ಬಿಜೆಪಿ ಭರವಸೆಗೆ ಬಗ್ಗದ ಅರುಣ್ ಕುಮಾರ್ ಪುತ್ತಿಲ; ಮುಂದುವರಿದ ಮನವೊಲಿಕೆ ಕಸರತ್ತು

| Updated By: Rakesh Nayak Manchi

Updated on: Mar 02, 2024 | 7:04 PM

ಹಲವು ಸುತ್ತಿನ ಮಾತುಕತೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಪ್ರಬಲ ಹಿಂದೂ ನಾಯಕ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ವಿಫಲಗೊಂಡಿದೆ. ಲೋಕಸಭೆ ಚುನಾವಣೆಗೆ ಪುತ್ತಿಲ ಅವರು ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತಾ ಆಹ್ವಾನ ನೀಡಲಾಗಿದೆ ಎಂದರು.

ಬಿಜೆಪಿ ಭರವಸೆಗೆ ಬಗ್ಗದ ಅರುಣ್ ಕುಮಾರ್ ಪುತ್ತಿಲ; ಮುಂದುವರಿದ ಮನವೊಲಿಕೆ ಕಸರತ್ತು
ಬಿಜೆಪಿಯ ಭರವಸೆಗೆ ಬಗ್ಗದ ಅರುಣ್ ಕುಮಾರ್ ಪುತ್ತಿಲ; ಮುಂದುವರಿದ ಮನವೊಲಿಕೆ ಕಸರತ್ತು
Follow us on

ಮಂಗಳೂರು, ಮಾ.2: ಹಲವು ಸುತ್ತಿನ ಮಾತುಕತೆಯ ನಂತರ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪ್ರಬಲ ಹಿಂದೂ ನಾಯಕ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ (Arun Kumar Puthila) ಬಿಜೆಪಿ ಸೇರ್ಪಡೆ ವಿಫಲಗೊಂಡಿದೆ. ಲೋಕಸಭೆ ಚುನಾವಣೆಗೆ (Lok Sabha Election) ಪುತ್ತಿಲ ಅವರು ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ, ಅರುಣ್ ಕುಮಾರ್ ಪುತ್ತಿಲ ಬಿಜೆಪಿ (BJP) ಸೇರ್ಪಡೆಗೆ ಮುಕ್ತಾ ಆಹ್ವಾನ ನೀಡಿದೆ.

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಆಹ್ವಾನ ನೀಡಿದ್ದೇವೆ. ಕಳೆದ ಎರಡು ದಿನಗಳಿಂದ ಅವರ ಜೊತೆ ಸಂಧಾನ ನಡೆಯುತ್ತಿದೆ. ಮಂಡಲ ಅಧ್ಯಕ್ಷ, ಜಿಲ್ಲಾಧ್ಯಕ್ಷ, ಪದಾಧಿಕಾರಿ ಕೊಡಬೇಕೆಂದು ಹೇಳಿದ್ದಾರೆ. ಅವರ ಬೇಡಿಕೆಗೆ ನಾವು ಓಕೆ ಅಂದಿದ್ದೇವೆ. ಆದರೆ ಮೊದಲು ಪಕ್ಷಕ್ಕೆ ಸೇರಬೇಕು. ಸೇರಿದ ಬಳಿಕ ಸೂಕ್ತ ನಾಯಕತ್ವ ಕೊಡುವ ಬಗ್ಗೆ ತೀರ್ಮಾನ ಆಗುತ್ತದೆ. ಅವರಿಗೆ ಇದು ಒಪ್ಪಿಗೆ ಆಗಬೇಕಾಗಿದೆ ಎಂದರು.

ಇದನ್ನೂ ಓದಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧೆ ಫಿಕ್ಸ್- ಅಧಿಕೃತ ಘೋಷಣೆ

ಮುಂದುವರಿದ ಪುತ್ತಿಲ ಮನವೋಲಿಕೆ ಕಸರತ್ತು

ಬಿಜೆಪಿ ಮೇಲೆ ಪರಿಣಾಮ ಬೀರುವಂತಹ ಯಾವುದೇ ತೀರ್ಮಾನ ಅರುಣ್ ಕುಮಾರ್ ಪುತ್ತಿಲ ಮಾಡಲ್ಲ. ಸಂಧಾನ ಮಾಡುತ್ತಿರುವಾಗ ಸಂಧಾ‌ನದ ಪ್ರಶ್ನೆಯೇ ಇಲ್ಲ ಎಂದು ಹೇಳುವುದಕ್ಕೆ ಅರ್ಥವಿಲ್ಲ. ಅವಶ್ಯಕತೆ ಬಿದ್ದರೆ ಎಷ್ಟು ಸಲ ಬೇಕಾದರೂ ರಾಜ್ಯಾಧ್ಯಕ್ಷರು ಕರೆದು‌ ಮಾತನಾಡುತ್ತಾರೆ. ಅವರನ್ನು ಸೇರಿಸಲು ಮನವೊಲಿಸುವ ಎಲ್ಲಾ ಕೆಲಸವನ್ನು ಮಾಡುತ್ತಾರೆ. ಎರಡು ಕಡೆ ಎಷ್ಟು ಬೇಗ ಮುಗಿಸುತ್ತಾರೆಯೋ ಅಷ್ಟು ಬೇಗ ಗೊಂದಲ ಮುಗಿಯುತ್ತದೆ ಎಂದರು.

ಬಿಜೆಪಿ vs ಪುತ್ತಿಲ ಪರಿವಾರ

ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಹಿಂದೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಪುತ್ತಿಲ ಅವರು ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ ಕಾಂಗ್ರೆಸ್​ನ ಅಶೋಕ್​ ರೈ (ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆ) ಅವರಿಗೆ ಪೈಪೋಟಿ ನೀಡಿ ನಾಲ್ಕು ಸಾವಿರ ಮತಗಳಿಂದ ಸೋಲು ಅನುಭವಿಸಿದ್ದರು.

ಇದನ್ನೂ ಓದಿ: ಅರುಣ್ ಕುಮಾರ್ ಪುತ್ತಿಲ ಬಂಡಾಯದ ಬಗ್ಗೆ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ಹೀಗಿದೆ ನೋಡಿ!

ಈ ಹೀನಾಯ ಸೋಲಿನ ನಂತರವೂ ಎಚ್ಚೆತ್ತುಕೊಂಡಿಲ್ಲ ಎಂಬಂತಿದೆ ಬಿಜೆಪಿ ನಡೆ. ಪುತ್ತಿಲ ಸ್ಪರ್ಧೆಯಿಂದಾಗಿ ಭದ್ರಕೋಟೆ ಪುತ್ತೂರಿನಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ಮತ್ತು ಕ್ಷೇತ್ರ ಕಾಂಗ್ರೆಸ್ ಪಾಲಾಗಿದ್ದರೂ ಪ್ರತಿಷ್ಠೆ ಕಾರಣದಿಂದ ಬಿಜೆಪಿ ಮಾತ್ರ ಪುತ್ತಿಲ ಅವರಿಗೆ ಜಗ್ಗುತ್ತಿಲ್ಲ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಕೇಳಿಬರುತ್ತಿದೆ.

ಅರುಣ್ ಕುಮಾರ್ ಪುತ್ತಿಲ ಅವರಿಗೆ ಸೂಕ್ತ ಸ್ಥಾನಮಾನ ನೀಡಿ ಪಕ್ಷ ಸೇರಿಸುವ ಬದಲು, ಯಾವುದೇ ಷರತ್ತುಗಳಿಲ್ಲದೆ ಪಕ್ಷ ಸೇರ್ಪಡೆಯಾಗಿ, ನಂತರ ಚರ್ಚಿಸಿ ಅಧಿಕಾರ ನೀಡುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಇದಕ್ಕೆ ಅರುಣ್ ಕುಮಾರ್ ಒಪ್ಪುತ್ತಿಲ್ಲ. ಮೊದಲು ಸೂಕ್ತ ಸ್ಥಾನಮಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Sat, 2 March 24