ಉಡುಪಿ: ಶಂಖದ ಹುಳುವಿನ ರಂಪಾಟಕ್ಕೆ ಬೇಸತ್ತ ಸ್ಥಳೀಯರು; ರಾತ್ರಿಯಲ್ಲೇ ಓಡಾಡುತ್ತವೆ ಈ ನಿಶಾಚರಿಗಳು

ಈ ಶಂಖದ ಹುಳು ಅಥವಾ ಬಸವನ ಹುಳುವನ್ನು ಆಫ್ರಿಕನ್ ಜಯಂಟ್ ಸ್ನೈಲ್ ಎಂದು ಕರೆಯಲಾಗುತ್ತದೆ. ಇದು ಅಡಿಕೆ, ತೆಂಗು ಸೇರಿದಂತೆ ವಿವಿಧ ಗಿಡಗಳಿಗೆ ಹಾನಿಯುಂಟು ಮಾಡುವ ಬಗ್ಗೆ ಸ್ಥಳೀಯರಲ್ಲಿ ಆತಂಕ‌ ಉಂಟಾಗಿತ್ತು. ಮನೆಗಳ ಗೋಡೆ, ತೆಂಗಿನಮರ, ಗಿಡಗಳ ಮಧ್ಯೆ, ಮನೆಯ ಆವರಣದ ಗೋಡೆಗಳಲ್ಲಿ ಹುಳಗಳು ಹರಿದಾಡುತ್ತಿವೆ.

ಉಡುಪಿ: ಶಂಖದ ಹುಳುವಿನ ರಂಪಾಟಕ್ಕೆ ಬೇಸತ್ತ ಸ್ಥಳೀಯರು; ರಾತ್ರಿಯಲ್ಲೇ ಓಡಾಡುತ್ತವೆ ಈ ನಿಶಾಚರಿಗಳು
ಶಂಖದ ಹುಳು
Follow us
TV9 Web
| Updated By: preethi shettigar

Updated on: Oct 05, 2021 | 12:03 PM

ಉಡುಪಿ: ಜಿಲ್ಲೆಯ ಪರ್ಕಳ ದೇವಿ ನಗರದ ನಿವಾಸಿಗಳು ಶಂಖದ ಹುಳುವಿನ ರಂಪಾಟಕ್ಕೆ ರೋಸಿಹೋಗಿದ್ದಾರೆ. ಇಡೀ ಊರು ತುಂಬಾ ಹುಳುಗಳು ಮುತ್ತಿಗೆ ಹಾಕಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಂಗಳ, ಹಿತ್ತಲು, ಮರ, ಗಿಡ, ಬಳ್ಳಿ ಹೂವು ಎಲ್ಲಿ ಕಣ್ಣಾಡಿಸಿದರೂ ಶಂಖದ ಹುಳುಗಳ ರಾಶಿ ಕಂಡುಬರುತ್ತಿದೆ. ಕೆಜಿಗಟ್ಟಲೆ ಹುಳುಗಳನ್ನು ನಾಶಮಾಡಿದರೆ ಮರುದಿನ ಲೋಡುಗಟ್ಟಲೆ ಹುಳು ಮನೆಯಂಗಳದಲ್ಲಿ ಬಂದುಬೀಳುತ್ತಿದ್ದು, ಪರಿಹಾರಕ್ಕಾಗಿ ಗ್ರಾಮಸ್ಥರು ಹಾತೋರೆಯುತ್ತಿದ್ದಾರೆ.

ಹಾಲಿವುಡ್ ಸಿನಿಮಾಗಳಲ್ಲಿ ರಾಶಿ ರಾಶಿ ಹುಳುಗಳು ಊರಿಗೆ ದಾಳಿಯಿಡುವ ಭಯಾನಕ ದೃಶ್ಯಗಳನ್ನು ನೋಡಿದ್ದೇವೆ. ಉಡುಪಿ ಜಿಲ್ಲೆಯ ಪರ್ಕಳದ ದೇವಿ ನಗರದಲ್ಲಿ ಹೆಚ್ಚುಕಮ್ಮಿ ಅದೇ ಪರಿಸ್ಥಿತಿ ಉಂಟಾಗಿದೆ. ಈ ಊರಿನ ಬೀದಿ ಬೀದಿಯಲ್ಲೂ ಶಂಕದ ಹುಳುವಿನ ರಾಶಿ ಕಾಣಸಿಗುತ್ತಿದೆ. ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಹುಳುವಿನ ಬಾಧೆ ವಿಪರೀತವಾಗಿದ್ದರೂ, ಈ ಬಾರಿಯಷ್ಟು ಹುಳುಗಳು ಯಾವತ್ತೂ ದಾಳಿ ಇಟ್ಟಿರಲಿಲ್ಲ ಎಂದು ಸ್ಥಳೀಯರಾದ ಗಣೇಶ್ ರಾಜ್ ಹೇಳಿದ್ದಾರೆ.

ನಿಶಾಚರಿಗಳಾದ ಈ ಹುಳುಗಳು ಹಗಲೆಲ್ಲಾ ಗೋಡೆಗಂಟಿ ಮಲಗಿಬಿಡುತ್ತವೆ. ರಾತ್ರಿಯಾದರೆ ಸಾಕು ಓಡಾಡಲು ಶುರು ಮಾಡುತ್ತವೆ. ಮುದುಡಿ ಮಲಗಿದರೆ ಒಂದಿಂಚು ಅಗಲದ ಈ ಹುಳು. ಎಳೆದಷ್ಟು ಉದ್ದಕ್ಕೆ ಬಿಚ್ಚಿಕೊಳ್ಳುತ್ತದೆ. ಮೈಯೆಲ್ಲಾ ಅಂಟು, ಕೆಟ್ಟವಾಸನೆ ಪ್ರತಿದಿನ ಮನೆ ಸುತ್ತಲೂ ಹುಳುಗಳ ರಾಶಿ ಕಂಡು ಜನ ರೋಸಿ ಹೋಗಿದ್ದಾರೆ. ಮಳೆಗಾಲದ ತೇವಾಂಶಕ್ಕೆ ಮೇಲಕ್ಕೆ ಬರುವ ಹುಳುಗಳು ಉಳಿದ ಕಾಲದಲ್ಲಿ ಭೂಮಿಯಡಿ ಹುದುಗಿರುತ್ತಂತೆ.

ಈ ಶಂಖದ ಹುಳು ಅಥವಾ ಬಸವನ ಹುಳುವನ್ನು ಆಫ್ರಿಕನ್ ಜಯಂಟ್ ಸ್ನೈಲ್ ಎಂದು ಕರೆಯಲಾಗುತ್ತದೆ. ಇದು ಅಡಿಕೆ, ತೆಂಗು ಸೇರಿದಂತೆ ವಿವಿಧ ಗಿಡಗಳಿಗೆ ಹಾನಿಯುಂಟು ಮಾಡುವ ಬಗ್ಗೆ ಸ್ಥಳೀಯರಲ್ಲಿ ಆತಂಕ‌ ಉಂಟಾಗಿತ್ತು. ಮನೆಗಳ ಗೋಡೆ, ತೆಂಗಿನ ಮರ, ಗಿಡಗಳ ಮಧ್ಯೆ, ಮನೆಯ ಆವರಣದ ಗೋಡೆಗಳಲ್ಲಿ ಹುಳಗಳು ಹರಿದಾಡುತ್ತಿವೆ. ಅಲ್ಲದೆ ಮನೆಯ ಒಳಗೂ ಇವುಗಳು ಸಂಚರಿಸುತ್ತಿವೆ.

ಶಂಖದ ಹುಳು ಸಂತತಿ ಇವು ದ್ವಿಲಿಂಗಗಳಾಗಿದ್ದು, ಸರಿಸುಮಾರು 50-200 ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನ ಮೇಲ್ಪದರದಲ್ಲಿ ಇಡುತ್ತವೆ. ಈ ಮೊಟ್ಟೆಗಳಿಂದ ಒಂದು ವಾರದೊಳಗೆ ಮರಿ ಹುಳುಗಳು ಹೊರ ಬರುತ್ತವೆ. ಪ್ರೌಢಾವಸ್ಥೆಗೆ ಬರಲು ಒಂದು ವರ್ಷ ಬೇಕಾಗುತ್ತದೆ. ಇದರ ಜೀವಿತಾವಧಿ 3-5 ವರ್ಷಗಳಾಗಿವೆ. ಮಳೆಗಾಲದಲ್ಲಿ ಎಲೆಗಳು, ಕಾಂಡ, ಹಣ್ಣು ಹಾಗೂ ಹೂವುಗಳನ್ನು ತಿಂದು ಹೆಚ್ಚಿನ ಹಾನಿಯುಂಟು ಮಾಡುತ್ತದೆ ಎಂದು ಕೀಟ ತಜ್ಞರು ತಿಳಿಸಿದ್ದಾರೆ.

giant african snail

ನಿಶಾಚರಿಗಳಾದ ಈ ಹುಳುಗಳು ಹಗಲೆಲ್ಲಾ ಗೋಡೆಗಂಟಿ ಮಲಗಿಬಿಡುತ್ತವೆ

ಹುಳುಗಳ ಬೆಳವಣಿಗೆಗೆ ಪ್ರತಿಕೂಲ ವಾತಾವರಣವನ್ನು ಒದಗಿಸದೆ ತೋಟಗಳ ಕಳೆಗಳನ್ನು ನಿರ್ಮೂಲನೆ ಮಾಡಿ ಶುಚಿಯಾಗಿಡಬೇಕು. ತೋಟಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಗುಂಪು ಹಾಕದೇ ಹುಳುಗಳಿಗೆ ಅಡಿಗಿಕೊಳ್ಳಲು ಸ್ಥಳಗಳು ಸಿಗದಂತೆ ಮಾಡಬೇಕು. ಮೊದಲ ಹಂತದಲ್ಲಿಯೇ ಇವುಗಳನ್ನು ಹಿಡಿದು ನಾಶಪಡಿಸುವುದು ಪರಿಣಾಮಕಾರಿಯಾಗಿದೆ. ಬ್ಲೀಚಿಂಗ್ ಪುಡಿ ಅಥವಾ ಸುಣ್ಣದ ಪುಡಿಯನ್ನು ದೂಳೀಕರಿಸಿ ಹುಳುಗಳನ್ನು ನಾಶಮಾಡಬಹುದು ಎಂದು ಕೀಟ ತಜ್ಞರು ಹೇಳಿದ್ದಾರೆ.

ಇದೀಗ ನಗರದ ನಿವಾಸಿಗಳು ಪ್ರತಿದಿನ ಗೋಣಿ ತುಂಬಾ ಹುಳುಗಳನ್ನು ತೆಗೆದರೂ, ಮತ್ತೆ ಮತ್ತೆ ಬಂದು ರಾಶಿ ಬೀಳುತ್ತಿದೆ. ಈ ಬಗ್ಗೆ ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಔಷಧಿ ಸಿಂಪಡಿಸುವ ಮೂಲಕ ಈ ಹುಳುಬಾಧೆಯಿಂದ ಜನರಿಗೆ ಮುಕ್ತಿ ನೀಡಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವರದಿ: ಹರೀಶ್ ಪಾಲೆಚ್ಚಾರ್

ಇದನ್ನೂ ಓದಿ: ಮಲ್ಪೆ ಬಂದರಿನಲ್ಲಿ ಅಪರೂಪದ ಮೀನು ಪತ್ತೆ; ನೆಮ್ಮೀನ್​ಗೆ ಕೇರಳದಲ್ಲಿ ಭಾರೀ ಬೇಡಿಕೆ!

ಹಾವೇರಿ: ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳುವಿನ ಕಾಟ; ಬೆಳೆ ರಕ್ಷಣೆ ಕ್ರಮಗಳ ಬಗ್ಗೆ ಕೃಷಿ ವಿಜ್ಞಾನಿಗಳಿಂದ ರೈತರಿಗೆ ಮಾಹಿತಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್