ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು ಬಡವರಿಗೆ ಸೂರಿನ ಆಸರೆ ಕಲ್ಪಿಸುತ್ತಿದ್ದಾರೆ, ಬಿರುವೆರ್ ಕುಡ್ಲ ಸಂಘಟನೆ ಸುಸಜ್ಜಿತ 7ನೇ ಮನೆ ನಿರ್ಮಿಸಿಕೊಟ್ಟಿತು!

Biruver Kudla organization: ಬಿರುವೆರ್ ಕುಡ್ಲ ಸಂಘಟನೆ - 8 ವರ್ಷದಲ್ಲಿ 8 ಕೋಟಿಗೂ ಹೆಚ್ಚು ಹಣವನ್ನು ಅಶಕ್ತ ಕುಟುಂಬಗಳ ಸಹಾಯಕ್ಕಾಗಿ ನೀಡಿದೆ.

ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು ಬಡವರಿಗೆ ಸೂರಿನ ಆಸರೆ ಕಲ್ಪಿಸುತ್ತಿದ್ದಾರೆ, ಬಿರುವೆರ್ ಕುಡ್ಲ ಸಂಘಟನೆ ಸುಸಜ್ಜಿತ 7ನೇ ಮನೆ ನಿರ್ಮಿಸಿಕೊಟ್ಟಿತು!
ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು ಬಡವರಿಗೆ ಸೂರಿನ ಆಸರೆ ಕಲ್ಪಿಸುತ್ತಿದ್ದಾರೆ!
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ಸಾಧು ಶ್ರೀನಾಥ್​

Updated on: Jun 27, 2023 | 12:49 PM

ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ ಕಟ್ಟಿಕೊಟ್ಟು ಆಸರೆಯಾಗುತ್ತಿದೆ. ಇದೀಗ ಮಹಾಸೇವಾ ಯೋಜನೆಯ ಅಡಿ ಏಳನೇ ನೂತನ ಮನೆಯನ್ನು ಬಡ ಕುಟಂಬಕ್ಕೆ ಹಸ್ತಾಂತರಿಸಿ ಸಾರ್ಥಕತೆ ಮೆರೆದಿದೆ. ಹೌದು..ನಮ್ಮನ್ನಾಳುವ ಸರ್ಕಾರಗಳು ಎಷ್ಟೇ ಯೋಜನೆಗಳನ್ನು ಜಾರಿಗೊಳಿಸಿದ್ರು ಇಂದಿಗೂ ಸಹ ಸರಿಯಾದ ಸೂರು ಇಲ್ಲದ ಅದೆಷ್ಟೋ ಕುಟಂಬಗಳು ನಮ್ಮ ಜಿಲ್ಲೆ, ರಾಜ್ಯ, ದೇಶದಲ್ಲಿವೆ. ಆದ್ರೆ ಸರ್ಕಾರದ ಯೋಜನೆಗಳಿಗೆ ಕಾಯದೆ ಸಮಾಜದಲ್ಲಿರುವ ಅಶಕ್ತರ ಬಾಳಲ್ಲಿ ಬೆಳಕು ಮೂಡಿಸುವ ಕೆಲಸವನ್ನು ಮಂಗಳೂರಿನ ಯುವಕರ ತಂಡವೊಂದು ಮಾಡುತ್ತಿದೆ. ಬಿರುವೆರ್ ಕುಡ್ಲ ಎಂಬ ಹೆಸರಿನ ಸಂಘಟನೆಯ (Biruver Kudla organization) ಯುವಕರು ಇಂದೋ ನಾಳೆಯೋ ಕುಸಿದು ಬೀಳುವ ಸ್ಥಿತಿಯಲ್ಲಿರುವ ಮನೆಯ ಕುಟುಂಬಗಳಿಗೆ ಮನೆ ಕಟ್ಟಿಕೊಟ್ಟು ಆಸರೆಯಾಗುತ್ತಿದೆ.

ಇದೀಗ ಮಂಗಳೂರು ಹೊರವಲಯದ (Mangalore outskirts) ಬಜಪೆ ಸಮೀಪದ ಮುಂಡಬೆಟ್ಟು (Mundabettu) ಎಂಬಲ್ಲಿ ಬಡಕುಟುಂಬವೊಂದಕ್ಕೆ ಸುಮಾರು 12 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಟ್ಟಿದೆ. ದಯಾನಂದ ಬಂಗೇರ ಕುಟಂಬವು ಕಡು ಬಡತನದಲ್ಲಿ ಜೀವನ ಸಾಗಿಸುತ್ತಿತ್ತು. ವಾಸಿಸಲು ಯೋಗ್ಯವಾದ ಮನೆಯಿಲ್ಲದೆ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಇದೀಗ ಅವರ ಕಷ್ಟಕ್ಕೆ ನೆರವಾಗಿರುವ ಬಿರುವೆರ್ ಕುಡ್ಲ ಬಜಪೆ ಘಟಕ ನೂತನ ಮನೆಯನ್ನು ನಿರ್ಮಿಸಿ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಿದೆ.

ಈ ಬಿರುವೆರ್ ಕುಡ್ಲ ಸಂಘಟನೆಯಲ್ಲಿ ನಿತ್ಯದ, ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರಿಂದ ಹಿಡಿದು ಸಣ್ಣಪುಟ್ಟ ಉದ್ಯಮ ನಡೆಸುವ ಯುವಕರು ಇದ್ದಾರೆ. ಎಂಟು ವರ್ಷದ ಹಿಂದೆ ಆರಂಭಿಸಲಾದ ಈ ಸಂಘಟನೆ ಅದೆಷ್ಟೋ ಕುಟುಂಬಗಳ ಕಣ್ಣೀರು ಒರೆಸಿದೆ. ಈಗಾಗಲೇ ನಗರ ಹೊರವಲಯದ ಮುಡಿಪು ಸಮೀಪ ಬೀಳುವ ಸ್ಥಿತಿಯಲ್ಲಿದ್ದ ಮನೆಯನ್ನು ಕೆಡವಿ ನೂತನ ಮನೆಯ ನಿರ್ಮಾಣ ಕಾರ್ಯ ಮಾಡುತ್ತಿದೆ.

ಒಟ್ಟು ಎಂಟು ವರ್ಷದಲ್ಲಿ ಎಂಟು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಅಶಕ್ತ ಕುಟುಂಬಗಳ ಸಹಾಯಕ್ಕಾಗಿ ನೀಡಿದೆ. ಕೇವಲ ಮನೆ ನಿರ್ಮಾಣ ಮಾತ್ರವಲ್ಲದೆ ಪ್ರತಿ ತಿಂಗಳು ಒಬ್ಬೊಬ್ಬ ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ 50 ಸಾವಿರ ಧನ ಸಹಾಯ ನೀಡುತ್ತಾ ಬಂದಿದೆ. ಇದರ ಜೊತೆ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ಈ ಸಂಘಟನೆಯಲ್ಲಿ ಮೂರು ಜಿಲ್ಲೆಯಲ್ಲಿ ಒಟ್ಟು 24 ಘಟಕಗಳಿದ್ದು ಇದರ ಸದಸ್ಯರೆಲ್ಲಾ ಒಟ್ಟು ಸೇರಿ ಸೇವಾ ಯೋಜನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶದಡಿ ಈ ಯುವಕರ ತಂಡ ಸೇವೆ ಮಾಡುತ್ತಿದೆ. ತಮ್ಮ ಮನೆಯಲ್ಲಿ ಸರಿಯಾದ ಸೌಕರ್ಯವಿಲ್ಲದಿದ್ದರೂ ಸಹ ಎಲ್ಲರೂ ಒಟ್ಟು ಸೇರಿ ತಮಗಿಂತಲೂ ಕೆಳ ಹಂತದಲ್ಲಿರುವ ಬಡವರ ಕಣ್ಣೀರ ಒರೆಸುವ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಸಂಘಟನೆ ಮಾಡುತ್ತಿರುವ ಈ ಸೇವಾ ಕಾರ್ಯ ಇತರರಿಗೂ ಮಾದರಿಯಾಗಿ ಇನ್ನಷ್ಟು ಮಂದಿ ಅಶಕ್ತರ ಬಾಳಿಗೆ ಬೆಳಕಾಗಲಿ ಎಂಬುದೇ ನಮ್ಮ ಆಶಯ.

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್