- Kannada News Photo gallery Mangaluru Kannada School Children's Festival Childrens enjoyed the special program Dakshina kannada news in kannada
ಮಂಗಳೂರಿನಲ್ಲಿ ಕನ್ನಡ ಶಾಲಾ ಮಕ್ಕಳ ಹಬ್ಬ: ಕನ್ನಡ ಶಾಲೆ ಉಳಿಸಿ ಬೆಳೆಸುವ ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳ ಮಸ್ತ್ ಮಜಾ
ಕನ್ನಡ ಶಾಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಡಲನಗರಿಯಲ್ಲಿ ವಿಶೇಷ ಮಕ್ಕಳ ಹಬ್ಬ ನಡೆದಿದ್ದು, ಸಂಭ್ರಮದಲ್ಲಿ ಭಾಗಿಯಾದ ಕನ್ನಡ ಶಾಲೆಯ ಮಕ್ಕಳು ಜ್ಞಾನ ಸಂಪಾದನೆಯ ಜೊತೆಗೆ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡಿದ್ದಾರೆ.
Updated on:Nov 21, 2022 | 11:01 AM

Mangaluru Kannada School Children's Festival Childrens enjoyed the special programme Dakshina kannada news in kannada

Mangaluru Kannada School Children's Festival Childrens enjoyed the special programme Dakshina kannada news in kannada

ಕನ್ನಡ ನಾಡಿನ ಇತಿಹಾಸ, ಭಾಷೆ, ಸಾಹಿತ್ಯದ ಮಹತ್ವ, ಮಹನೀಯರ ಚಿಂತನೆಗಳನ್ನು ಒಳಗೊಂಡ ಸಾಕ್ಷ್ಯಚಿತ್ರ ಪ್ರದರ್ಶನ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದರ ಜೊತೆಗೆ ಕುದ್ರೋಳಿ ಗಣೇಶ್ ಅವರ ಜಾದೂ ಪ್ರದರ್ಶನವು ಮಕ್ಕಳ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತು. ವಿದ್ಯಾರ್ಥಿನಿಯರಿಂದ ನಡೆದ ವಿವಿಧ ಕಸರತ್ತುಗಳು ಎಲ್ಲರ ಗಮನ ಸೆಳೆದು ಕನ್ನಡ ಶಾಲೆಯ ಮಕ್ಕಳು ಕೂಡಾ ಯಾವುದಕ್ಕೂ ಕಡಿಮೆಯಿಲ್ಲ ಎಂದು ನಿರೂಪಿಸಿದರು.

ಮಕ್ಕಳ ನೆಚ್ಚಿನ ಹುಲಿವೇಷವೂ ಹಬ್ಬದಲ್ಲಿ ಕಣ್ಮನ ಸೆಳೆಯಿತು. ಒಂದಷ್ಟು ವಿದ್ಯಾರ್ಥಿಗಳು ತಾಸೆಯ ಪೆಟ್ಟಿಗೆ ಹೆಜ್ಜೆ ಹಾಕಿದರು. ಸಮಾವೇಶದಲ್ಲಿ ಆಟದ ಜೊತೆ ಪಾಠಕ್ಕೂ ಮಹತ್ವ ನೀಡಲಾಗಿತ್ತು. ಸಚಿವ ಬಿ.ಸಿ ನಾಗೇಶ್ ಶಿಕ್ಷಕರ ಜೊತೆ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಂವಾದ ನಡೆಸಿದರು. ಬಳಿಕ ಪೋಷಕರ ಜೊತೆ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸಂವಾದ ನಡೆಸಿದರು. ಕನ್ನಡ ಶಾಲೆಯಲ್ಲಿ ಓದಿದವರು ಸ್ಮರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು ಐಎಎಸ್ ಅಧಿಕಾರಿ ನಂದಿನಿ ಮಕ್ಕಳಲ್ಲಿ ಸ್ಪೂರ್ತಿ ತುಂಬಿದರು.

ಹಬ್ಬದಲ್ಲಿ ಕಲ್ಲಡ್ಕದ ಜೋಕರ್ ಸೇರಿದಂತೆ ಅನೇಕ ರೀತಿಯ ಗೊಂಬೆಗಳು ವಿದ್ಯಾರ್ಥಿಗಳನ್ನು ನಕ್ಕುನಲಿಸಿವೆ. ಎರಡನೇ ದಿನ, ಕನ್ನಡ ಎಂದರೆ ನುಡಿ ಅಲ್ಲ ವಿಚಾರದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದು, ಬಳಿಕ ಕನ್ನಡ ಶಾಲಾ ಯಶೋಗಾಥೆ ವಿಚಾರದ ಬಗ್ಗೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ವಿದ್ಯಾರ್ಥಿಗಳು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಸಂಜೆ 3 ಗಂಟೆಗೆ ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಒಟ್ಟಿನಲ್ಲಿ ಕನ್ನಡ ಮಕ್ಕಳ ಶಾಲಾ ಹಬ್ಬ ಮಕ್ಕಳಲ್ಲಿ ಇನ್ನಷ್ಟು ಸ್ಪೂರ್ತಿಯನ್ನು ತುಂಬಿರುವುದರಲ್ಲಿ ಸಂಶಯವಿಲ್ಲ. (ವರದಿ: ಅಶೋಕ್, ಟಿವಿ 9 ಮಂಗಳೂರು)
Published On - 11:00 am, Mon, 21 November 22




