ಮಂಗಳೂರು ಬಂದರಿನಲ್ಲಿ ಗುಂಡು ಹಾರಿಸಿಕೊಂಡು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ PSI ಆತ್ಮಹತ್ಯೆ

| Updated By: ಆಯೇಷಾ ಬಾನು

Updated on: Oct 22, 2023 | 12:32 PM

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ PSI ಝಾಕೀರ್ ಹುಸೇನ್(58) ತನ್ನದೇ ಸರ್ವಿಸ್ ರಿವಾಲ್ವರ್​​​​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು ಬಂದರಿನಲ್ಲಿ ಗುಂಡು ಹಾರಿಸಿಕೊಂಡು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ PSI ಆತ್ಮಹತ್ಯೆ
ಪ್ರಾತಿನಿಧಕ ಚಿತ್ರ
Follow us on

ಮಂಗಳೂರು, ಅ.22: ಗುಂಡು ಹಾರಿಸಿಕೊಂಡು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) PSI ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ನವ ಮಂಗಳೂರು ಬಂದರಿನ ಮುಖ್ಯ ದ್ವಾರದ ಬಳಿ ನಡೆದಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ PSI ಝಾಕೀರ್ ಹುಸೇನ್(58) ತನ್ನದೇ ಸರ್ವಿಸ್ ರಿವಾಲ್ವರ್​​​​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಯಚೂರು ಮೂಲದ ಝಾಕೀರ್​ ಮಂಗಳೂರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎನ್ಎಂಪಿಟಿ ಮುಖ್ಯದ್ವಾರದಲ್ಲಿ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದರು. ರಾತ್ರಿಪಾಳಿ ಕೆಲಸ ಮುಗಿಸಿ ಬೆಳಗ್ಗೆ 6.30ಕ್ಕೆ ಶೌಚಾಲಯಕ್ಕೆ ಹೋಗಿದ್ದರು. ಶೌಚಾಲಯದಲ್ಲಿ​ ಪಿಸ್ತೂಲ್​​​​ನಿಂದ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ: ಬೆಳಗಾವಿ: ಕೊಲೆಗೈದು, ಕಾಣೆಯಾದ ಕಥೆ ಕಟ್ಟಿದವರು 3 ವರ್ಷದ ಬಳಿಕ ಅರೆಸ್ಟ್​​; ಮೂಡಲಗಿ ಪೊಲೀಸರ ಕಾರ್ಯಕ್ಕೆ ಶ್ಲಾಘನೆ

ಬೆಳೆ ಹಾನಿ, ಸಾಲಬಾಧೆಗೆ ಮನನೊಂದು ರೈತ ಆತ್ಮಹತ್ಯೆ

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದಲ್ಲಿ ಬೆಳೆ ಹಾನಿ, ಸಾಲಬಾಧೆಗೆ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ ಹಣಮಂತ ಹೌಶೆಟ್ಟಿ(45) ಆತ್ಮಹತ್ಯೆ ಮಾಡಿಕೊಂಡವರು. ಗ್ರಾಮದ ಹೊರವಲಯದಲ್ಲಿ ವಿದ್ಯುತ್ ಕಂಬ ಏರಿ ಕರೆಂಟ್ ಶಾಕ್ ಹೊಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು  ಮೃತ ರೈತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಡಿಕ್ಕಿ; ಸವಾರಿಬ್ಬರು ದುರ್ಮರಣ

ಕಾರು ಡಿಕ್ಕಿಯಾಗಿ ಬೈಕ್‌ ಸವಾರಿಬ್ಬರು ಬಲಿಯಾಗಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ದುರ್ಘಟನೆ ನಡೆದಿದ್ದು, ಭರತ್ ಕುಮಾರ್ ಮತ್ತು ಅಭಿಲಾಷ್ ಮೃತಪಟ್ಟ ಸವಾರರು. ಇನ್ನೂ ಮತ್ತೊಬ್ಬ ಸವಾರ ಗಾಯಗೊಂಡಿದ್ದು, ಮಧುಗಿರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧುಗಿರಿ ತಾಲೂಕಿನ ನಲ್ಲೇಕಾಮನಹಳ್ಳಿ ನಿವಾಸಿಗಳಾದ ಮೂವರು ಯುವಕರು ಬೈಕ್‌ನಲ್ಲಿ ಮಧುಗಿರಿ ಕಡೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ