ಮಂಗಳೂರು: ಮಂಗಳೂರು ಹೊರವಲಯದ ತೊಕ್ಕಟ್ಟು ಜಂಕ್ಷನ್ ನಲ್ಲಿ ಬ್ಯಾರಿ ಭವನ ಶಿಲಾನ್ಯಾಸಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಅಬ್ಬಕ್ಕ ಭವನ ವಿಳಂಬ ಹಿನ್ನೆಲೆ ಈ ಶಿಲನ್ಯಾಸಕ್ಕೆ ವಿರೋಧ ವ್ಯಕ್ತವಾಗಿದೆ. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಅಭಿಮಾನಿಗಳಿಂದ ಈ ವಿರೋಧ ವ್ಯಕ್ತವಾಗಿದೆ. ಬಿಜೆಪಿ- ಹಿಂದೂ ಸಂಘಟನೆ ಕಾರ್ಯಕರ್ತರು ಶಿಲನ್ಯಾಸಕ್ಕೆ ವಿರೋಧ ತೋರಿದ್ದಾರೆ. ಸ್ಥಳೀಯ ಶಾಸಕ ಯು.ಟಿ. ಖಾದರ್ ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆದಿದೆ.
ಬಿಜೆಪಿ ಸರಕಾರವೇ ಇರುವಾಗ ಬಿಜೆಪಿ ಕಾರ್ಯಕರ್ತರೇ ಸೇರಿಕೊಂಡು ಪ್ರತಿಭಟಿಸುತ್ತಿರುವುದು ಹಾಸ್ಯಾಸ್ಪದ. ಪ್ರತಿಭಟಿಸುವ ಬದಲು, ತಮ್ಮ ಸರಕಾರದ ಮೂಲಕ ಯೋಜನೆಯನ್ನು ನಿಲ್ಲಿಸಬಹುದಲ್ಲವಾ? ಅಂತಾ ಶಾಸಕ ಯು.ಟಿ ಖಾದರ್ ಲೇವಡಿ ಮಾಡಿದ್ದಾರೆ. ಶಿಲನ್ಯಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯಿತ್ತು.
ಮಸ್ಕಿಯಲ್ಲಿ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಬೆಂಗಳೂರಿನಿಂದ ಮಸ್ಕಿಗೆ ತೆರಳಿ ಕೊಂದಿದ್ದ ಆರೋಪಿ!
ರಾಯಚೂರು: ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಶುಕ್ರವಾರ ಸಂಜೆ ನಡೆದಿದ್ದ 9ನೇ ತರಗತಿಯ ವಿದ್ಯಾರ್ಥಿನಿ ಭೂಮಿಕಾ (15) ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮದುವೆಯಾಗುವುದಕ್ಕೆ ನಿರಾಕರಿಸಿದ ಹಿನ್ನೆಲೆ ಸೋದರತ್ತೆಯ ಪುತ್ರಿ ಭೂಮಿಕಾಗೆ ಚಾಕು ಇರಿದು ರಮೇಶ್ (28) ಎಂಬಾತ ಹತ್ಯೆಗೈದಿದ್ದಾನೆ. ನಿರ್ಜನ ಪ್ರದೇಶಕ್ಕೆ ಭೂಮಿಕಾಳನ್ನು ಕರೆದೊಯ್ದು ಕಿರುಕುಳ ನೀಡಿ ಹತ್ಯೆ ಮಾಡಿದ್ದಾನೆ.
ಸೋದರ ಅತ್ತೆ ಮಗಳಾಗಿದ್ದ ಭೂಮಿಕಾಳನ್ನು ಆರೋಪಿ ರಮೇಶ್ ಕಳೆದೊಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ. ಈ ಮಧ್ಯೆ ರಮೇಶ್ ಜೊತೆ ಭೂಮಿಕಾಳ ಮದುವೆಗೆ ನಿರಾಕರಣೆ ಕೇಳಿಬಂದಿದೆ. ಸಗೋತ್ರದ ನೆಪ ಹೇಳಿ ಭೂಮಿಕಾ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದರು. ನಿನ್ನೆ ಬೆಂಗಳೂರಿನಿಂದ ಮಸ್ಕಿಗೆ ಬಂದಿದ್ದ ರಮೇಶ ಶಾಲೆಗೆ ಹೋಗಿದ್ದ ಭೂಮಿಕಾಳನ್ನು ಕರೆದು ತರ್ತಿನಿ ಅಂತಾ ಹೋಗಿದ್ದ. ಆಗ ಭೂಮಿಕಾಳನ್ನು ಗಿಡಗಂಟೆಗಳಿರುವ ಪ್ರದೇಶಕ್ಕೆ ಕರೆದೊಯ್ದು ಟಾರ್ಚರ್ ಮಾಡಿ, ಮದುವೆಯಾಗುವಂತೆ ಪೀಡಿಸಿದ್ದಾನೆ. ಬಳಿಕ ಚಾಕುವಿನಿಂದ ಇರಿದಿದ್ದಾನೆ. ನಿರ್ಜನ ಪ್ರದೇಶದಿಂದ ಮುಖ್ಯ ರಸ್ತೆಗೆ ಓಡಿ ಬಂದು ಒದ್ದಾಡಿ ಪ್ರಾಣಬಿಟ್ಟಿದ್ದಳು ಭೂಮಿಕಾ. ಈ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ್ಯಸಿಡ್ ಕುಡಿಸಿ ರಾಡ್‌ನಿಂದ ಹೊಡೆದು ಅಕ್ಕಸಾಲಿಗನ ಕೊಲೆ
ಕಲಬುರಗಿ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾವೂರ್ ಕ್ರಾಸ್ ಬಳಿ ಅಕ್ಕಸಾಲಿಗರೊಬ್ಬರಿಗೆ ಆ್ಯಸಿಡ್ ಕುಡಿಸಿ, ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ. ಕಲಬುರಗಿಯ ಶಹಬಜಾರ್ ಕಬಾಡ್ ಗಲ್ಲಿ ನಿವಾಸಿ ವಿಜಯಕುಮಾರ್ ಶಿಲವಂತ (38) ಹತ್ಯೆಗೀಡಾದವರು. ಶುಕ್ರವಾರ ಮಧ್ಯಾಹ್ನ ವಿಜಯಕುಮಾರ್ ಚಿನ್ನಾಭರಣ ತರಲು ಹಲಕರ್ಟಿ ಗ್ರಾಮಕ್ಕೆ ಹೋಗಿದ್ದರು.
ಈ ವೇಳೆ ದುಷ್ಕರ್ಮಿಗಳು ವಿಜಯಕುಮಾರ್ರನ್ನು ಅಡ್ಡಗಟ್ಟಿ ಹಣ ದೋಚಿದ್ದಾರೆ. ಹಣ ದೋಚಿದ್ದೂ ಅಲ್ಲದೆ, ಅವರಿಗೆ ಆ್ಯಸಿಡ್ ಕುಡಿಸಿ, ರಾಡ್‌ನಿಂದ ಹೊಡೆದು ಪರಾರಿಯಾಗಿದ್ದಾರೆ. ಆದರೆ ಸ್ಥಳೀಯರು ವಿಜಯಕುಮಾರ್ರನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ವಿಜಯಕುಮಾರ್ ಕೊನೆಯುಸಿರೆಳೆದಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
Online cheating: ಒಟಿಪಿ ಪಡೆದು ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುತ್ತಿದ್ದ ಖತರ್ನಾಕ್ ಆಸಾಮಿಗಳು ಅರೆಸ್ಟ್
Published On - 1:26 pm, Sat, 26 February 22