AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ಪ್ರತ್ಯೇಕ ಅಪಘಾತ; ಲಾರಿ ಮತ್ತು ಬಸ್ ಮಧ್ಯೆ ಡಿಕ್ಕಿ.. ಒಬ್ಬ ಸಜೀವದಹನ, ಮತ್ತೊಬ್ಬನ ಎರಡು ಕಾಲು ಕಟ್

ಎರಡು ಕಡೆ ಪ್ರತ್ಯೇಕ ಅಪಘಾತಗಳು ಸಂಭವಿಸಿವೆ. ಮಂಗಳೂರಿನಲ್ಲಿ ಲಾರಿ ಮತ್ತು ಬಸ್ ಮಧ್ಯೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದ್ದು ಲಾರಿ ಚಾಲಕ ಸಜೀವದಹನ. ಮಾದನಾಯಕನಹಳ್ಳಿ ಬಳಿ ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿಯಾಗಿದ್ದು ಐವರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಅಪಘಾತದಲ್ಲಿ ಓರ್ವ ಪ್ರಯಾಣಿಕನ ಎರಡೂ ಕಾಲುಗಳು ಕಟ್ ಆಗಿವೆ....

ಮೂರು ಪ್ರತ್ಯೇಕ ಅಪಘಾತ; ಲಾರಿ ಮತ್ತು ಬಸ್ ಮಧ್ಯೆ ಡಿಕ್ಕಿ.. ಒಬ್ಬ ಸಜೀವದಹನ, ಮತ್ತೊಬ್ಬನ ಎರಡು ಕಾಲು ಕಟ್
ನೆಲ್ಯಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದ ಅಪಘಾತ ಮತ್ತು ಮಾದನಾಯಕನಹಳ್ಳಿ ಬಳಿ ನಡೆದ ಅಪಘಾತ
ಆಯೇಷಾ ಬಾನು
|

Updated on:Mar 25, 2021 | 1:14 PM

Share

ಮಂಗಳೂರು: ಲಾರಿ ಮತ್ತು ಬಸ್ ಮಧ್ಯೆ ಡಿಕ್ಕಿಯಾಗಿ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಘಟನೆಯಲ್ಲಿ ಲಾರಿ ಚಾಲಕ ಸಜೀವದಹನ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

ನಿನ್ನೆ ತಡರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಗೂಡ್ಸ್ ಲಾರಿ ನಡಯವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಡಿಕ್ಕಿ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಲಾರಿ ಮತ್ತು ಬಸ್ ಸುಟ್ಟುಭಸ್ಮವಾಗಿವೆ. ಅಪಘಾತವಾಗುತ್ತಿದ್ದಂತೆ ಎಚ್ಚೆತ್ತ ಪ್ರಯಾಣಿಕರು ಮತ್ತು ಚಾಲಕ ಬಸ್‌ನಿಂದ ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದ್ರೆ ಲಾರಿಯಿಂದ ಹೊರಬರಲಾರದೆ ಲಾರಿ ಚಾಲಕ ಸಜೀವದಹನವಾಗಿದ್ದಾನೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ, ಐವರಿಗೆ ಗಂಭೀರ ಗಾಯ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿ ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿಯಾಗಿದ್ದು ಐವರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಅಪಘಾತದಲ್ಲಿ ಓರ್ವ ಪ್ರಯಾಣಿಕನ ಎರಡೂ ಕಾಲುಗಳು ಕಟ್ ಆಗಿವೆ. ಗಾಯಾಳುಗಳು ನೆಲಮಂಗಲ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದಿಂದ ಮಾದನಾಯಕನಹಳ್ಳಿ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ನಿಯಂತ್ರಿಸಲು ಸಂಚಾರಿ ಪೋಲಿಸರು ಹರಸಾಹಸ ಪಡುತ್ತಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ಬೆಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿ 25ಜನ ಪ್ರಯಾಣಿಕರಿದ್ದು ಪ್ರಯಾಣಿಕರು ನಾಗರಾಜು (55), ಲಲಿತ (56), ಮಹಮ್ಮದ್ ಗೌಸ್(27) ಚಾಲಕ, ನಿರ್ವಾಹಕ ಸೇರಿ ಐವರಿಗೆ ಗಾಯಗಳಾಗಿವೆ.

ಇಟ್ಟಿಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್​ಗೆ ಲಾರಿ ಡಿಕ್ಕಿಯಾಗಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು ಚಾಲಕನಿಗೆ ಗಾಯಗಳಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 150Aರಲ್ಲಿ ನಡೆದಿದೆ. ರಾಯಾಪುರದ ಕಾರ್ಮಿಕ ಮಲ್ಲಿಕಾರ್ಜುನ(28) ಮೃತ ದುರ್ದೈವಿ. ಗಾಯಾಳು ಚಾಲಕ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೊಳಕಾಲ್ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಮೈಸೂರು ರಿಂಗ್ ರಸ್ತೆ ಅಪಘಾತ ಪ್ರಕರಣ: ಕಾರ್ಯನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪೊಲೀಸ್ ಆಯುಕ್ತರಿಂದ ಪ್ರಶಂಸನಾ ಪತ್ರ

Published On - 8:37 am, Thu, 25 March 21