ದಿನೇಶ್ ಕೊಲೆ ಪ್ರಕರಣ: ಹರ್ಷ ಕುಟುಂಬಕ್ಕೆ ಹೆಚ್ಚು ಪರಿಹಾರ ನೀಡಿದ್ದಾರೆ; ನಾವು ದಲಿತರೆಂಬ ಕಾರಣಕ್ಕೆ ಸೂಕ್ತ ಪರಿಹಾರ ಕೊಟ್ಟಿಲ್ಲ

| Updated By: ganapathi bhat

Updated on: Mar 25, 2022 | 3:44 PM

ನಮಗೆ ಮಾತ್ರ ಹಿಂದುಳಿದ ವರ್ಗದವರಿಗೆ ನೀಡೋ ಪರಿಹಾರ ಮಾತ್ರ ಕೊಟ್ಟಿದ್ದಾರೆ. ನಾವು ಹಿಂದುಗಳು, ನಾವು ಮನುಷ್ಯರು. ದಲಿತರು ಅನ್ನೊ ಕಾರಣಕ್ಕೆ ಮಾತ್ರ ಸರಿಯಾದ ಪರಿಹಾರ ನೀಡಿಲ್ಲ. ಘೋಷಣೆ ಮಾಡಿದ ಪರಿಹಾರದಲ್ಲಿ ಅರ್ಧದಷ್ಟು ಮಾತ್ರ ಪರಿಹಾರ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ದಿನೇಶ್ ಕೊಲೆ ಪ್ರಕರಣ: ಹರ್ಷ ಕುಟುಂಬಕ್ಕೆ ಹೆಚ್ಚು ಪರಿಹಾರ ನೀಡಿದ್ದಾರೆ; ನಾವು ದಲಿತರೆಂಬ ಕಾರಣಕ್ಕೆ ಸೂಕ್ತ ಪರಿಹಾರ ಕೊಟ್ಟಿಲ್ಲ
ಕವಿತಾ
Follow us on

ಮಂಗಳೂರು: ಕೊಲೆಯಾದ ಹರ್ಷ ಕುಟುಂಬಕ್ಕೆ ಹೆಚ್ಚು ಪರಿಹಾರ ನೀಡಿದ್ದಾರೆ. ಆದರೆ ನಾವು ದಲಿತರೆಂಬ ಕಾರಣಕ್ಕೆ ಸೂಕ್ತ ಪರಿಹಾರ ಕೊಟ್ಟಿಲ್ಲ ಎಂದು ಕನ್ಯಾಡಿಯಲ್ಲಿ ಕೊಲೆಯಾದ ದಿನೇಶ್ ಎಂಬವರ ಪತ್ನಿ ಕವಿತಾ ಹೇಳಿಕೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದಲ್ಲಿ ದಿನೇಶ್ ಎಂಬವರ ಕೊಲೆ ನಡೆದಿತ್ತು. ಹಿಂದೂ ಮುಖಂಡನಿಂದ ದಿನೇಶ್ ಎಂಬವರು ಕೊಲೆಯಾಗಿದ್ದರು. ಆದರೆ ಹೆಚ್ಚು ಪರಿಹಾರ ಕೊಟ್ಟಿಲ್ಲ. ಘೋಷಣೆಯಾಗಿದ್ದ ಪರಿಹಾರದಲ್ಲೂ ಅರ್ಧದಷ್ಟು ನೀಡಿದ್ದಾರೆ ಎಂದು ಪತ್ನಿ ಕವಿತಾ ಹೇಳಿಕೆ ನೀಡಿದ್ದಾರೆ.

ಕೊಲೆಯಾದ ಹರ್ಷ ಕುಟುಂಬಕ್ಕೆ ಅಪಾರ ಪರಿಹಾರ ನೀಡಲಾಗಿದೆ. ನಮಗೆ ಮಾತ್ರ ಹಿಂದುಳಿದ ವರ್ಗದವರಿಗೆ ನೀಡೋ ಪರಿಹಾರ ಮಾತ್ರ ಕೊಟ್ಟಿದ್ದಾರೆ. ನಾವು ಹಿಂದುಗಳು, ನಾವು ಮನುಷ್ಯರು. ದಲಿತರು ಅನ್ನೊ ಕಾರಣಕ್ಕೆ ಮಾತ್ರ ಸರಿಯಾದ ಪರಿಹಾರ ನೀಡಿಲ್ಲ. ಘೋಷಣೆ ಮಾಡಿದ ಪರಿಹಾರದಲ್ಲಿ ಅರ್ಧದಷ್ಟು ಮಾತ್ರ ಪರಿಹಾರ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ಇಂದು ಮಾತನಾಡಿದ್ದ ಸಿದ್ದರಾಮಯ್ಯ ಕೂಡ ಇದೇ ವಿಚಾರ ಪ್ರಸ್ತಾಪಿಸಿದ್ದರು. ಹರ್ಷ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಕೊಟ್ಟಿದ್ದಾರೆ. ಅದೇ ಕರಾವಳಿಯ ದಿನೇಶ್ ಕುಟುಂಬಕ್ಕೆ ಪರಿಹಾರ ಕೊಟ್ರಾ? ಪರಿಹಾರವೇನು ಇವರ ಅಪ್ಪನ ಮನೆಯಿಂದ ಕೊಡುತ್ತಾರಾ? ಸಾರ್ವಜನಿಕರು ಬೆವರು ಸುರಿಸಿ ದುಡಿದು ಕಟ್ಟಿರುವ ತೆರಿಗೆ ಹಣ ಅದು. ಜನರಿಗೆ ಮಕ್ಮಲ್ ಟೋಪಿ ಹಾಕಬಹುದೆಂದು ಬಿಜೆಪಿ ತಿಳಿದುಕೊಂಡಿದೆ. ಒಂದಲ್ಲಾ ಒಂದು ದಿನ ರಾಜ್ಯದ ಜನರಿಗೆ ಸತ್ಯ ಗೊತ್ತಾಗುತ್ತದೆ. ಭಾವನಾತ್ಮಕ ವಿಚಾರಗಳಿಂದಲೇ ಬಿಜೆಪಿ ಇಕ್ಕಟ್ಟಿಗೆ ಸಿಲುಕುತ್ತದೆ. ರಾಜ್ಯದ ಜನರು ದಡ್ಡರಲ್ಲ, ಎಲ್ಲವನ್ನು ಗಮನಿಸುತ್ತಾರೆ ಎಂದು ಸಿದ್ದರಾಮನಹುಂಡಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಸರ್ಕಾರ ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡ್ತಿದೆ. ಸಂಘ ಪರಿವಾರದವರು ಅಲ್ಪಸಂಖ್ಯಾತರ ಕೊಲೆ ಮಾಡಿದರೆ ಮೃತ ಅಲ್ಪಸಂಖ್ಯಾತರಿಗೆ ಕಡಿಮೆ ಪರಿಹಾರವನ್ನು ಕೊಡುತ್ತಾರೆ. ಮುಸ್ಲಿಮರು ಹಿಂದೂಗಳ ಕೊಲೆ ಮಾಡಿದರೆ ಹೆಚ್ಚು ಪರಿಹಾರ. ಹತ್ಯೇಗೀಡಾದ ಹಿಂದೂಗಳ ಕುಟುಂಬಕ್ಕೆ ಹೆಚ್ಚು ಪರಿಹಾರ ನೀಡುತ್ತಾರೆ. ಇಂತಹ ತಾರತಮ್ಯ ಏಕೆಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಇಂತಹ ವರ್ತನೆಯಿಂದ ಮತ ಕ್ರೋಡೀಕರಣದ ಲೆಕ್ಕಾಚಾರ ಇದೆ. ಆದರೆ ಬಿಜೆಪಿಯವರ ಲೆಕ್ಕಾಚಾರಗಳು ಉಲ್ಟಾ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳದ ಕನ್ಯಾಡಿ ಬಳಿ ದಿನೇಶ್ ಕೊಲೆ ಪ್ರಕರಣ; ಟಿವಿ9ಗೆ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯ ಲಭ್ಯ

ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಕಡಿಮೆ ಪರಿಹಾರ, ಹತ್ಯೆಗೀಡಾದ ಹಿಂದೂಗಳ ಕುಟುಂಬಕ್ಕೆ ಹೆಚ್ಚು ಪರಿಹಾರ: ಸಿದ್ದರಾಮಯ್ಯ ಕಿಡಿ