ಮಂಗಳೂರು: ದೇವಸ್ಥಾನದ ತಡೆಗೋಡೆ ಕಟ್ಟುತ್ತಿದ್ದ ಮುಸ್ಲಿಂ ಯುವಕನ ಮೈಯಲ್ಲಿ ಬಂದ ದೈವ

ದೈವಸ್ಥಾನದ ಕೆಲಸ ನಿರ್ವಹಿಸುವ ಸಂದರ್ಭ ಏಕಾಏಕಿ ಒರಿಸ್ಸಾ ಮೂಲದ ಮುಸ್ಲಿಂ ಯುವಕನಿಗೆ ದೈವ ಅವೇಷವಾದ ಘಟನೆ ಬೆಳಕಿಗೆ ಬಂದಿದೆ. ಹೌದು.. ಮಂಗಳೂರು ಹೊರವಲಯದ ಪೆರ್ಮುದೆಯಲ್ಲಿನ ಪಿಲಿ ಚಾಮುಂಡಿ ದೇವಸ್ಥಾನದ ತಡೆಗೋಡೆ ನಿರ್ಮಿಸುವ ಸಂದರ್ಭದಲ್ಲಿ ಒರಿಸ್ಸಾ ಮೂಲದ ಯುವಕನ ಮೈಯಲ್ಲಿ ದೈವ ಅವೇಷ ಬಂದಿದೆ.

ಮಂಗಳೂರು: ದೇವಸ್ಥಾನದ ತಡೆಗೋಡೆ ಕಟ್ಟುತ್ತಿದ್ದ ಮುಸ್ಲಿಂ ಯುವಕನ ಮೈಯಲ್ಲಿ ಬಂದ ದೈವ
ಪೆರ್ಮುದೆಯಲ್ಲಿನ ಪಿಲಿ ಚಾಮುಂಡಿ ದೇವಸ್ಥಾನ
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ರಮೇಶ್ ಬಿ. ಜವಳಗೇರಾ

Updated on: Oct 02, 2023 | 7:59 AM

ಮಂಗಳೂರು, (ಅಕ್ಟೋಬರ್ 02): ದೈವಸ್ಥಾನದ (Temple) ಕೆಲಸ ನಿರ್ವಹಿಸುವ ಸಂದರ್ಭ ಏಕಾಏಕಿ ಒರಿಸ್ಸಾ ಮೂಲದ ಮುಸ್ಲಿಂ ಯುವಕನಿಗೆ ದೈವ 9daiva) ಅವೇಷವಾದ ಘಟನೆ ಬೆಳಕಿಗೆ ಬಂದಿದೆ. ಮಂಗಳೂರು (Mangaluru) ಹೊರವಲಯದ ಪೆರ್ಮುದೆಯಲ್ಲಿನ ಪಿಲಿ ಚಾಮುಂಡಿ ದೇವಸ್ಥಾನದಲ್ಲಿ(Permude Chamundi Temple) ಕಳೆದ ಎರಡು ತಿಂಗಳ ಹಿಂದೆ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಿಸುವ ಸಂದರ್ಭದಲ್ಲಿ ಒರಿಸ್ಸಾ ಮೂಲದ ಯುವಕನ ಮೈಯಲ್ಲಿ ದೈವ ಅವೇಷ ಬಂದಿದೆ. ಪ್ರಶ್ನಾ ಚಿಂತನೆಯಲ್ಲಿ ಕಂಡುಕೊಂಡಾಗ ಇದು ಜಿಲ್ಲೆಯ ಪ್ರತಿಷ್ಟಿತ ಕಂಪನಿಯಾದ ಎಂ.ಆರ್.ಪಿ.ಎಲ್ ನಿಂದ ಬಂದ ಸಮಸ್ಯೆ ಎಂದು ತಿಳಿದುಬಂದಿದೆ.

ಕಳೆದ ಮೂರು ದಶಕಗಳ ಹಿಂದೆ, ಪ್ರತಿಷ್ಠಿತ ಎಂ.ಆರ್,ಪಿ,ಎಲ್ ಕಂಪನಿಗಾಗಿ ಜಮೀನು ಭೂಸ್ವಾಧೀನಗೊಂಡಿದ್ದು ಆ ಸಂದರ್ಭ ಅಲ್ಲಿದ್ದ ಪಿಲಿಚಾಮುಂಡಿ ದೈವಸ್ಥಾನ ಹಾಗೂ ಕೊಡಮಣಿತ್ತಾಯ ದೈವಸ್ಥಾನ ಪುನರ್ವಸತಿ ಪ್ರದೇಶದಲ್ಲಿನ ಅಂದರೆ ಪೆರ್ಮುದೆ ಸೋಮನಾಥ ಧಾಮಕ್ಕೆ ಸ್ಥಳಾಂತರಗೊಂಡು ಕಾಲ ಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಪೆರ್ಮುದೆ ಗ್ರಾಮಕ್ಕೆ ಸಂಬಂಧಿಸಿ ದೈವಗಳ ನಾಲ್ಕು ಗಡು ಇದ್ದು, ಪ್ರಸುತ್ತ ಕಾಯರ್ ಕಟ್ಟೆ ಎಂಬುದು ಕುತ್ತೆತ್ತೂರು ಗ್ರಾಮದ ಪೆರ್ಮುದೆ ಗಡುವಾಗಿದೆ. ಈ ಗಡು ಸ್ಥಳದಲ್ಲಿ ನಡೆಯುತ್ತಿದ್ದ ದೈವಾರಾಧನೆ ಪ್ರಕ್ರಿಯೆಗಳು ಕಳೆದ 18 ವರ್ಷಗಳಿಂದ ಸ್ಥಗಿತಗೊಂಡಿದೆ. ಭೂಸ್ವಾಧೀನಗೊಂಡ ಮತ್ತು ಎಂ ಆರ್ ಪಿ ಎಲ್ ಗೆ ಹತ್ತಿರವಾದ ಕಾರಣ ಇಲ್ಲಿ ನೇಮ ನಡೆಸಲು ಆಸಾದ್ಯವಾಗಿತ್ತು. ಇಲ್ಲಿನ ಬೌಗೋಳಿಕ ಸ್ಥಿತಿಗತಿಗಳೂ ಇದಕ್ಕೆ ಪ್ರಮುಖ ಕಾರಣವಾಗಿತ್ತು.

ಇದನ್ನೂ ಓದಿ: Kerala Onam bumper Lottery: ಕೇರಳ ತಿರುಓಣಂ ಬಂಪರ್ ಲಾಟರಿ ಡ್ರಾ: ಪುತ್ತೂರಿನ ಮೇಸ್ತ್ರಿ, ನಾಲ್ವರು ಹೆಣ್ಣು ಮಕ್ಕಳ ಚಂದ್ರಯ್ಯಗೆ 50 ಲಕ್ಷ ರೂ ತೃತೀಯ ಬಹುಮಾನ

ನೇಮ ಸ್ಥಗಿತಗೊಂಡ ನಂತರದ ಕಾಲದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಮತ್ತು ಕಂಪನಿ ವ್ಯಾಪ್ತಿಯಲ್ಲಿ ದೋಷ ದೃಷ್ಟಾಂತ ಕಂಡು ಬರಲು ಪ್ರಾರಂಭವಾಯಿತು. ಪಿಲಿಚಂಡಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಸಂದರ್ಭ ಕಾಯರ್ ಕಟ್ಟೆ ಗಡು ಸ್ಥಳದಲ್ಲಿ ನಡೆಯುತ್ತಿದ್ದ ಯಥಾ ಪ್ರಕಾರ ಮುಂದುವರಿದರೆ ಮಾತ್ರ ದೋಷಗಳಿಗೆ ಪರಿಹಾರ ಎಂಬ ದೈವದ ನುಡಿಯಾಗಿತ್ತು. ಈ ನಡುವೆ ಕಳೆದ ಎರಡು ತಿಂಗಳ ಹಿಂದೆ ಪಿಲಿಚಾಮುಂಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಾಣ ಮಾಡುತ್ತಿದ್ದ ಸಂದರ್ಭ ಒರಿಸ್ಸಾ ಮೂಲದ ಮುಸ್ಲಿಂ ಯುವಕನಿಗೆ ದೈವ ಅವೇಷ ಬಂದಿದೆ.

ಈ ಬಗ್ಗೆ ಪೆರ್ಮುದೆ ಸೋಮನಾಥೇಶ್ವರ ದೇಗುಲದಲ್ಲಿ ಪ್ರಶ್ನಾಚಿಂತನೆ ಇರಿಸಿದಾಗಲೂ ಎಂ ಆರ್ ಪಿ.ಎಲ್ ಸಮೀಪದ ಗಡುಪಾಡಿನಲ್ಲಿ ನೇಮೋತ್ಸವ ಸ್ಥಗಿತಗೊಂಡಿರುವ ಕಾರಣ ಇಂತಹ ಸನ್ನವೇಶಗಳು ನಡೆಯುತ್ತಿವೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ