ಬಂಟ್ವಾಳ: ದೇಶದ ಅನೇಕ ಕಡೆ ದಾಳಿ ನಡೆಸಿ ಪಿಎಫ್ಐ(PFI) ಮುಖಂಡರನ್ನು ಬಂಧಿಸಲಾಗಿದ್ದು ದಿನದಿಂದ ದಿನಕ್ಕೆ ಪಿಎಫ್ಐ ಸಂಬಂಧ ಅನೇಕ ಸಂಗತಿಗಳು ಬಹಿರಂಗವಾಗುತ್ತಿದೆ. ಇದರ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪಿಎಫ್ಐ ಸಂಘಟನೆ ಪರವಾಗಿ ಕೆಲ ಕಿಡಿಗೇಡಿಗಳು RSSಗೆ ವಾರ್ನಿಂಗ್ ಕೊಟ್ಟಿದ್ದಾರೆ.
‘ಚಡ್ಡಿಗಳೇ ಎಚ್ಚರ, ನಾವು ಮರಳಿ ಬರುತ್ತೇವೆ’ ಎಂದು ಕೆಲ ಕಿಡಿಗೇಡಿಗಳು ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ರಸ್ತೆ ಮೇಲೆ ಬರದು ಆರ್ಎಸ್ಎಸ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಸ್ಥಳೀಯರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಆರಂಭಿಸಿದ್ದಾರೆ. ಬಂಟ್ವಾಳ ಭಾಗದಲ್ಲಿ ಪಿಎಫ್ಐ ಸಂಘಟನೆ ಸಕ್ರಿಯವಾಗಿತ್ತು. ಪಿಎಫ್ಐನಲ್ಲಿ ಸಕ್ರಿಯವಾಗಿದ್ದವರೇ ಎಚ್ಚರಿಕೆ ಬರಹ ಬರೆದಿರೋ ಮಾಹಿತಿ ಇದ್ದು ಸ್ಪ್ರೇ ಪೈಂಟ್ ಬಳಸಿ ತಡರಾತ್ರಿ ರಸ್ತೆಯಲ್ಲಿ ಬರಹ ಬರೆಯಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಆರ್ಥಿಕ ಹಿಂಜರಿತದ ಸಂಕೇತವೇ? ಆಫರ್ ಲೆಟರ್ ಕೊಟ್ಟ ಮೇಲೆ ಉದ್ಯೋಗಕ್ಕೆ ಹೋದಾಗ ನಿಮಗೆ ಅರ್ಹತೆ ಇಲ್ಲ ಎಂದು ಹೊರಗಟ್ಟುತ್ತಿವೆ ಐಟಿ ಕಂಪನಿಗಳು
ಐ ಶ್ರೆಡ್ಡರ್ ಆ್ಯಪ್ ಮೂಲಕ ದಾಖಲೆ ನಾಶ
ಕೆಜಿ ಹಳ್ಳಿ ಪಿಎಫ್ಐ ಕಾರ್ಯಕರ್ತರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಐ ಶ್ರೆಡ್ಡರ್ ಆ್ಯಪ್ ಬಳಸಿ ಒಂದೇ ಒಂದು ಕ್ಲಿಕ್ ಮೂಲಕ ಇಡೀ ದಾಖಲೆ, ಡೇಟಾವನ್ನು ನಾಶ ಮಾಡಲಾಗಿದೆ. ಈ ಆ್ಯಪ್ ಬಳಸಿ ಬಂಧಿತರು ಆರೋಪಿಗಳ ಇಂಟರ್ ಲಿಂಕ್ ನ ದಾಖಲೆ ನಾಶ ಮಾಡಿದ್ದಾರೆ.
ಮೂರು ಹಂತಲ್ಲಿ ದಾಖಲೆ ನಾಶ
ಬಂಧಿತರ ಮೊಬೈಲ್ ರಿಟ್ರಿವ್ ವೇಳೆ ಪೊಲೀಸರಿಗೆ ದೊಡ್ಡ ಲೀಡ್ ಸಿಕ್ಕಿದೆ. ತನಿಖೆ ವೇಳೆ ಸಿಕ್ಕ ಎಲ್ಲಾ ಮೊಬೈಲ್ ಗಳ ಡೇಟಾ ಬಹುತೇಕ ರಿಟ್ರೀವ್ ಮಾಡಲಾಗಿದೆ. ಸದ್ಯ ಸಿಕ್ಕ ಎಲ್ಲಾ ಡೇಟಾಗಳ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಸದ್ಯ ಅಕ್ಟೋಬರ್ 17ರವರೆಗೂ ಆರೋಪಿಗಳು ನ್ಯಾಯಾಂಗ ಬಂಧನ ಹಿನ್ನಲೆ ಈ ಸಮಯದಲ್ಲಿ ಸಂಪೂರ್ಣ ಪೇಪರ್ ವರ್ಕ್ ಮಾಡಲು ಸೂಚಿಸಲಾಗಿದೆ. ಈಗಾಗಲೇ ಪೊಲೀಸರು ಆರೋಪಿಗಳ ಹೇಳಿಕೆ ಪಡೆದಿದ್ದಾರೆ. ಮತ್ತೊಂದೆಡೆ ಸಂಗ್ರಹಿಸಲ್ಪಟ್ಟ ಡೇಟಾಗಳ ಪರಿಶೀಲನೆ ನಡೆಯುತ್ತಿದೆ. ಕೊನೆಗೆ ಹೇಳಿಕೆ ಹಾಗೂ ಡೇಟಾಗಳ ತಾಳೆ ಹಾಕಲಾಗುತ್ತೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:42 am, Tue, 4 October 22