ಸುಳ್ಯ ಕೋರ್ಟ್​ಗೆ ಹಾಜರಾಗಿದ್ದ ಡಿ ಕೆ ಶಿವಕುಮಾರ್; ನ್ಯಾಯಾಧೀಶರಿಂದ ಮನವರಿಕೆ

| Updated By: sandhya thejappa

Updated on: Oct 05, 2021 | 2:46 PM

ನಿಮ್ಮದೇ ದೂರವಾಣಿ ಸಂಖ್ಯೆ ಎಂಬುದಕ್ಕೆ ದಾಖಲೆ ಕೊಟ್ಟಿದ್ದೀರಾ ಅಂತ ವಕೀಲರು ಪ್ರಶ್ನಿಸುತ್ತಾರೆ. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ಅವರ ಸಂಖ್ಯೆ ಅಲ್ಲದಿದ್ರೆ ನಿಮ್ಮ ಕಕ್ಷಿದಾರ ಕರೆ ಮಾಡಿದ್ದು ಏಕೆ ಅಂತ ಆರೋಪಿ ಪರ ವಕೀಲರಿಗೆ ಪ್ರಶ್ನೆ ಕೇಳಿದ್ದಾರೆ.

ಸುಳ್ಯ ಕೋರ್ಟ್​ಗೆ ಹಾಜರಾಗಿದ್ದ ಡಿ ಕೆ ಶಿವಕುಮಾರ್; ನ್ಯಾಯಾಧೀಶರಿಂದ ಮನವರಿಕೆ
ಡಿಕೆ ಶಿವಕುಮಾರ್
Follow us on

ಮಂಗಳೂರು: ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕೋರ್ಟ್ಗೆ ಹಾಜರಾಗಿದ್ದರು. ಕೋರ್ಟ್ನಲ್ಲಿ ಸಾಕ್ಷಿ ಹೇಳಲು ಬಂದಿದ್ದ ಶಿವಕುಮಾರ್ಗೆ ವಕೀಲರು ಪ್ರಶ್ನಿಸಿದ್ದಾರೆ. ಸಾಕ್ಷ್ಯ ನುಡಿದ ನಂತರ ಡಿಕೆಶಿಗೆ, ಪ್ರಕರಣ ದಾಖಲಾದ ಬಳಿಕ ಅಧಿಕಾರಿ ಹೇಳಿಕೆ ಪಡೆದಿದ್ದಾರಾ? ಅಂತ ಆರೋಪಿ ಪರ ವಕೀಲರು ಪ್ರಶ್ನಿಸಿದ್ದಾರೆ. ಇದಕ್ಕೆ ಒಂದು ವರ್ಷದ ಬಳಿಕ ಹೇಳಿಕೆ ಪಡೆದಿದ್ದಾಗಿ ಉತ್ತರಿಸಿದ ಡಿಕೆಶಿ, ಆ ಅಧಿಕಾರಿ ಹೆಸರು ನೆನಪಿಲ್ಲವೆಂದು ತಿಳಿಸಿದ್ದಾರೆ.

ನಿಮ್ಮದೇ ದೂರವಾಣಿ ಸಂಖ್ಯೆ ಎಂಬುದಕ್ಕೆ ದಾಖಲೆ ಕೊಟ್ಟಿದ್ದೀರಾ ಅಂತ ವಕೀಲರು ಪ್ರಶ್ನಿಸುತ್ತಾರೆ. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ಅವರ ಸಂಖ್ಯೆ ಅಲ್ಲದಿದ್ರೆ ನಿಮ್ಮ ಕಕ್ಷಿದಾರ ಕರೆ ಮಾಡಿದ್ದು ಏಕೆ ಅಂತ ಆರೋಪಿ ಪರ ವಕೀಲರಿಗೆ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ನಿಮ್ಮ ಮೊಬೈಲ್ನಲ್ಲಿ ಕಾಲ್ ರೆಕಾರ್ಡ್ ಆಗುತ್ತಾ ಅಂತ ಆರೋಪಿ ಪರ ವಕೀಲ ಡಿಕೆಶಿಗೆ ಪ್ರಶ್ನಿಸಿದ್ದಾರೆ. ಆಗ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಅಂತ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಆರೋಪಿ ಬಿಜೆಪಿ ಕಾರ್ಯಕರ್ತ ಅಂತ ನೀವು ಸುಳ್ಳು ದೂರು ನೀಡಿದ್ದೀರಿ ಅಂತ ಆರೋಪಿ ಪರ ವಕೀಲ ಹೇಳುತ್ತಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ದೂರು ಕೊಟ್ಟಿದ್ದಾಗಿ ವಕೀಲರು ಆರೋಪಿಸುತ್ತಾರೆ. ಕರೆ ಮಾಡಿದ ಆರೋಪಿ ಪೂರ್ವಾಪರ ನನಗೆ ಗೊತ್ತಿಲ್ಲವೆಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಜೊತೆಗೆ ಆತ ಅವಾಚ್ಯ ಶಬ್ದ ಬಳಸಿದ ಕಾರಣಕ್ಕೆ ದೂರು ಕೊಟ್ಟೆ ಅಂತ ಕೋರ್ಟ್​ನಲ್ಲಿ ತಿಳಿಸಿದ್ದಾರೆ.

ಕೈಕೊಟ್ಟ ವಿದ್ಯುತ್
ಕೋರ್ಟ್ನಲ್ಲಿ ಡಿಕೆಶಿ ಸಾಕ್ಷ್ಯ ವಿಚಾರಣೆ ವೇಳೆ ವಿದ್ಯುತ್ ಕೈಕೊಡುತ್ತದೆ. ಈ ವೇಳೆ ವಿದ್ಯುತ್ ಸಮಸ್ಯೆಯ ಬಗ್ಗೆ ಜಡ್ಜ್ ಡಿಕೆಶಿಗೆ ಮನವರಿಕೆ ಮಾಡುತ್ತಾರೆ. ವಿದ್ಯುತ್ ಸಮಸ್ಯೆ ವಿಚಾರದಲ್ಲಿ ನಿಮಗೆ ಅವರು ಬೈದಿದ್ದು ತಪ್ಪು. ಸುಳ್ಯದಲ್ಲಿ ವಿದ್ಯುತ್ ಸಮಸ್ಯೆ ಎಷ್ಟಿದೆಯೆಂದು ಗೊತ್ತಿದೆಯಾ. ಇದನ್ನು ನೀವೇ ಈಗ ಸ್ವತಃ ಅನುಭವ ಮಾಡಿದ್ದೀರಿ. ಎಲ್ಲರೂ ಪ್ರತಿ ದಿನ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ನಿಮಗೂ ಇಂದು ವಿದ್ಯುತ್ ಸಮಸ್ಯೆ ಬಗ್ಗೆ ಅರಿವಾಗಿದೆ ಅಂತ ನ್ಯಾಯಾಧೀಶರು ಡಿ.ಕೆ.ಶಿವಕುಮಾರ್ಗೆ ಮಾಹಿತಿ ನೀಡಿದರು.

ಸಾಕ್ಷ್ಯ ಹೇಳಿ ಹೊರಬಂದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ನೀಡಿದರು. ಕಾನೂನಿಗೆ ತಲೆ ಬಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದೆ. ನನ್ನನ್ನು ನಿಂದಿಸಿದ್ದ ವ್ಯಕ್ತಿ ಅಧಿಕಾರಿಗಳಿಗೆ ನಿಂದಿಸಿದ್ದ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಅಧಿಕಾರಿಗಳಿಂದ ದೂರು ನೀಡಲಾಗಿತ್ತು. ನಾನು ಸಚಿವನಾಗಿದ್ದಾಗ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದೆ. ಈಗಿನ ಇಂಧನ ಸಚಿವರು ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಅಂತ ಅಭಿಪ್ರಾಯಟ್ಟರು.

ಇದನ್ನೂ ಓದಿ

ಡಿಕೆ ಶಿವಕುಮಾರ್ ಮಂಗಳವಾರ ಸುಳ್ಯ ಕೋರ್ಟ್​ಗೆ ಹಾಜರು; ಕಾರಣ ಇಲ್ಲಿದೆ

ಓಟಿಟಿ ಮೇಲೆ ಹೆಚ್ಚಿತು ಸಿನಿ ಮಂದಿಯ ಪ್ರೀತಿ; ಬಹುನಿರೀಕ್ಷಿತ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​

Published On - 2:42 pm, Tue, 5 October 21