ಪ್ರೇಮ ವೈಫಲ್ಯ ಹಿನ್ನೆಲೆ ಮೊಬೈಲ್ ಟವರ್ ಏರಿದ ಯುವಕ; ಪೊಲೀಸ್ ಹರಸಾಹಸ, ಪ್ರಿಯತಮೆ ಕರೆಗೆ ಸರಕ್ಕನೆ ಕೆಳಗಿಳಿದ

| Updated By: ಆಯೇಷಾ ಬಾನು

Updated on: Apr 18, 2022 | 3:25 PM

ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಎಷ್ಟೇ ಮನವೊಲಿಸಿದರೂ ಯುವಕ ಕೆಳಗಿಳಿಯಲು ನಿರಾಕರಿಸಿದ್ದಾನೆ. ಕೊನೆಗೆ ಪ್ರೀತಿಸಿದ ಹುಡುಗಿಯೇ ಬಂದು ಕರೆದ ಬಳಿಕ ಯುವಕ ಕೆಳಗಿಳಿದಿದ್ದು ಪ್ರಿಯತಮೆಯ ಜತೆ ತೆರಳಿದ್ದಾನೆ.

ಪ್ರೇಮ ವೈಫಲ್ಯ ಹಿನ್ನೆಲೆ ಮೊಬೈಲ್ ಟವರ್ ಏರಿದ ಯುವಕ; ಪೊಲೀಸ್ ಹರಸಾಹಸ, ಪ್ರಿಯತಮೆ ಕರೆಗೆ ಸರಕ್ಕನೆ ಕೆಳಗಿಳಿದ
ಪ್ರೇಮ ವೈಫಲ್ಯ ಹಿನ್ನೆಲೆ ಮೊಬೈಲ್ ಟವರ್ ಏರಿದ ಯುವಕ; ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ, ಪ್ರಿಯತಮೆ ಕರೆದ ತಕ್ಷಣ ಸರಕ್ಕನೆ ಇಳಿದ
Follow us on

ದಕ್ಷಿಣ ಕನ್ನಡ: ಪ್ರೇಮ ವೈಫಲ್ಯ ಹಿನ್ನೆಲೆ ಯುವಕ ಮೊಬೈಲ್ ಟವರ್ ಏರಿದ ಘಟನೆ ಮಂಗಳೂರು ಹೊರವಲಯದ ಅಡ್ಯಾರು ಎಂಬಲ್ಲಿ ನಡೆದಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಯುವತಿ ಕೈ ಕೊಟ್ಟಲೆಂದು ಆರೋಪಿಸಿ ಯುವಕ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಯುವಕನನ್ನು ಕೆಳಗಿಳಿಸಲು ಹರಸಾಹಸ ಪಟ್ಟಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಎಷ್ಟೇ ಮನವೊಲಿಸಿದರೂ ಯುವಕ ಕೆಳಗಿಳಿಯಲು ನಿರಾಕರಿಸಿದ್ದಾನೆ. ಕೊನೆಗೆ ಪ್ರೀತಿಸಿದ ಹುಡುಗಿಯೇ ಬಂದು ಕರೆದ ಬಳಿಕ ಯುವಕ ಕೆಳಗಿಳಿದಿದ್ದು ಪ್ರಿಯತಮೆಯ ಜತೆ ತೆರಳಿದ್ದಾನೆ. ಇಬ್ಬರ ಆಟ ಕಂಡು ಅಲ್ಲಿ ತೆರದಿದ್ದ ಜನ ದಂಗಾಗಿ ಹೋದ್ರು.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಂಜಾರ ನಿವಾಸಿ ಸುಧೀರ್ ಎಂಬಾತ ಅದೇ ಗ್ರಾಮದ ಓರ್ವ ಯುವತಿಯನ್ನು ಪ್ರೀತಿಸುತಿದ್ದ. ಅವರಿಬ್ಬರ ನಡುವೆ ಮನಸ್ತಾಪ ಆದ್ದರಿಂದ ದಿನ ಬೆಳಗ್ಗೆ ಅಡ್ಯಾರ್ ಬಳಿ ಇರುವ ಆರ್.ಕೆ. ಬಿಲ್ಡಿಂಗ್ ನಲ್ಲಿ ಏರ್ ಟೆಲ್ ಟವರ್ ಏರಿ, ಮೇಲೆ ಕುಳಿತಿದ್ದ. ನಂತರ ಹುಡುಗಿ ಬಂದು ಮಾತನಾಡುವುದಾಗಿ ತಿಳಿಸಿದ ನಂತರ ಆತನು ಟವರ್ ನಿಂದ ಕೆಳಗೆ ಇಳಿದಿದ್ದಾನೆ. ಹುಡುಗನ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪಿಟಿಷನ್ ಮಾಡಲಾಗಿದ್ದು, ಸುಧೀರ್ ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಮಂಗಳೂರು ಹೊಯ್ಸಳದವರು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಸುಧೀರ್ ಮತ್ತು ಸುದೀರ್ಘ ಪ್ರಿಯತಮೆ ಇಬ್ಬರನ್ನು ಇರಿಸಿಕೊಳ್ಳಲಾಗಿದೆ. ಸುಧೀರ್ ಫರಂಗಿಪೇಟೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಅಲ್ಲೇ ಪಕ್ಕದ ಅಂಗಡಿಯಲ್ಲಿ ಯುವತಿ ಕೆಲಸಮಾಡುತ್ತಿದ್ದಳು. ಘಟನೆಯ ವಿಚಾರವನ್ನು ಇಬ್ಬರು ಮನೆಯವರಿಗೆ ತಿಳಿಸಿ ಪೊಲೀಸ್ ಠಾಣೆಗೆ ಬರುವಂತೆ ಮಾಹಿತಿ ನೀಡಲಾಗಿದೆ. ಬಲ್ಲ ಮೂಲಗಳ ಪ್ರಕಾರ ಯುವತಿಯ ಜೊತೆ ಹಿಂದೆ ತನ್ನ ಮದುವೆ ಮಾಡಿ ಎಂದು ಸುಧೀರ್ ಪಟ್ಟುಹಿಡಿದಿದ್ದಾನೆ ಅಂತ ಹೇಳಲಾಗಿದೆ. ಪೋಷಕರು ಬಂದು ಇನ್ನೇನು ತೀರ್ಮಾನ ತೆಗೆದುಕೊಳ್ಳುತ್ತಾರೆ ಕಾದುನೋಡಬೇಕಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಭ್ರಷ್ಟಾಚಾರದ ಕಡತಗಳನ್ನ ತೆಗೆಯುತ್ತೇವೆ ಎಂದ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ; ಪ್ರಶ್ನೆಗಳ ಸುರಿ ಮಳೆ

ಪ್ರೇಮ ವೈಫಲ್ಯದ ಬಗ್ಗೆ ವಿಡಿಯೋ ಮಾಡಿ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ!

Published On - 12:25 pm, Mon, 18 April 22