ನೆಲಮಂಗಲ: ಮದುವೆಯಾದ ಎರಡುವರೆ ತಿಂಗಳಲ್ಲೇ ಬೇರೊಂದು ಮದುವೆಯಾಗಿ ಪತಿ ಎಸ್ಕೇಪ್: ಪತ್ನಿ ಕಂಗಾಲು
ಪೂರ್ಣಿಮಾ(20), ಪ್ರದೀಪ್ (24), ಪರಸ್ಪರ ಎರಡು ವರ್ಷ ಲವ್ ಬಳಿಕ ಮದುವೆಯಾಗಿತ್ತು. ಮನೆಗೆ ಆಧಾರವಾಗಿರುತ್ತೇನೆಂದು ತಾಯಿ ಕಾಲಿಗೆ ಬಿದ್ದು ಮದುವೆಯಾಗಿದ್ದ. ಆದರೆ ಏಕಾಏಕಿ ಬಿಟ್ಟು ಎಸ್ಕೇಪ್ ಆಗಿದ್ದಾನೆ.

ನೆಲಮಂಗಲ: ಮದುವೆಯಾದ ಎರಡುವರೆ ತಿಂಗಳಲ್ಲೇ ಪತ್ನಿಗೆ ತಿಳಿದಂತೆ ಬೇರೊಂದು ಮದುವೆಯಾಗಿ ಪತಿ ಎಸ್ಕೇಪ್ (escaped) ಆಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತ್ಯಾಮಗೊಂಡ್ಲುವಿನಲ್ಲಿ ನಡೆದಿದೆ. ಪೂರ್ಣಿಮಾ(20), ಪ್ರದೀಪ್ (24), ಪರಸ್ಪರ ಎರಡು ವರ್ಷ ಲವ್ ಬಳಿಕ ಮದುವೆಯಾಗಿತ್ತು. ಮನೆಗೆ ಆಧಾರವಾಗಿರುತ್ತೇನೆಂದು ತಾಯಿ ಕಾಲಿಗೆ ಬಿದ್ದು ಮದುವೆಯಾಗಿದ್ದ. ಆದರೆ ಏಕಾಏಕಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಪತಿ ಬೇಕೆಂದು ಪತ್ನಿ ಪೂರ್ಣಿಮಾ ಮನೆ ಬಳಿ ಧರಣಿ ಮಾಡಿದ್ದು, ಅಜ್ಜಿ ವಿರೋಧದ ನಡುವೆಯೂ ಪೊಲೀಸರ ಸಹಾಯದಿಂದ ಮನೆ ತಲಾಶ್ ಮಾಡಿದ್ದು, ತಲಾಶ್ ವೇಳೆ ಮನೆಯಲ್ಲಿ ಪತಿ ಕಂಡುಬಂದಿಲ್ಲ. ಜೂನ್1 ರಂದು ತುಮಕೂರಿನ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಮದುವೆ ಆಗಿತ್ತು. ಹಣ, ಚಿನ್ನಾಭರಣಗಳನ್ನ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದ ಬಗ್ಗೆ ಆರೋಪ ಮಾಡಿದ್ದು, ಘಟನೆ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Crime News: ಕುಡಿದ ಮತ್ತಿನಲ್ಲಿ ವಾಹನ ಕದಿಯುತ್ತಿದ್ದವರ ಬಂಧನ, ಕರೆಂಟ್ ಶಾಕ್ಗೆ ದಂಪತಿ ಸಾವು
ಕೆರೆಗೆ ಕಾರು ಬಿದ್ದಿದ್ದ ಪ್ರಕರಣ: ವಿದ್ಯಾರ್ಥಿ ಶವ ಪತ್ತೆ
ಬೆಂಗಳೂರು: ಆನೇಕಲ್ ತಾಲೂಕಿನ ಬುಜಂಗದಾಸ ಕೆರೆಗೆ ಕಾರು ಬಿದ್ದಿದ್ದ ಪ್ರಕರಣ ಸಂಬಂಧ ಕೆರೆಯಲ್ಲಿ ವಿದ್ಯಾರ್ಥಿ ವಿನ್ಯಾಸ್(20) ಶವ ಪತ್ತೆಯಾಗಿದೆ. ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು 2 ದಿನದ ಹಿಂದೆ ಪಾರ್ಟಿ ಮಾಡಲು 7 ವಿದ್ಯಾರ್ಥಿಗಳು ಬಂದಿದ್ದರು. ಕೆರೆ ಕಟ್ಟೆ ಮೇಲೆ ರ್ಯಾಶ್ ಡ್ರೈವಿಂಗ್ ಮಾಡಿದ್ದ ವಿದ್ಯಾರ್ಥಿಗಳು, ಈ ವೇಳೆ ಕಟ್ಟೆಯ ತಿರುವಿನಲ್ಲಿ ಕೆರೆಗೆ ಜಾರಿ ಕಾರು ಬಿದ್ದಿದೆ. ಈ ವೇಳೆ ಎಲ್ಲ ವಿದ್ಯಾರ್ಥಿಗಳು ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಕೆರೆಯಲ್ಲೀಗ ವಿದ್ಯಾರ್ಥಿಯ ಶವ ಪತ್ತೆಯಾಗಿರುವುದು ಶಾಕ್ ಮೂಡಿಸಿದೆ. ಕೆರೆಯಲ್ಲಿ ಮತ್ತೋರ್ವ ವಿದ್ಯಾರ್ಥಿ ಮುಳುಗಿರುವ ಶಂಕೆ ವ್ಯಕ್ತವಾಗಿದ್ದು, ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಾರಿಯಾಗಿರುವ ವಿದ್ಯಾರ್ಥಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮನೆ ಬೀಗ ಮುರಿದ ಕಳ್ಳತನ: ಖದೀಮರು ಅರೆಸ್ಟ್
ಕಾರವಾರ: ಮನೆ ಬೀಗ ಮುರಿದು 2, 80,000 ರೂ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ನರೇಶ ಠಾಕೂರ್ (51), ಜನಕ ಬಹದ್ದೂರ್ ಬಂಡಾರಿ (33) ಕಳ್ಳತನ ಮಾಡಿದ್ದ ಖದೀಮರು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ಮನೆಯೊಂದರಲ್ಲಿ ಕಳೆದ ತಿಂಗಳು ಖದೀಮರು ಕಳ್ಳತನ ಮಾಡಿದ್ದರು. ದೇವೇಂದ್ರ ಈಶ್ವರಪ್ಪ ನಾಯ್ಕ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದು, 100.6 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಪ್ರಕರಣದ ತನಿಖೆ ಕೈಗೊಂಡು ಖದೀಮರನ್ನ ಮುರುಡೇಶ್ವರ ಠಾಣಾ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
ರಸ್ತೆ ಅಪಘಾತ ಇಬ್ಬರು ಸಾವು
ಕೊಪ್ಪಳ: ರಸ್ತೆ ಅಪಘಾತ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪೂರ ಬಳಿ ನಿನ್ನೆ ತಡರಾತ್ರಿ ನಡೆದಿದೆ. ವೃದ್ದನನ್ನು ಬಚಾವ್ ಮಾಡಲು ಹೋಗಿ ವಾಹನ ಸವಾರ ಮಂಜುನಾಥ್ (31)ಸಾವನ್ನಪ್ಪಿದ್ದಾನೆ. ಮಂಜುನಾಥ್ ಗಂಗಾವತಿ ತಾಲೂಕಿನ ಮಲ್ಲಾಪೂರ ನಿವಾಸಿ. ವೃದ್ದನನ್ನು ಬಚಾವ್ ಮಾಡೋ ವೇಳೆ ವೃದ್ಧನಿಗೂ ಗಾಯವಾಗಿದೆ. ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ವೃದ್ದನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ವೃದ್ದನೂ ಮೃತಪಟ್ಟಿದ್ದಾರೆ. ಮೃತ ವೃದ್ದನ ಗುರುತು ಪತ್ತೆಯಾಗಿಲ್ಲ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ತಿರಂಗಾ ಮೇಲೆ ಜೀಸಸ್ ಸ್ಟಿಕರ್ ಅಂಟಿಸಿದ್ದ ವ್ಯಕ್ತಿ ಅಂದರ್
ಬಳ್ಳಾರಿ: ತಿರಂಗಾ ಮೇಲೆ ಜೀಸಸ್ ಸ್ಟಿಕರ್ ಅಂಟಿಸಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವಂತಹ ಘಟನೆ ನಗರದ ಗಣೇಶ್ ಕಾಲೋನಿಯಲ್ಲಿ ನಡೆದಿದೆ. ತ್ರಿವರ್ಣಧ್ವಜದ ಮಧ್ಯೆ ಜೀಸಸ್ ಎಂದು ಆರೋಪಿ ಬರೆದಿದ್ದ. ಯುವಕನಿಗೆ ಹಿಂದೂಪರ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು. ಜೀಸಸ್ ನಾಮಫಲಕವನ್ನು ಗಾಂಧಿನಗರ ಪೊಲೀಸರು ತೆರವುಗೊಳಿಸಿದರು. ಸದ್ಯ ಆರೋಪಿ ರಘುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:45 pm, Sun, 14 August 22