AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಬುರುಡೆ ಕೇಸ್​​: ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರಗಳು FSLಗೆ ರವಾನೆ, ಸಿಕ್ಕಿದ್ದೇಷ್ಟು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಸಮೀಪದ ಬಂಗ್ಲೆಗುಡ್ಡದಲ್ಲಿ ಕಾರ್ಯಾಚರಣೆ ವೇಳೆ ಸಿಕ್ಕ ಮಾನವರ 7 ಅಸ್ಥಿಪಂಜರಗಳ ರಹಸ್ಯ ಭೇದಿಸಲು ಎಸ್​ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಸಿಕ್ಕ 7 ಅಸ್ಥಿಪಂಜರಗಳನ್ನು ಎಸ್​ಐಟಿ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಎಫ್​ಎಸ್​ಎಲ್​​ಗೆ ರವಾನಿಸಿದ್ದಾರೆ.

ಧರ್ಮಸ್ಥಳ ಬುರುಡೆ ಕೇಸ್​​: ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರಗಳು FSLಗೆ ರವಾನೆ, ಸಿಕ್ಕಿದ್ದೇಷ್ಟು
ಧರ್ಮಸ್ಥಳ ಬುರುಡೆ ಕೇಸ್​
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on:Jan 20, 2026 | 5:52 PM

Share

ಮಂಗಳೂರು, ಜನವರಿ 20: ಧರ್ಮಸ್ಥಳದ (Dharmasthala) ವಿರುದ್ಧ ಷಡ್ಯಂತ್ರ ಮತ್ತು ಅಪಪ್ರಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಂಗ್ಲೆಗುಡ್ಡದಲ್ಲಿ ಸಿಕ್ಕ 7 ಅಸ್ಥಿಪಂಜರಗಳನ್ನು ಎಸ್​​ಐಟಿ ಅಧಿಕಾರಿಗಳು ಎಫ್​ಎಸ್​ಎಲ್​​​ (FSL) ಗೆ ರವಾನೆ ಮಾಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಬೆಂಗಳೂರಿನ ಮಡಿವಾಳದಲ್ಲಿರುವ ಎಫ್​ಎಸ್​ಎಲ್​​​ ಕಚೇರಿಗೆ ಅಸ್ಥಿಪಂಜರ ರವಾನೆ ಮಾಡಲಾಗಿದ್ದು, ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಮಾನವನ 7 ಅಸ್ಥಿಪಂಜರಗಳು ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಸಮೀಪದ ಬಂಗ್ಲೆಗುಡ್ಡ ಅರಣ್ಯದಲ್ಲಿ ಎಸ್​​ಐಟಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಮಾನವನ 7 ಅಸ್ಥಿಪಂಜರ ಪತ್ತೆಯಾಗಿದ್ದವು. 2025ರ ಸೆಪ್ಟೆಂಬರ್​ 17ರಂದು 5 ಮತ್ತು ಸೆ.18ರಂದು 2 ಒಟ್ಟು ಏಳು ಅಸ್ಥಿಪಂಜರಗಳನ್ನು ಎಸ್​ಐಟಿ ಅಧಿಕಾರಿಗಳು ಪತ್ತೆಹಚ್ಚಿದ್ದರು.

ಇದನ್ನೂ ಓದಿ: ಬುರುಡೆ ಕೇಸ್​​ಗೆ ಎಂಟ್ರಿಕೊಟ್ಟ ಶ್ರೀಕ್ಷೇತ್ರ ಧರ್ಮಸ್ಥಳ: ಕೋರ್ಟ್​​ನಲ್ಲಿ ವಕಾಲತ್ತು ಸಲ್ಲಿಕೆ

ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಸದ್ಯ ಹೆಚ್ಚಿನ ತನಿಖೆಗಾಗಿ ಬೆಳ್ತಂಗಡಿ ಎಸ್​​ಐಟಿ ಕಚೇರಿಯಿಂದ ಬೆಂಗಳೂರಿನ ಮಡಿವಾಳದಲ್ಲಿರುವ ಎಫ್​ಎಸ್​ಎಲ್ ಕಚೇರಿಗೆ ಅಸ್ಥಿಪಂಜರಗಳನ್ನು ರವಾನಿಸಲಾಗಿದೆ.

ಇನ್ನು ಅಸ್ಥಿಪಂಜರದ ಜಾಡು ಹಿಡಿದು ಹೊರಟ್ಟಿದ್ದ ಎಸ್​ಐಟಿ ಮಹತ್ವದ ಮಾಹಿತಿ ಕಲೆ ಹಾಕಿತ್ತು. ಪತ್ತೆಯಾಗಿದ್ದ 7 ಬುರುಡೆಗಳ ಪೈಕಿ ಒಂದು ಬುರುಡೆ ಕೊಡಗಿನ ಯು.ಬಿ.ಅಯ್ಯಪ್ಪ ಎಂಬುದು ಬಹುತೇಕ ಖಚಿತವಾಗಿತ್ತು. ಅಸ್ಥಿಪಂಜರ ಪತ್ತೆಯಾದ ಜಾಗದಲ್ಲಿ ಹಿರಿಯ ನಾಗರಿಕರೊಬ್ಬರ ಗುರುತಿನ ಚೀಟಿ ಪತ್ತೆಯಾಗಿತ್ತು. ಜೊತೆಗೆ ತ್ರಿ ಲೆಗ್ ಬ್ಯಾಲೆನ್ಸ್ ವಾಕಿಂಗ್ ಸ್ಟಿಕ್​ ಕೂಡ ಪತ್ತೆಯಾಗಿತ್ತು.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್​​ಗೆ ಮೇಜರ್​​ ಟ್ವಿಸ್ಟ್​​: SIT ತನಿಖೆಯಿಂದ ಕೊನೆಗೂ ಬಯಲಾಯ್ತು ಸತ್ಯ!

ಗುರುತಿನ ಚೀಟಿ ಕೊಡಗು ಮೂಲದ ಯು.ಬಿ. ಅಯ್ಯಪ್ಪ ಎಂಬುವರಿಗೆ ಸೇರಿದ್ದಾಗಿತ್ತು. ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ ಅಯ್ಯಪ್ಪ ಏಳು ವರ್ಷಗಳ ಹಿಂದೆಯೇ ಕಾಣೆಯಾಗಿದ್ದರು. ಮೈಸೂರಿಗೆ ಚಿಕಿತ್ಸೆಗೆಂದು ತೆರಳಿದವರು ನಾಪತ್ತೆಯಾಗಿದ್ದರು. ಅಯ್ಯಪ್ಪ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು‌‌. ಈ ವೇಳೆ ಅವರ ಬಳಿ ತ್ರಿ ಲೆಗ್ ಬ್ಯಾಲೆನ್ಸ್ ವಾಕಿಂಗ್ ಸ್ಟಿಕ್ ಇದ್ದಿದ್ದಾಗಿ ಉಲ್ಲೇಖಿಸಲಾಗಿತ್ತು. ಹಾಗಾಗಿ ಆ ಅಸ್ಥಿಪಂಜರ ಅಯ್ಯಪ್ಪ ಅವರದ್ದೇ ಎಂದು ಎಸ್​ಐಟಿ ಶಂಕಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 5:49 pm, Tue, 20 January 26