ್ಟ್ 7ರಂದು ಕಾರಿಗೆ ಬೈಕ್ ತಾಗಿಸಿದ್ದರು. ಅದೇ ದಿನ ರಾತ್ರಿ 11.43ಕ್ಕೆ ಕಾರ್ಯಕರ್ತನಿಗೆ ಕರೆ ಮಾಡಿದ್ದ ಅವರು, ತುಳು ಮಿಶ್ರಿತ ಉರ್ದು ಭಾಷೆಯಲ್ಲಿ ಜೀವ ಬೆದರಿಕೆ ಹಾಕಿದ್ದರು. ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ FIR ದಾಖಲು

‘ಇನಿ ತಪ್ಪಯ ಪಂಡ್​ದ್ ಖುಷಿ ಮಲ್ಪೋಡ್ಚಿ, ಗೊತ್ತುಂಡು, ನನ್ನ ಮೂಜಿ ಜನ ಪಂಪುವೆಲ್ ಡ್ ಉಲ್ಲೆರತ್ತಾ, ಬುಡ್ಪುಜಿ ಯಾನ್, ಕರ್ತಿನ ಬೇನೆ ಉಂಡು’ (ಈ ದಿನ ತಪ್ಪಿಸಿದ್ದಿ ಎಂದು ಖುಷಿ ಪಡಬೇಡ, ಗೊತ್ತಿದೆ. ಇನ್ನೂ ಮೂರು ಜನ ಪಂಪ್​ವೆಲ್​ನಲ್ಲಿ ಇದ್ದಾರೆ. ನಾನು ಬಿಡುವುದಿಲ್ಲ. ಕೊಂದ ನೋವು ಇದೆ) ಎಂದು ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:18 pm, Mon, 22 August 22