ನೋಡುವಾಗ ನಟ ರಿಷಬ್ ಶೆಟ್ಟಿಯಂತೆ ಕಂಡರೂ ಇವರು ಅವರಲ್ಲ; ಹಾಗಿದ್ರೆ ಯಾರು? ಇಲ್ಲಿದೆ ನೋಡಿ
ಈ ಎರಡು ಫೋಟೋದಲ್ಲಿ ಇರುವವರು ನಟ ರಿಷಬ್ ಶೆಟ್ಟಿ ಅವರಂತೆ ಕಾಣುತ್ತದೆ. ಆದರೆ ಇವರು ಅವರಲ್ಲ, ಹಾಗಿದ್ದರೆ ಉಡುಪಿಯಲ್ಲಿ ಹವಾ ಸೃಷ್ಟಿಸುತ್ತಿರುವ ಈ ವ್ಯಕ್ತಿ ಯಾರು ಎಂಬುದು ಇಲ್ಲಿದೆ ನೋಡಿ.
Udupi man resembling actor Rishab Shetty in Udupi news in kannada
1 / 6
Udupi man resembling actor Rishab Shetty in Udupi news in kannada
2 / 6
ಅಷ್ಟು ಹೇಳಿದ್ದೆ ತಡ ಮುಖಕ್ಕೊಂದು ಗ್ಲಾಸ್ ಹಾಕಿಕೊಂಡು, ಕಾಂತರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಗೆಟಪ್ನಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಕನ್ನಡಿ ಮುಂದೆ ನಿಂತಾಗ ಪ್ರದೀಪ್ಗೂ ತಾನು ಶಿವ ಪಾತ್ರವನ್ನು ಹೋಲುವುದು ಅರಿವಿಗೆ ಬಂತು. ಸ್ನೇಹಿತರ ಒತ್ತಾಯಕ್ಕೆ ಒಂದು ರಿಲ್ಸ್ ಮಾಡಿ ಸೋಶಿಯಲ್ ಮೀಡಿಯಾಗೆ ಬಿಟ್ಟದ್ದೆ ತಡ ಜನ ಇವರನ್ನು ಹುಡುಕಿಕೊಂಡು ಬರಲು ಆರಂಭಿಸಿದ್ದಾರಂತೆ.
3 / 6
ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುವ ಈ ಪ್ರದೀಪ್ ನೋಡಲು ಶಿವ ಕ್ಯಾರೆಕ್ಟರ್ ತರ ಕಾಣುತ್ತಾರೆ ನಿಜ, ಹಾಗಂತ ಇವರಿಗೆ ರಿಷಬ್ ಶೆಟ್ಟರನ್ನು ಮಿಮಿಕ್ ಮಾಡಲು ಸಾಧ್ಯವಿಲ್ಲ. ಸ್ನೇಹಿತರ ಒತ್ತಾಯಕ್ಕೆ ಪ್ರಯತ್ನಿಸಿದ್ದಾರೆ ಅಷ್ಟೆ. ಒಮ್ಮೆಯಾದರೂ ರಿಷಬ್ ಶೆಟ್ರನ್ನ ಭೇಟಿಯಾಗಬೇಕು ಎಂಬ ಕನಸು ಇಟ್ಟುಕೊಂಡಿದ್ದಾರೆ. ಸದ್ಯ ಪ್ರದೀಪ ಹೋದಲೆಲ್ಲ ಜನ ಅಚ್ಚರಿಯಿಂದ ಗುಂಪುಗೂಡುತ್ತಾರೆ. ಮುಂದೆ ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ವತಃ ಪ್ರದೀಪ್ ಹೇಳುತ್ತಿದ್ದಾರೆ.
4 / 6
ಹೀಗೆ ಸೆಲ್ಫಿಗಾಗಿ ಬರುವ ಜನರೊಂದಿಗೆ ಪ್ರದೀಪ್ ಮುಜುಗರ ಪಡುತ್ತಲೇ ಪೋಸ್ ಕೊಡುತ್ತಾರೆ. ಕಾಂತರಾ ಸಿನಿಮಾ ಬಿಡುಗಡೆಯಾಗುವ ಮುಂಚೇನೆ ಇವರ ಬಳಿ ಆರ್ಎಕ್ಸ್ ಹಂಡ್ರೆಡ್ ಬೈಕ್ ಇತ್ತು. ಇಗಂತೂ ಬಿಳಿ ಪಂಚೆ ಉಟ್ಟುಕೊಂಡು ಆರ್ಎಕ್ಸ್ ಹಂಡ್ರೆಡ್ ಬೈಕ್ ಹತ್ತಿದರೆ ಜನ ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಾರೆ.
5 / 6
ಈಗಾಗಲೇ ಜನ ಹಲವು ಕಾರ್ಯಕ್ರಮಗಳಿಗೆ ಪ್ರದೀಪ್ಗೆ ಆಹ್ವಾನ ಕೊಡಲು ಆರಂಭಿಸಿದ್ದಾರೆ. ಶಿವ ಪಾತ್ರ ಹೊಲುವ ನನ್ನನ್ನು ಕಂಡರೆ ಜನ ಇಷ್ಟು ಇಷ್ಟಪಡುವಾಗ ಇನ್ನು ರಿಷಬ್ ಶೆಟ್ರ ಮೇಲೆ ಕನ್ನಡ ಜನತೆಗೆ ಅದೆಂಥ ಪ್ರೀತಿ ಇರಬಹುದು ಅನ್ನೋ ಸಂಗತಿ ಪ್ರದೀಪ್ಗೆ ಶಾಕ್ ಕೊಟ್ಟಿದೆ.