ಹಬ್ಬದ ಸೀಸನ್: ಮಂಗಳೂರು, ಗುಜರಾತ್​​ನ ಉಧನಾ ಮಧ್ಯೆ ವಾರಕ್ಕೆ ಎರಡು ವಿಶೇಷ ರೈಲು

|

Updated on: Nov 01, 2023 | 3:32 PM

ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೊಂಕಣ್ ರೈಲ್ವೇ ತಿಳಿಸಿದೆ. ಕೊಂಕಣ ರೈಲ್ವೇ ವಿಶೇಷ ರೈಲು ಸಂಖ್ಯೆ 09057 / 09058 ಉಧನಾ ಜಂಕ್ಷನ್ - ಮಂಗಳೂರು ಜಂಕ್ಷನ್ - ಉಧನಾ ಜಂಕ್ಷನ್ ಮಧ್ಯೆ ಸಂಚರಿಸಲಿದೆ. ರೈಲು ಪ್ರಯಾಣದ ದಿನಾಂಕ ಹಾಗೂ ಹೆಚ್ಚಿನ ವಿವರ ಇಲ್ಲಿದೆ.

ಹಬ್ಬದ ಸೀಸನ್: ಮಂಗಳೂರು, ಗುಜರಾತ್​​ನ ಉಧನಾ ಮಧ್ಯೆ ವಾರಕ್ಕೆ ಎರಡು ವಿಶೇಷ ರೈಲು
ಸಾಂದರ್ಭಿಕ ಚಿತ್ರ
Follow us on

ಮಂಗಳೂರು, ನವೆಂಬರ್ 1: ಹಬ್ಬದ ಅವಧಿಯ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕೊಂಕಣ ರೈಲ್ವೇಯು (Konkan Railway) ಮಂಗಳೂರು (Mangaluru) ಮತ್ತು ಗುಜರಾತ್​​ನ ಉಧನಾ (Gujrat Udhna) ಮಧ್ಯೆ ವಾರಕ್ಕೆ ಎರಡು ವಿಶೇಷ ರೈಲು ಘೋಷಣೆ ಮಾಡಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೊಂಕಣ್ ರೈಲ್ವೇ ತಿಳಿಸಿದೆ.

ಕೊಂಕಣ ರೈಲ್ವೇ ವಿಶೇಷ ರೈಲು ಸಂಖ್ಯೆ 09057 / 09058 ಉಧನಾ ಜಂಕ್ಷನ್ – ಮಂಗಳೂರು ಜಂಕ್ಷನ್ – ಉಧನಾ ಜಂಕ್ಷನ್ ಮಧ್ಯೆ ಸಂಚರಿಸಲಿದೆ.

ರೈಲು ಸಂಖ್ಯೆ 09057 ಉಧನಾ ಜಂಕ್ಷನ್ – ಮಂಗಳೂರು ಜಂಕ್ಷನ್ ಮಧ್ಯೆ ಶುಕ್ರವಾರ ಮತ್ತು ಭಾನುವಾರದಂದು ಸಂಚರಿಸಲಿದೆ. ಈ ದಿನಗಳಂದು ಉಧನಾ ಜಂಕ್ಷನ್​ನಿಂದ 19:45 ಗಂಟೆಗೆ ರೈಲು ಹೊರಡಲಿದೆ. ಅಂದರೆ ನವೆಂಬರ್ 03, 05, 10, 12, 17, 19, 24, 26 ರಂದು ಹಾಗೂ ಡಿಸೆಂಬರ್ 1, 3, 08, 10, 15, 17, 22, 24, 29, 31ರಂದು ಸಂಚರಿಸಲಿದೆ.

ರೈಲು ಸಂಖ್ಯೆ 09058 ಮಂಗಳೂರು ಜಂಕ್ಷನ್ – ಉಧನಾ ಜಂಕ್ಷನ್ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಶನಿವಾರ ಮತ್ತು ಸೋಮವಾರಗಳಂದು ಅಂದರೆ ನವೆಂಬರ್ 04, 06, 11, 13, 18, 20, 25, 27 ರಂದು ಮತ್ತು ಡಿಸೆಂಬರ್ 02, 04, 09, 11, 16, 18, 23, 25, 30, ಜನವರಿ 1ರಂದು ಮಂಗಳೂರಿನಿಂದ ಹೊರಡಲಿದೆ.

ಇದನ್ನೂ ಓದಿ: ಆಧಾರ್​​ ಫಿಂಗರ್​​ ಪ್ರಿಂಟ್​ಗೇ ಕನ್ನ, ಖಾತೆಯಿಂದ ಹಣ ವಿತ್​ಡ್ರಾ: ಮಂಗಳೂರಿನಲ್ಲಿ ಸೈಬರ್ ಚೋರರು ಹಣ ಎಗರಿಸುತ್ತಿದ್ದುದು ಹೀಗೆ

ವಿಶೇಷ ರೈಲುಗಳಿಗೆ ವಲ್ಸಾದ್, ವಾಪಿ, ಪಾಲ್ಘರ್, ವಸಾಯಿ ರಸ್ತೆ, ಭಿವಂಡಿ ರಸ್ತೆ, ಪನ್ವೇಲ್, ರೋಹಾ, ಮಂಗಾಂವ್, ಖೇಡ್, ಚಿಪ್ಲುನ್, ಸವಾರ್ದಾ, ಸಂಗಮೇಶ್ವರ ರಸ್ತೆ, ರತ್ನಗಿರಿ, ರಾಜಾಪುರ ರಸ್ತೆ, ವೈಭವ್ವಾಡಿ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಮ್, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕೆನಕೋನ, ಕಾರವಾರ, ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ, ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಮತ್ತು ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ