ಮಂಗಳೂರಿನ ಉದ್ಯಮಿ, 62 ವರ್ಷದ ಗಂಗಾಧರ್ನನ್ನ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ 22 ವರ್ಷದ ವಿಧವೆ ಮುಸ್ಲಿಂ ಯುವತಿ ಜೊತೆ ಮದುವೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದು ಹಿಂದು ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಗಂಗಾಧರ್ ಪತ್ನಿ ಯಶೋಧಾ ಎಂಬುವವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನ್ನ ಪತಿಯನ್ನು ಕಿಡ್ನ್ಯಾಪ್ ಮಾಡಿ ಮತಾಂತರ ಮಾಡಿ 22 ವರ್ಷದ ಯುವತಿ ಜೊತೆ ಮದುವೆ ಮಾಡಿಸಿದ್ದಾರೆ ಅಂತಾ ದೂರು ನೀಡಿದ್ರು. ಇದು ಕರಾವಳಿಯಾದ್ಯಂತ ಲವ್ ಜಿಹಾದ್ ಅಂತಾ ಸುದ್ದಿಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಈ ಗಂಗಾಧರ್‌ನನ್ನೇ ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ಲವ್ ಜಿಹಾದ್ ಕೇಸ್‌ಗೆ ಟ್ವಸ್ಟ್ ಸಿಕ್ಕಿದೆ.
ಅಸಲಿಗೆ ಈ ಗಂಗಾಧರ್ ಒಬ್ಬ ಹೆಣ್ಣುಬಾಕನಂತೆ. ಮೊದಲ ಪತ್ನಿ ಸೇರಿದಂತೆ 3-4 ಜನ ಹೆಂಡತಿಯರು ಇದ್ದಾರಂತೆ. ಇದ್ರ ಬೆನ್ನಟ್ಟಿದ್ದ ಪೊಲೀಸರಿಗೆ ಎರಡನೇ ಪತ್ನಿಯ ಬಗ್ಗೆ ಗೊತ್ತಾಗಿದೆ. ಹಾಗೇ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ ಅಂತ ಇತ್ತೀಚೆಗೆ ಮದುವೆಯಾದ 22 ವರ್ಷದ ಮುಸ್ಲಿಂ ಯುವತಿ ದೂರು ನೀಡಿದ್ದಾಳೆ. ಇದನ್ನು ಪರಿಶೀಲನೆ ಮಾಡಿದಾಗ ಈತ ಮೂರು ಮದುವೆಯಾಗಿರುವ ಬಗ್ಗೆ ಗೊತ್ತಾಗಿದೆ. ಇನ್ನು ಈತ ಕಿಡ್ನ್ಯಾಪ್ ಆಗಿರಲಿಲ್ಲ. ಮಹಮ್ಮದ್ ಅನೀಸ್ ಅಂತಾ ಪರಿಚಯ ಮಾಡಿಕೊಂಡು, ಬಳಿಕ 22 ವರ್ಷದ ಯುವತಿ ಜೊತೆ ಲೈಂಗಿಕ ಸಂಪರ್ಕ ಬೆಳಸಿ, ಆಕೆ ಗರ್ಭಿಣಿಯಾದಾಗ ಮಗುವನ್ನ ತೆಗೆಸಿರುವುದು ಗೊತ್ತಾಗಿದೆ.
ಇನ್ನು ಇಂಟರೆಸ್ಟಿಂಗ್ ಅಂದ್ರೆ ಈತನಿಗೆ ಮೂರು ಮದುವೆಯಾಗಿರೋ ಬಗ್ಗೆ ಕನ್ಫರ್ಮ್ ಆಗಿದೆ. ಆದ್ರೆ ಪೊಲೀಸರ ಪ್ರಕಾರ ಈತ ನಾಲ್ಕೈದು ಮದುವೆಯಾಗಿದ್ದಾನಂತೆ. ಇನ್ನು ಮೊದಲ ಪತ್ನಿ ಸೇರಿದಂತೆ ಇಬ್ಬರು ಪತ್ನಿಯರಿಗೆ ಐದಾರು ಮಕ್ಕಳು ಇರೋದು ಕೂಡ ಗೊತ್ತಾಗಿದೆ. ಪೊಲೀಸರು ಈತನ ವಂಶವೃಕ್ಷ ತಯಾರಿಸಿ ತನಿಖೆ ಮಾಡುತ್ತಿದ್ದಾರೆ.
ಒಟ್ನಲ್ಲಿ ಲವ್ ಜಿಹಾದ್ ಅಂತ ಕರಾವಳಿಯನ್ನ ಬೆಚ್ಚಿ ಬೀಳಿಸಿದ್ದ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ನಾಲ್ಕೈದು ಮದುವೆ ಆಗಿ ನವರಂಗಿ ಆಟ ಆಡುತ್ತಿದ್ದ ವೃದ್ಧ ಅಂದರ್ ಆಗಿದ್ದಾನೆ.
ಇದನ್ನೂ ಓದಿ:ಉದ್ಯಮಿಯ ಅಪಹರಿಸಿ ಮುಸ್ಲಿಂ ಯುವತಿ ಜೊತೆ ಮದುವೆ; ಮಂಗಳೂರಿನ ಬಿಲ್ಡರ್ ಪತ್ನಿಯಿಂದ ಪೊಲೀಸರಿಗೆ ದೂರು