ಆಟೋದಲ್ಲಿ ನಿಗೂಢ ಸ್ಪೋಟ: ಪ್ರಯಾಣಿಕ ಬೇರೆಡೆ ಹೋಗಿ ಬಾಂಬ್​ ಬ್ಲಾಸ್ಟ್​​ ಮಾಡುವ ಉದ್ದೇಶ ಹೊಂದಿದ್ದರು – ಎಡಿಜಿಪಿ ಅಲೋಕ್​​ಕುಮಾರ್

| Updated By: Digi Tech Desk

Updated on: Nov 21, 2022 | 11:48 AM

ಮಂಗಳೂರಿನ ಆಟೋ ಪ್ರಯಾಣಿಕರು ಬೇರೆಡೆ ಹೋಗಿ ಬಾಂಬ್​ ಬ್ಲಾಸ್ಟ್​​ ಮಾಡುವ ಉದ್ದೇಶ ಹೊಂದಿದ್ದರು. ಆದರೆ ಆಕಸ್ಮಿಕವಾಗಿ ಆಟೋದಲ್ಲಿ ಬಾಂಬ್​ ಬ್ಲಾಸ್ಟ್​​ ಆಗಿದೆ ಎಂದು ಎಡಿಜಿಪಿ ಅಲೋಕ್​​ಕುಮಾರ್ ಹೇಳಿದ್ದಾರೆ.

ಆಟೋದಲ್ಲಿ ನಿಗೂಢ ಸ್ಪೋಟ: ಪ್ರಯಾಣಿಕ ಬೇರೆಡೆ ಹೋಗಿ ಬಾಂಬ್​ ಬ್ಲಾಸ್ಟ್​​ ಮಾಡುವ ಉದ್ದೇಶ ಹೊಂದಿದ್ದರು - ಎಡಿಜಿಪಿ ಅಲೋಕ್​​ಕುಮಾರ್
ಎಡಿಜಿಪಿ ಅಲೋಕ ಕುಮಾರ್​
Follow us on

ದಕ್ಷಿಣ ಕನ್ನಡ: ಮಂಗಳೂರಿನ ಕಂಕನಾಡಿ ಸಮೀಪ ಆಟೋ ರಿಕ್ಷಾದಲ್ಲಿ ಸಂಭವಿಸಿದ ನಿಗೂಢ ಸ್ಪೋಟಕ್ಕೆ (Mangaluru Auto Blast Case) ಸಂಬಂಧಿಸಿದಂತೆ, ಆಟೋ ಪ್ರಯಾಣಿಕ ಬೇರೆಡೆ ಹೋಗಿ ಬಾಂಬ್​ ಬ್ಲಾಸ್ಟ್​​ ಮಾಡುವ ಉದ್ದೇಶ ಹೊಂದಿದ್ದರು. ಆದರೆ ಆಕಸ್ಮಿಕವಾಗಿ ಆಟೋದಲ್ಲಿ ಬಾಂಬ್​ ಬ್ಲಾಸ್ಟ್​​ ಆಗಿದೆ ಎಂದು ಎಡಿಜಿಪಿ ಅಲೋಕ್​​ಕುಮಾರ್ (ADGP Alok Kumar) ಹೇಳಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ಇರೋದು ಯಾರು ಅನ್ನೋ ಮಾಹಿತಿ ಸಿಕ್ಕಿದೆ. ಶಂಕಿತನಿಗೆ ಲಿಂಕ್​ ಇರುವ ಎಲ್ಲಾ ಸ್ಥಳಕ್ಕೂ ನಮ್ಮ ತಂಡ ಹೋಗಿದೆ. ಶಂಕಿತನ ಗುರುತು ಖಚಿತಪಡಿಸಲು ಅವರ ಸಂಬಂಧಿಕರನ್ನು ಕರೆದಿದ್ದೇವೆ. ಸಂಬಂಧಿಕರು ಗುರುತಿಸಿದ ನಂತರ  ಆರೋಪಿ ಯಾರು ಅಂತ ಖಚಿತಪಡಿಸುತ್ತೇವೆ ಎಂದು ತಿಳಿಸಿದರು.

ಆರೋಪಿಯ ಮುಖದಲ್ಲಿ ಶೇಕಡಾ 45ರಷ್ಟು ಸುಟ್ಟಗಾಯವಾಗಿದೆ. ಮಾತನಾಡುವ ಪರಿಸ್ಥಿತಿಯಲ್ಲಿ ಆರೋಪಿ ಇಲ್ಲ. ಇಂದು (ನ.20) ರಾತ್ರಿ ಅಥವಾ ನಾಳೆವರೆಗು (ನ.21) ವಿಚಾರಣೆ ಮುಂದುವರಿಯಲಿದೆ. ಕೇಂದ್ರದ ಅಧಿಕಾರಿಗಳ ಸಂಪರ್ಕಿವಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಚುರುಕಿನಿಂದ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:29 pm, Sun, 20 November 22