ಆಹ್ವಾನ ಇಲ್ಲದೆಯೂ ರಾಮ ಮಂದಿರಕ್ಕೆ ಬರಬಹುದು, ತಿರಸ್ಕಾರ ಮಾಡೋದು ಅವರಿಗೆ ಬಿಟ್ಟದ್ದು: ಪೇಜಾವರ ಶ್ರೀ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 29, 2023 | 6:47 PM

ಮಂಗಳೂರಿನಲ್ಲಿ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೆ ಕರೆದಿಲ್ಲ ಎನ್ನುವುದು ದೊಡ್ಡ ಆಕ್ಷೇಪ. ಕರೆದ ಮೇಲೆ ನಾವು ತಿರಸ್ಕರಿಸುತ್ತೇವೆ ಎನ್ನುವುದು ದೊಡ್ಡ ಹೆಗ್ಗಳಿಕೆ ಎಂದು ಹೇಳಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ. ಹಾಗಾಗಿ ರಾಜಕೀಯ ಟೀಕೆಗಳಿಗೆ ಉತ್ತರ ಕೊಡುವುದಿಲ್ಲ ಎಂದಿದ್ದಾರೆ. 

ಆಹ್ವಾನ ಇಲ್ಲದೆಯೂ ರಾಮ ಮಂದಿರಕ್ಕೆ ಬರಬಹುದು, ತಿರಸ್ಕಾರ ಮಾಡೋದು ಅವರಿಗೆ ಬಿಟ್ಟದ್ದು: ಪೇಜಾವರ ಶ್ರೀ
ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ
Follow us on

ಮಂಗಳೂರು, ಡಿಸೆಂಬರ್​ 29: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಗೆ ಕರೆದಿಲ್ಲ ಎನ್ನುವುದು ದೊಡ್ಡ ಆಕ್ಷೇಪ. ಕರೆದ ಮೇಲೆ ನಾವು ತಿರಸ್ಕರಿಸುತ್ತೇವೆ ಎನ್ನುವುದು ದೊಡ್ಡ ಹೆಗ್ಗಳಿಕೆ ಎಂದು ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ  (Vishwaprasanna Teertha Swamiji) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಎಡ ಪಕ್ಷಗಳ ಟೀಕೆ ವಿಚಾರವಾಗಿ ಮಾತನಾಡಿದ ಅವರು, ತಿರಸ್ಕಾರ ಮಾಡುವುದು ಅವರಿಗೆ ಬಿಟ್ಟದ್ದು, ವ್ಯಕ್ತಿಗತವಾದ ವಿಚಾರ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ. ಹಾಗಾಗಿ ರಾಜಕೀಯ ಟೀಕೆಗಳಿಗೆ ಉತ್ತರ ಕೊಡುವುದಿಲ್ಲ ಎಂದಿದ್ದಾರೆ.

ರಾಮ ಭಾರತೀಯರೆಲ್ಲರಿಗೂ ಸೇರಿದವನು. ಯಾರಿಗೆ ಬರಬೇಕು ಅಂತಾ ಅಪೇಕ್ಷೆ ಇದೆ ಅವರು ಎಲ್ಲರೂ ಬರಬಹುದು. ಆಹ್ವಾನ ಇಲ್ಲದೆಯೂ ರಾಮ ಮಂದಿರಕ್ಕೆ ಬರಬಹುದು ಎಂದು ಹೇಳಿದ್ದಾರೆ.

ಪ್ರಾತಿನಿಧ್ಯವನ್ನು ಆಧರಿಸಿ ಆಹ್ವಾನ ನೀಡಿದ್ದೇವೆ

ಆಹ್ವಾನ ನೀಡುವಲ್ಲಿ ತಾರತಮ್ಯ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಅಲ್ಲಿರುವ ಸ್ಥಳಾವಕಾಶ ಅಲ್ಪವಾದದ್ದು. ಅಬ್ಬಬ್ಬಾ ಅಂದರೆ ಏಳೆಂಟು ಸಾವಿರ ಜನ ಸೇರಬಹುದು. ಲೋಕದಲ್ಲಿ ಮಹಾತ್ಮರು ಗೌರವಾನಿತ್ವರು ತುಂಬಾ ಮಂದಿ ಇದ್ದಾರೆ. ಯಾರನ್ನು ಕರೆದರೂ ಆಕ್ಷೇಪ ಇರುವಂತಹದ್ದೇ. ಪರಿಸ್ಥಿತಿ ಅವಕಾಶವನ್ನು ಗಮನಿಸಿಕೊಂಡು ಸಮಾಧಾನಪಡಬೇಕು. ಪ್ರಾತಿನಿಧ್ಯವನ್ನು ಆಧರಿಸಿ ಆಹ್ವಾನವನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದೇಶವನ್ನು ಹಿಂದೂ ರಾಷ್ಟ್ರವೆನ್ನುವುದು ತಪ್ಪೆಂದರೆ, ರಾಜ್ಯವನ್ನು ಕರ್ನಾಟಕವೆಂದು ಕರೆಯುವುದು ತಪ್ಪಾಗುತ್ತದೆ: ಪೇಜಾವರ ಶ್ರೀ

ಆಹ್ವಾನ ನೀಡದಿರುವ ಬಗ್ಗೆ ಮಂದಿರ, ಟ್ರಸ್ಟ್, ವ್ಯಕ್ತಿಗೆ ಸ್ವಾರ್ಥ, ಲಾಭ ಯಾವುದೂ ಇಲ್ಲ. ಇದು ಮನುಷ್ಯ ಸಹಜವಾದ ಪ್ರಕ್ರಿಯೆ. ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಎಲ್ಲರೂ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಶಾಂತರಾಗಬೇಕು ಎಂದಿದ್ದಾರೆ.

ಅವರ ಹೇಳಿಕೆ ವ್ಯಕ್ತಿಗತವಾಗಿರುವುದು

ಕಲ್ಲಡ್ಕ ಪ್ರಭಾಕರ್ ವಿರುದ್ಧ ಜಾಮೀನು ರಹಿತ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಒಬ್ಬರ ಕಡೆಯಿಂದ ಏನೂ ತಪ್ಪು ಆಗದಿದ್ದರೂ ತಪ್ಪು ಎಂದು ಭಾರೀ ಪ್ರತಿಭಟನೆ. ಇನ್ನೊಂದು ಕಡೆಯಿಂದ ಏನು ತಪ್ಪು ಆದರೂ ಕಣ್ಮುಚ್ಚಿ, ಬಾಯಿಮಚ್ಚಿ ಇರುವುದು ಇಂತಹ ನಡೆ ಸರಿಯಲ್ಲ. ಅವರ ಹೇಳಿಕೆ ವ್ಯಕ್ತಿಗತವಾಗಿರುವುದು. ನಾನು ಆ ಬಗ್ಗೆ ಯಾವುದೇ ಅಭಿಪ್ರಾಯ ಕೊಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.