ಮಂಗಳೂರು: ವಿಧಾನಸಭೆ ಚುನಾವಣೆ (karnataka Assembly Elections 2023)ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್ (Congress) ಪ್ರಜಾಧ್ವನಿಯಾತ್ರೆ ಸಮಾವೇಶದಲ್ಲಿ ಹಲವು ಯೋಜನೆಗಳನ್ನು ಘೋಷಿಸುತ್ತಿದೆ. ಅದರಂತೆ ಇಂದು (ಜನವರಿ 22) ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಕರಾವಳಿ ಭಾಗಕ್ಕೆ (coastal karnataka) ಪ್ರತ್ಯೇಕ ಪ್ರಣಾಳಿಕೆ (separate manifesto) ಘೋಷಿಸಿದೆ. ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸಮಾವೇಶದ ವೇದಿಕೆ ಮೇಲೆ ಪ್ರತ್ಯೇಕ ಪ್ರಣಾಳಿಕೆಯ ಹತ್ತು ಅಂಶ ಘೋಷಿಸಿದರು.
ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಕರಾವಳಿ ಭಾಗಕ್ಕೆ ನಾವು ಹತ್ತು ಅಂಶಗಳ ಪ್ರತ್ಯೇಕ ಘೋಷಣೆ ಮಾಡುತ್ತಿದ್ದೇವೆ. ಕರಾವಳಿಯಲ್ಲಿ ಉದ್ಯೋಗ, ಬಂಡವಾಳ ಹೂಡಿಕೆ, ಟೂರಿಸಂ ಹಾಗೂ ಭಾವೈಕ್ಯತೆ ಕೋಸ್ಟಲ್ ಡೆವಲಪ್ಮೆಂಟ್ ಅಥಾರಿಟಿ ಮಾಡುತ್ತೇವೆ. ಆ ಅಥಾರಿಟಿಗೆ ವರ್ಷಕ್ಕೆ ಎರಡೂವರೆ ಸಾವಿರ ಕೋಟಿ ರೂ. ಮೀಸಲು ಇಡುತ್ತೇವೆ ಎಂದು ಪ್ರಣಾಳಿಕೆಯ 10 ಅಂಶಗಳನ್ನು ಓದಿದರು.
ನಿನ್ನೇ ಅಷ್ಟೇ (ಜನವರಿ 21) ಮಂಗಳೂರಿನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಈ ಬಾರಿ ಕರಾವಳಿ ಕರ್ನಾಟಕಕ್ಕೆ ವಿಶೇಷವಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್ ಪ್ರಾಣಾಳಿಕ ಸಮಿತಿ ಪ್ರಥಮವಾಗಿ ಭೇಟಿ ಕೊಟ್ಟು ಹಲವು ಗುಂಪುಗಳ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದಿದ್ದರು. ಅದರಂತೆ ಇದೀಗ ಕಾಂಗ್ರೆಸ್ ಕರಾವಳಿ ಭಾಗಕ್ಕೆ 10 ಅಂಶಗಳ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
Published On - 8:24 pm, Sun, 22 January 23