ಮಂಗಳೂರು: ಮಗನ ಮೇಲೆ ಅಪ್ಪನಿಂದಲೇ ಫೈರಿಂಗ್
ಗಾಯಾಳು ಬಾಲಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜೇಶ್ ಪ್ರಭು ಎಂಬ ವ್ಯಕ್ತಿಯೇ ಮಗನ ಮೇಲೆ ಗುಂಡು ಹಾರಿಸಿದಾತ.
ಮಂಗಳೂರು: ಅಪ್ಪನೇ ಮಗನ ಮೇಲೆ ಫೈರಿಂಗ್ ಮಾಡಿದ ಘಟನೆ ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಸಮೀಪ ನಡೆದಿದೆ. ಸುಧೀಂದ್ರ ಪ್ರಭು (14) ಗುಂಡಿನ ದಾಳಿಗೆ ಒಳಗಾದ ಬಾಲಕ. ಗಾಯಾಳು ಬಾಲಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜೇಶ್ ಪ್ರಭು ಎಂಬ ವ್ಯಕ್ತಿಯೇ ಮಗನ ಮೇಲೆ ಗುಂಡು ಹಾರಿಸಿದಾತ. ಈಕುರಿತು ಇನ್ನಷ್ಟೇ ಹೆಚ್ಚಿನ ವಿವರ ತಿಳಿದುಬರಬೇಕಿದೆ.
ವೇತನ ಕೇಳಿದ ವಿಚಾರದಲ್ಲಿ ನೌಕರರ ಜತೆ ವಾಗ್ವಾದ ನಡೆದಿತ್ತು. ಆಗ ನೌಕರರ ರಾಜೇಶ್ ನೌಕರರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾರೆ. ಈ ವೇಳೆ ಪುತ್ರ ಸುಧೀಂದ್ರ ಪ್ರಭುಗೆ ಗುಂಡು ತಗುಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:
Kambala: ಕಂಬಳ ಕ್ರೀಡೆಗೆ ಮಹಿಳಾ ಸಾರಥಿಗಳು; ಐವರು ಯುವತಿಯರಿಗೆ ತರಬೇತಿ ನೀಡಲು ತಯಾರಿ
ಉಡುಪಿ: ಶಂಖದ ಹುಳುವಿನ ರಂಪಾಟಕ್ಕೆ ಬೇಸತ್ತ ಸ್ಥಳೀಯರು; ರಾತ್ರಿಯಲ್ಲೇ ಓಡಾಡುತ್ತವೆ ಈ ನಿಶಾಚರಿಗಳು
Published On - 4:48 pm, Tue, 5 October 21