ಆರ್ಥಿಕ ಹಿಂಜರಿತದ ಸಂಕೇತವೇ? ಆಫರ್​ ಲೆಟರ್​ ಕೊಟ್ಟ ಮೇಲೆ ಉದ್ಯೋಗಕ್ಕೆ ಹೋದಾಗ ನಿಮಗೆ ಅರ್ಹತೆ ಇಲ್ಲ ಎಂದು ಹೊರಗಟ್ಟುತ್ತಿವೆ ಐಟಿ ಕಂಪನಿಗಳು

Recession: ವರದಿಗಳ ಪ್ರಕಾರ ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ ಅನೇಕ ಅಭ್ಯರ್ಥಿಗಳಿಗೆ ಉದ್ಯೋಗಗಳನ್ನು ನೀಡಿತು. ಆದರೆ ಅವರನ್ನು ಕಂಪನಿಗೆ ಸೇರಿಸಿಕೊಳ್ಳುವುದಕ್ಕೆ ಹಿಂದೇಟು ಹಾಕಿವೆ. ಗಮನಾರ್ಹವೆಂದರೆ ಅವರಲ್ಲಿ ಹೆಚ್ಚಿನವರು ಫ್ರೆಷರ್‌ಗಳು. ಅಂದರೆ, ತಮ್ಮ ಶಿಕ್ಷಣವನ್ನು ಮುಗಿಸಿದ ತಕ್ಷಣವೇ ನೌಕರಿಗಾಗಿ ಅರ್ಜಿ ಸಲ್ಲಿಸುವವರು. ಉದ್ಯಮದಲ್ಲಿ ಕೆಲಸದಲ್ಲಿ ಅನುಭವವಿಲ್ಲದವರು.

ಆರ್ಥಿಕ ಹಿಂಜರಿತದ ಸಂಕೇತವೇ? ಆಫರ್​ ಲೆಟರ್​ ಕೊಟ್ಟ ಮೇಲೆ ಉದ್ಯೋಗಕ್ಕೆ ಹೋದಾಗ ನಿಮಗೆ ಅರ್ಹತೆ ಇಲ್ಲ ಎಂದು ಹೊರಗಟ್ಟುತ್ತಿವೆ ಐಟಿ ಕಂಪನಿಗಳು
ಆಫರ್​ ಲೆಟರ್​ ಕೊಟ್ಟ ಮೇಲೆ ಉದ್ಯೋಗ ಮಾಡಲು ಹೋದಾಗ ನಿಮಗೆ ಅರ್ಹತೆ ಇಲ್ಲ ಎಂದು ಹೊರಗಟ್ಟುತ್ತಿವೆ ಐಟಿ ಕಂಪನಿಗಳು
Follow us
| Updated By: ಸಾಧು ಶ್ರೀನಾಥ್​

Updated on: Oct 04, 2022 | 11:36 AM

ಟೆಸ್ಟ್​​ ಬರೆದ ಮೇಲೆ ಕೆಲಸ ಕೊಟ್ಟರು, ಆದರೆ ಉದ್ಯೋಗ ಮಾಡಲು ಹೋದಾಗ ನಿಮಗೆ ಅರ್ಹತೆ ಇಲ್ಲ ಎಂದು ಹೊರಗಟ್ಟಿದರು – ಇದು ಐಟಿ ಕಂಪನಿಗಳಲ್ಲಿ ಸದ್ಯದ ಪಾಂಡು. ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾಗಳಂತಹ ದೊಡ್ಡ ದೊಡ್ಡ ಐಟಿ ಕಂಪನಿಗಳು ಅನೇಕ ಫ್ರೆಷರ್‌ಗಳಿಗೆ ಆಫರ್ ಲೆಟರ್‌ಗಳನ್ನು ನೀಡಿ ಅವರ ಉದ್ಯೋಗವನ್ನು ಕಿತ್ತುಕೊಂಡಿವೆ.

ಯೋಚಿಸಿ.. ನಿಮ್ಮ ಕನಸಿನ ಕಂಪನಿಯಲ್ಲಿ ಖಾಲಿ ಹುದ್ದೆಗೆ ನೀವು ಅರ್ಜಿ ಸಲ್ಲಿಸಿದ್ದೀರಿ. ನಿಮ್ಮ CV ಸ್ವೀಕರಿಸುವ ಮೂಲಕ ಕಂಪನಿಯು ನಿಮ್ಮ ಪರೀಕ್ಷೆಯನ್ನು ತೆಗೆದುಕೊಂಡಿತು. ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ. ನಂತರ ಕಂಪನಿಯು ಸಂದರ್ಶನವನ್ನೂ ತೆಗೆದುಕೊಂಡಿತು. ನೀವೂ ಸಂದರ್ಶನದಲ್ಲಿ ತೇರ್ಗಡೆಯಾಗಿದ್ದೀರಿ. ಈ ಎಲ್ಲಾ ಪ್ರಕ್ರಿಯೆಗಳೆಲ್ಲವೂ 3-4 ತಿಂಗಳುಗಳಲ್ಲಿ ಮುಗಿದಿದ್ದವು. ಅಂದರೆ… ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ ಕಂಪನಿಯು ನಿಮಗೆ ಆಫರ್ ಲೆಟರ್ ನೀಡಿದೆ. ನೀವು ಸಂತೋಷವಾಗಿರುತ್ತೀರಿ. ಆದರೆ ಕಂಪನಿಗೆ ಸೇರುವ ಮುನ್ನವೇ ನಿಮಗೆ ಹೇಳುತ್ತದೆ ‘ನೀವು ಈ ಕೆಲಸಕ್ಕೆ ಅರ್ಹರಲ್ಲ. ನಿಮಗೆ ಬೇಕಾದ ಅರ್ಹತೆಗಳಿಲ್ಲ.’ ಮತ್ತು ನಿಮ್ಮಿಂದ ಆಫರ್ ಲೆಟರ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುತ್ತದೆ … ಅದು ನಿಮಗೆ ಎಷ್ಟು ದೊಡ್ಡ ಹೊಡೆತವಾಗಿದೆ.

ಅನೇಕ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಪದವೀಧರರಿಗೆ ಉದ್ಯೋಗ ನೀಡಿ ಕಿತ್ತುಕೊಂಡಿರುವುದು ಇದೇ ರೀತಿಯದ್ದಾಗಿದೆ. ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ ಮುಂತಾದ ದೊಡ್ಡ ಐಟಿ ಕಂಪನಿಗಳು ಇದನ್ನು ಮಾಡುತ್ತಿವೆ. ಹಾಗಾದರೆ ಆಫರ್ ಲೆಟರ್ ಗೆ ಮಾನ್ಯತೆಯೆ ಇಲ್ಲವೇ!?

ವರದಿಗಳ ಪ್ರಕಾರ ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ ಅನೇಕ ಅಭ್ಯರ್ಥಿಗಳಿಗೆ ಉದ್ಯೋಗಗಳನ್ನು ನೀಡಿತು. ಆದರೆ ಅವರನ್ನು ಕಂಪನಿಗೆ ಸೇರಿಸಿಕೊಳ್ಳುವುದಕ್ಕೆ ಹಿಂದೇಟು ಹಾಕಿವೆ. ಗಮನಾರ್ಹವೆಂದರೆ ಅವರಲ್ಲಿ ಹೆಚ್ಚಿನವರು ಫ್ರೆಷರ್‌ಗಳು. ಅಂದರೆ, ತಮ್ಮ ಶಿಕ್ಷಣವನ್ನು ಮುಗಿಸಿದ ತಕ್ಷಣವೇ ನೌಕರಿಗಾಗಿ ಅರ್ಜಿ ಸಲ್ಲಿಸುವವರು. ಉದ್ಯಮದಲ್ಲಿ ಕೆಲಸದಲ್ಲಿ ಅನುಭವವಿಲ್ಲದವರು.

ತಿಂಗಳುಗಳ ಕಾಲ ಹಲವಾರು ಸುತ್ತಿನ ಸಂದರ್ಶನಗಳನ್ನು ಪೂರ್ಣಗೊಳಿಸಿದ ನಂತರ, ಈ ಅಭ್ಯರ್ಥಿಗಳಿಗೆ ಉದ್ಯೋಗ ಪ್ರಸ್ತಾಪ ಪತ್ರಗಳನ್ನು ನೀಡಲಾಗಿತ್ತು. ಆದರೆ ಈಗ ಹೇಳುತ್ತಿರುವುದು- ‘ನೀವು ಉದ್ಯೋಗಕ್ಕೆ ಬೇಕಾದ ಶೈಕ್ಷಣಿಕ ಅರ್ಹತೆ, ಮಾನದಂಡಗಳನ್ನು ಪೂರೈಸುತ್ತಿಲ್ಲ ಎಂದು ತಿಳಿದು ಬಂದಿದೆ. ಆದ್ದರಿಂದ ನಿಮ್ಮ ಆಫರ್ ಲೆಟರ್ ಅಮಾನ್ಯವಾಗಿದೆ ಎಂದು ಘೋಷಿಸಲಾಗಿದೆ.

ಇದು ಆರ್ಥಿಕ ಹಿಂಜರಿತದ ಸಂಕೇತವೇ (Recession)?

ಪ್ರಪಂಚದಾದ್ಯಂತ ಐಟಿ ಉದ್ಯಮದಲ್ಲಿ ಆರ್ಥಿಕ ಹಿಂಜರಿತದ ಬಗ್ಗೆ ಮಾತನಾಡುತ್ತಿರುವಾಗ ಇಂತಹ ವಿದ್ಯಮಾನ ಕಂಡುಬಂದಿದೆ. ಫೇಸ್‌ಬುಕ್, ಗೂಗಲ್, ಮೈಕ್ರೋಸಾಫ್ಟ್, ಆಪಲ್‌ನಂತಹ ದೊಡ್ಡ ಕಂಪನಿಗಳು ನೇಮಕಾತಿಯನ್ನು ಸ್ಥಗಿತಗೊಳಿಸುತ್ತಿವೆ. ಅದೇ ವೇಳೆ, ಅನೇಕ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಕೆಲಸದಿಂದ ವಜಾಗೊಳಿಸುವುದನ್ನು ಸಹ ಮಾಡುತ್ತಿವೆ. ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಕೂಡ ‘ಮುಂದಿನ ವರ್ಷದ ವೇಳೆಗೆ ಕಂಪನಿಯಲ್ಲಿರುವ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ನಮ್ಮ ಯೋಜನೆಯಾಗಿದೆ ಎಂದಿದ್ದಾರೆ.

ಆದಾಗ್ಯೂ, ಇಲ್ಲಿಯವರೆಗೆ ಯಾವುದೇ ಸಂಸ್ಥೆಯು ಆರ್ಥಿಕ ಹಿಂಜರಿತದ ಬಗ್ಗೆ ಔಪಚಾರಿಕವಾಗಿ ಮಾತನಾಡಿಲ್ಲ. ಆದರೆ ಪ್ರಪಂಚದಾದ್ಯಂತದ ಐಟಿ ಕಂಪನಿಗಳು ತಮ್ಮ ನೇಮಕಾತಿಯನ್ನು ನಿಲ್ಲಿಸಿ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿರುವ ರೀತಿಯನ್ನು ನೋಡಿದ ತಜ್ಞರು ಇದನ್ನು ಖಂಡಿತವಾಗಿ ಊಹಿಸಿದ್ದಾರೆ ಎಂದು tv9hindi ವರದಿ ಮಾಡಿದೆ.