ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಮುಮ್ತಾಜ್ ಅಲಿ ನಾಪತ್ತೆ ಕೇಸ್​ಗೆ ಬಿಗ್ ಟ್ವಿಸ್ಟ್; ಘಟನೆ ಹಿಂದಿದೆ ಮಹಿಳಾ ಕೈವಾಡ

| Updated By: ಆಯೇಷಾ ಬಾನು

Updated on: Oct 06, 2024 | 3:05 PM

ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ನಾಪತ್ತೆ ಪ್ರಕರಣದಲ್ಲಿ ಮಹಿಳೆ ಕೈವಾಡವಿದೆ ಎನ್ನಲಾಗುತ್ತಿದೆ. ಮದುವೆ ಆಗುವಂತೆ ಮಹಿಳೆ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಅದಕ್ಕೆ ಸುರತ್ಕಲ್ ನ ನಾಲ್ವರು ಸಹಕಾರ ನೀಡಿದ್ದರು ಎನ್ನಲಾಗುತ್ತಿದೆ. ಇನ್ನು ಮಿಸ್ಸಿಂಗ್ ಮಿಸ್ಟರಿ ಹಿಂದೆ ಅದೊಂದು ಮಹಿಳೆ ಕೂಡ ನಾಪತ್ತೆಯಾಗಿದ್ದಾರೆ. ಪೊಲೀಸರು ಆಕೆಯ ಮೊಬೈಲ್ ಟ್ರೇಸ್ ಮಾಡುತ್ತಿದ್ದಾರೆ.

ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಮುಮ್ತಾಜ್ ಅಲಿ ನಾಪತ್ತೆ ಕೇಸ್​ಗೆ ಬಿಗ್ ಟ್ವಿಸ್ಟ್; ಘಟನೆ ಹಿಂದಿದೆ ಮಹಿಳಾ ಕೈವಾಡ
ಮುಮ್ತಾಜ್ ಅಲಿ ಕಾರ್
Follow us on

ಮಂಗಳೂರು, ಅ.06: ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಮುಮ್ತಾಜ್ ಅಲಿ ನಾಪತ್ತೆಯಾಗಿದ್ದಾರೆ (Missing). ಮಂಗಳೂರಿನ ಕುಳೂರಿನ ಸೇತುವೆ ಮೇಲೆ ಮುಮ್ತಾಜ್​ರ KA19 MG0004 ಸಂಖ್ಯೆಯ BMW X5 ಕಾರು ಪತ್ತೆಯಾಗಿದೆ. ನಿನ್ನೆಯಿಂದಲೇ ಮುಮ್ತಾಜ್ ನಾಪತ್ತೆಯಾಗಿ ಕುಟುಂಬದವರು ಆತಂಕದಲ್ಲಿದ್ದಾರೆ. ಸದ್ಯ ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ನಾಪತ್ತೆ ಪ್ರಕರಣದಲ್ಲಿ ಮಹಿಳೆ ಕೈವಾಡವಿದೆ ಎನ್ನಲಾಗುತ್ತಿದೆ.

ಮಹಿಳೆಯಿಂದ ಮುಮ್ತಾಜ್ ಅಲಿಗೆ ನಿರಂತರ ಬ್ಲಾಕ್ ಮೇಲ್ ಆಗುತ್ತಿತ್ತು. ಮದುವೆ ಆಗುವಂತೆ ಮಹಿಳೆ ಬ್ಲಾಕ್ ಮೇಲ್ ಮಾಡುತ್ತಿದ್ದಳು. ಅದಕ್ಕೆ ಸುರತ್ಕಲ್ ನ ನಾಲ್ವರು ಸಹಕಾರ ನೀಡಿದ್ದರು. ಮಸೀದಿ ಕಮಿಟಿ ವಿಚಾರದಲ್ಲಿ ಆ ನಾಲ್ವರಿಗೂ ಮುಮ್ತಾಜ್ ಅಲಿಗೂ ಜಟಾಪಟಿಯಾಗಿತ್ತು. ಹೀಗಾಗಿ ಆ ನಾಲ್ವರು ಆ ಮಹಿಳೆಯ ಪರ ನಿಂತಿದ್ದರು. ವಿಡಿಯೋ ಇಟ್ಟುಕೊಂಡು ಮಹಿಳೆ ಮತ್ತು ಆ ನಾಲ್ವರು ಬ್ಲಾಕ್ ಮೇಲ್ ಮಾಡ್ತಿದ್ದರು. ಇದ್ರಿಂದ ಬೇಸತ್ತು ಮುಮ್ತಾಜ್ ಅಲಿ ಆತ್ಮಹತ್ಯೆಗೆ ಮುಂದಾದ್ರ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಾಯುತ್ತೇನೆಂದು ಮನೆ ಬಿಟ್ಟು ಹೋದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ನಾಪತ್ತೆ: ಕಾರು ಪತ್ತೆ

ಬ್ಲಾಕ್ ಮೇಲೆ ಮಾಡ್ತಿದ್ದ ಮಹಿಳೆ ಕೂಡ ನಾಪತ್ತೆ

ಇನ್ನು ಮಿಸ್ಸಿಂಗ್ ಮಿಸ್ಟರಿ ಹಿಂದೆ ಅದೊಂದು ಮಹಿಳೆ ಕೂಡ ನಾಪತ್ತೆಯಾಗಿದ್ದಾರೆ. ಪೊಲೀಸರು ಆಕೆಯ ಮೊಬೈಲ್ ಟ್ರೇಸ್ ಮಾಡುತ್ತಿದ್ದಾರೆ. ಕೇರಳದವರೆಗೂ ಆ ಮಹಿಳೆಯ ಫೋನ್ ಆನ್ ಆಗಿತ್ತು. ಕೇರಳದಲ್ಲಿ ಆಕೆಯ ಫೋನ್ ಸ್ವಿಚ್ಡ್ ಆಫ್ ಆಗಿದೆ. ಸುರತ್ಕಲ್​ನ ಕೃಷ್ಣಾಪುರ ನಿವಾಸಿಯಾಗಿದ್ದ ಆ ಮಹಿಳೆ ಮುಮ್ತಾಜ್ ಅಲಿ ನಾಪತ್ತೆಯಾಗುತ್ತಿದ್ದಂತೆ ಕೇರಳಕ್ಕೆ ಎಸ್ಕೇಪ್ ಆಗಿದ್ದಾಳೆ. ಇತ್ತ ಆ ನಾಲ್ವರು ಯುವಕರ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ಮುಮ್ತಾಜ್ ಅಲಿ ಸಾವು ಕನ್ಫರ್ಮ್ ಆದ್ರೆ ಅವರನ್ನು ವಶಕ್ಕೆ ಪಡೆಯಲು ಸಿದ್ದತೆ ನಡೆಯುತ್ತಿದೆ.

ಮತ್ತೊಂದೆಡೆ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಒಂದು ಹಂತದ ಹುಡುಕಾಟ ನಡೆಸಿದ್ದಾಗಿದೆ. ಸದ್ಯಕ್ಕೆ ನೂರು ಮೀಟರ್ ಸುತ್ತಾ ಹುಡುಕಾಟ ನಡೆಸಲಾಗಿದೆ. ಬ್ರಿಜ್ಡ್ ಆಳಕ್ಕೆ ಇಳಿದು ಹುಡುಕಾಟ ನಡೆಸಿದ್ದೇವೆ. ಸೇತುವೆ ಕಮಾಗಾರಿ ನಡೆಯುತ್ತಿದ್ದು ಕೆಳಗೆ ಕಬ್ಬಿಣದ ಸರಳು, ಚೀಲಗಳಿವೆ. ಕೆಳಗೆ ಕತ್ತಲೆ ಇರೋದ್ರಿಂದ ಕಾರ್ಯಾಚರಣೆಗೆ ತೊಡಕಾಗಿದೆ. ಇಲ್ಲಿ ಬಿದ್ದಿದ್ದರೆ ಇಲ್ಲೇ ಸಿಗಬೇಕು, ಇಷ್ಟು ಬೇಗ ಸಮುದ್ರ ಸೇರೋದಿಲ್ಲ. ಎಲ್ಲಾ ತಂಡಗಳು ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸಿದ್ದೇವೆ ಎಂದು ಈಶ್ವರ್ ಮಲ್ಪೆ ಅವರು ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ