Dakshina Kannada News: ಧ್ವಜಾರೋಹಣ ವೇಳೆ ಕುಸಿದು ಬಿದ್ದು ನಿವೃತ್ತ ಸೈನಿಕ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 15, 2022 | 12:47 PM

ಧ್ವಜಾರೋಹಣದ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕ ಸಾವನ್ನಪ್ಪಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದಲ್ಲಿ ನಡೆದಿದೆ.

Dakshina Kannada News: ಧ್ವಜಾರೋಹಣ ವೇಳೆ ಕುಸಿದು ಬಿದ್ದು ನಿವೃತ್ತ ಸೈನಿಕ ಸಾವು
ಮೃತ ನಿವೃತ್ತ ಸೈನಿಕ ಗಂಗಾಧರ ಗೌಡ.
Follow us on

ಮಂಗಳೂರು: ಧ್ವಜಾರೋಹಣದ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕ ಸಾವನ್ನಪ್ಪಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದಲ್ಲಿ ನಡೆದಿದೆ. ಗಂಗಾಧರ ಗೌಡ ಮೃತ ನಿವೃತ್ತ ಸೈನಿಕ. ಕುಟ್ರುಪಾಡಿ ಗ್ರಾ.ಪಂ. ವತಿಯಿಂದ ಹಳೆಸ್ಟೇಷನ್ ಅಮೃತ ಸರೋವರದ ಬಳಿ ಧ್ವಜಾರೋಹಣ ನೆರವೇರಿಸುವ ವೇಳೆ ನಿವೃತ್ತ ಸೈನಿಕ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ. ಬಳಿಕ ಆಸ್ಪತ್ರೆಗೆ ಸಾಗಿಸುವ ವೇಳೆ ನಿವೃತ್ತ ಸೈನಿಕ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಮೀನು ಹಿಡಿಯಲು ಹೋದ ಯುವಕ ಸಾವು

ರಸ್ತೆಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಹು-ಧಾ ಮಾಜಿ ಅಧ್ಯಕ್ಷ ಪುತ್ರ ಸಾವು

ಹುಬ್ಬಳ್ಳಿ: ರಸ್ತೆಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಹು-ಧಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಪುತ್ರ ಸಾವನ್ನಪ್ಪಿರುವಂತಹ ಘಟನೆ ತಾರಿಹಾಳ ಬೈಪಾಸ್​ನ ಮೈಕ್ರೋಫಿನಿಶ್ ಫ್ಯಾಕ್ಟರಿ ಬಳಿ ತಡರಾತ್ರಿ ನಡೆದಿದೆ. ಹುಬ್ಬಳ್ಳಿ-ಧಾರವಾಡ ನಗರಾಭೀವೃಧ್ಧಿ ಪ್ರಾಧಿಕಾರದ ಕಲಬುರ್ಗಿ ಅವರ ಪುತ್ರ ತಿಲಕ್ ಕಲಬುರ್ಗಿ (22) ಮೃತ ದುರ್ದೈವಿ. ಧಾರವಾಡದ ನುಗ್ಗಿಕೇರಿ ಹನುಮಾನ್ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ತಿಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನ ಸ್ನೇಹಿತನಿಗೆ ಗಂಭೀರ ಗಾಯವಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇದನ್ನೂ ಓದಿ: ನೆಲಮಂಗಲ: ಮದುವೆಯಾದ ಎರಡುವರೆ ತಿಂಗಳಲ್ಲೇ ಬೇರೊಂದು ಮದುವೆಯಾಗಿ ಪತಿ ಎಸ್ಕೇಪ್: ಪತ್ನಿ ಕಂಗಾಲು

ಧ್ವಜಾರೋಹಣಕ್ಕೆ ಹೋದಾಗ ಮನೆಗೆ ಕನ್ನಾ ಹಾಕಿದ ಖದೀಮರು 

ಗದಗ: ನಗರದಲ್ಲಿ ಹಾಡಹಗಲೇ ಕಳ್ಳರು ತಮ್ಮ ಕೈ ಕಚಳ ತೋರಿದ್ದು, 250 ಗ್ರಾಂ ಚಿನ್ನ ಹಾಗೂ 5 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿರುವಂತಹ ಘಟನೆ ನಗರದ ಹೋಡ್ಕೋ ಕಾಲೋನಿಯ ಸಿದ್ದಲಿಂಗ ನಗರದಲ್ಲಿ ನಡೆದಿದೆ. ಸಿದ್ದಲಿಂಗ ನಗರದ ಉದ್ಯಾನವನದಲ್ಲಿ ಧ್ವಜಾರೋಹಣಕ್ಕೆ  ದಂಪತಿಗಳು ಹೋಗಿದ್ದಾಗ ಕಳ್ಳರು ಮನೆ ದೋಚಿದ್ದಾರೆ. ಕ್ರಷರ ಮಾಲೀಕ ಬಸವರಾಜ್ ರಾಯಪುರ ಎನ್ನುವವರ ಮನೆ ಕಳ್ಳತನವಾಗಿದ್ದು, ಮಾಂಗಲ್ಯ ಸರ, ಕಿವಿಯೋಲೆ, ಬಳೆ ಸೇರಿ ಚಿನ್ನಾಭರಣ ದೋಚಿದ್ದಾರೆ.
ಧ್ವಜಾರೋಹಣಕ್ಕೆ ಹೋಗುವುದನ್ನು ನೋಡಿ, ಮನೆಗೆ ನುಗ್ಗಿ ಕಳ್ಳತನ ಮಾಡಲಾಗಿದೆ ಎನ್ನಲಾಗುತ್ತಿದೆ. ಗದಗ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 12:35 pm, Mon, 15 August 22