ಗಂಡನ ಕುಟುಂಬವನ್ನೇ ಟಾರ್ಗೇಟ್ ಮಾಡಿ, ಮಾನಸಿಕ ಹಿಂಸೆ ಕೊಟ್ಟು ಹಣ ಚಿನ್ನಾಭರಣ ಸಮೇತ ಪತ್ನಿ ಗ್ರೇಟ್​ ಎಸ್ಕೇಪ್!

ಗಂಡನ ಮನೆಯಲ್ಲಿದ್ದ 10 ಲಕ್ಷ ಹಣ, ಚಿನ್ನಾಭರಣ ಹಾಗೂ ಮದುವೆ ಸಮಯದಲ್ಲಿ ಗಂಡನ ಮನೆಯವರು ನೀಡಿದ್ದ ಕೋಟ್ಯಂತರ ರೂ. ಬೆಲೆ ಬಾಳುವ ಡೈಮಂಡ್ ಹಾಗೂ ಚಿನ್ನಾಭರಣ ಸಮೇತ ಎಸ್ಕೇಪ್ ಆಗಿದ್ದಾಳೆ.

ಗಂಡನ ಕುಟುಂಬವನ್ನೇ ಟಾರ್ಗೇಟ್ ಮಾಡಿ, ಮಾನಸಿಕ ಹಿಂಸೆ ಕೊಟ್ಟು ಹಣ ಚಿನ್ನಾಭರಣ ಸಮೇತ ಪತ್ನಿ ಗ್ರೇಟ್​ ಎಸ್ಕೇಪ್!
Follow us
TV9 Web
| Updated By: ಆಯೇಷಾ ಬಾನು

Updated on:Aug 22, 2022 | 3:02 PM

ಬೆಂಗಳೂರು: ಪತಿ ಕುಟುಂಬವನ್ನು ಟಾರ್ಗೇಟ್ ಮಾಡಿ ಮಾನಸಿಕ ಹಿಂಸೆ ಕೊಟ್ಟು ಪತ್ನಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಣದ ಆಸೆಗೋಸ್ಕರ ಮದುವೆಯಾಗಿ ಪತಿ ಕುಟುಂಬಕ್ಕೆ ಟಾರ್ಚರ್ ಕೊಟ್ಟು ಸೊಸೆ ಪರಾರಿಯಾಗಿದ್ದಾಳೆ. ಸೊಸೆಯ ವರ್ತನೆಗೆ ರೋಸಿ ಹೋಗಿದ್ದ ನೊಂದ ಕುಟುಂಬ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದೆ.

ಪದ್ಮನಾಭ ನಗರದ ಕಮಲ ಎಂಬಾಕೆ ತನ್ನ ಮಗನಿಗೆ ಯುವತಿಯೊಬ್ಬಳ ಜೊತೆ ಎಂಗೆಜ್ಮೆಂಟ್ ಫಿಕ್ಸ್ ಮಾಡಿದ್ರು. ಆದ್ರೆ ಕೌಟುಂಬಿಕ ಸಮಸ್ಯೆಯಿಂದ ಎಂಗೆಜ್ಮೆಂಟ್ ಕ್ಯಾನ್ಸಲ್ ಆಗಿತ್ತು. ಹಾಗಾಗಿ ಪರಿಚಿತರು ಕಮಲ ಅವರ ಮಗನಿಗೆ ಬೇರೆ ಹುಡುಗಿ ನೋಡಿ ಗೌತಮಿ ಅನ್ನೋ ಹುಡುಗಿ ಜೊತೆ ಮದುವೆ ಮಾಡಿಸಿದ್ರು. ಮದುವೆಯಾದ ದಿನದಿಂದಲೇ ಪತ್ನಿಯಿಂದ ಕಿರಿಕಿರಿ ಶುರುವಾಗಿದೆ.

ಮದುವೆಯಾದ ಬಳಿಕ ಮಗನ ಜೊತೆ ಸೊಸೆಯನ್ನ ಅಮೆರಿಕಾಗೆ ಕರೆದೊಯ್ಯಲು ಸಿದ್ಧತೆ ನಡೆಸಲಾಗಿತ್ತು. ಗೌತಮಿ ಮದುವೆಗೂ ಮುಂಚೆ ಅಮೆರಿಕಾಗೆ ಹೋಗುವ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದಳು. ಆದ್ರೆ ಮದುವೆಯಾದ ಬಳಿಕ ಫುಲ್ ಯೂ ಟರ್ನ್ ಹೊಡೆದಿದ್ದಾಳೆ. ಮೆಡಿಕಲ್ ವೀಸಾದಲ್ಲಿ ನಿಮ್ಮ ಮಗ ಮಾತ್ರ ಅಮೆರಿಕಾಗೆ ಹೋಗುತ್ತಾನೆ ಎಂದು ಹೇಳಿದ್ದಾಳೆ. ಹೀಗಾಗಿ 50 ಸಾವಿರ ರೂಪಾಯಿ ಖರ್ಚು ಮಾಡಿ ಗೌತಮಿಗೆ ವೀಸಾ ಮಾಡಿಸಿದ್ದಾರೆ. ಅಮೆರಿಕಾಗೆ ತೆರಳಲು 1.25 ಲಕ್ಷ ರೂಪಾಯಿ ವಿಮಾನ ಟಿಕೆಟ್ ಕೂಡ ಬುಕ್ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದ್ದರೂ ಗೌತಮಿ ತನ್ನ ಗಂಡನ ಜೊತೆ ಅಮೆರಿಕಾಗೆ ಹೋಗದೆ ಪತಿಯ ಮನೆಯಲ್ಲಿದ್ದ ಹಣ, ಚಿನ್ನ ಕದ್ದ ಪರಾರಿಯಾಗಿದ್ದಾಳೆ.

ಗಂಡನ ಮನೆಯಲ್ಲಿದ್ದ 10 ಲಕ್ಷ ಹಣ, ಚಿನ್ನಾಭರಣ ಹಾಗೂ ಮದುವೆ ಸಮಯದಲ್ಲಿ ಗಂಡನ ಮನೆಯವರು ನೀಡಿದ್ದ ಕೋಟ್ಯಂತರ ರೂ. ಬೆಲೆ ಬಾಳುವ ಡೈಮಂಡ್ ಹಾಗೂ ಚಿನ್ನಾಭರಣ ಸಮೇತ ಎಸ್ಕೇಪ್ ಆಗಿದ್ದಾಳೆ. ಹೀಗಾಗಿ ಪತಿ ಕುಟುಂಬ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದೆ.

ಗಂಡನಿಗೇ ಬೆದರಿಕೆ ಹಾಕಿದ ಪತ್ನಿ

ಇನ್ನು ಗೌತಮಿ ಹಣ ಒಡವೆ ಕದ್ದು ತಾಯಿ ಮನೆ ಸೇರಿಕೊಂಡಿದ್ದಾಳೆ. ತಾಯಿ ಮನೆಗೆ ಹೋಗಿ ನಾನು ಯಾವುದೇ ಕಾರಣಕ್ಕೂ ಬರಲ್ಲ ಎಂದು ಅವಾಜ್ ಹಾಕಿದ್ದಾಳೆ. ಬಂದ್ರೆ ನೀವೇ ಕಿರುಕುಳ ಕೊಡ್ತೀರಾ ಅಂಥ ಕೇಸ್ ದಾಖಲಿಸ್ತೀನಿ ಅಂಥ ಬೆದರಿಕೆ ಹಾಕಿದ್ದಾಳೆ.

ವರಲಕ್ಷ್ಮೀ ಹಾಗೂ ರವಿಚಂದ್ರನ್ ಎಂಬುವವರು ಈ ಮದುವೆಯನ್ನು ಮಾಡಿಸಿದ್ದಾರೆ. ಹೀಗಾಗಿ ವರಲಕ್ಷ್ಮೀ, ರವಿಚಂದ್ರನ್, ಹರೀಶ್ ಮತ್ತು ಗೌತಮಿ ವಿರುದ್ಧ ಕಮಲ ಕುಟುಂಬ ದೂರು ದಾಖಲಿಸಿದ್ದಾರೆ. ಮದುವೆ ಸಮಯದಲ್ಲಿ ಗೌತಮಿಗೆ 18 ಲಕ್ಷದ 81 ಸಾವಿರ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ಗಂಡನ ಕುಟುಂಬದವರು ನೀಡಿದ್ದರು. 3 ಲಕ್ಷದ 50 ಸಾವಿರ ರೂ. ಬೆಲೆ ಬಾಳುವ ಬಟ್ಟೆ ಕೂಡ ಕೊಡಿಸಿದ್ದರು. ಅಲ್ಲದೆ ಸೊಸೆಯ ವಿದ್ಯಾಭ್ಯಾಸ ಸಲುವಾಗಿ 40.2 ಲಕ್ಷ ಹಣವನ್ನು ವೀಸಾ ಫಂಡ್ ಸಲುವಾಗಿ ಸೇವಿಂಗ್ಸ್ ಖಾತೆ ತೆರೆದು ಹಣ ಟ್ರಾನ್ಸ್ ಫರ್ ಮಾಡಲಾಗಿತ್ತು. ಸದ್ಯ ಬನಶಂಕರಿ ಠಾಣೆ ಪೊಲೀಸರು ಖತರ್ನಾಕ್ ಸೊಸೆಗಾಗಿ ಹುಡುಕಾಡುತ್ತಿದ್ದಾರೆ.

Published On - 3:02 pm, Mon, 22 August 22

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!