ಮಂಗಳೂರು: ರಸ್ತೆ ಬದಿ ಕುಡುಕನ ಕೈಗೆ ಸಿಕ್ತು ಕಂತೆ ಕಂತೆ ಹಣದ ಬಾಕ್ಸ್, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ನವೆಂಬರ್ 27ರಂದು ನಗರದ ಪಂಪ್ವೆಲ್ ಬಾರ್ ಬಳಿ ಮದ್ಯವಸನಿಗೆ ಕಂತೆ ಕಂತೆ ಹಣ ಇರುವ ಬಾಕ್ಸ್ ಸಿಕ್ಕಿದೆ.
ದಕ್ಷಿಣ ಕನ್ನಡ: ಸುಮ್ನೆ ದಾರಿಯಲ್ಲಿ ಹೋಗುತ್ತಿದ್ದಾಗ ಕಂತೆ ಕಂತೆ ಹಣ ಸಿಕ್ಕರೇ ಜಗತ್ತೇ ಅಂಗೈಯಲ್ಲಿ ಎಂದು ಅಂದುಕೊಳ್ಳುತ್ತಾರೆ. ಹಾಗೆಯೇ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಗಾದೆ ಮಾತಿನಂತೆ, ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಮಂಗಳೂರಿನಲ್ಲಿ (Mangalore) ಮದ್ಯವಸ್ಯನಿಯಾಗಿರುವ ಶಿವರಾಜ ಎಂಬುವರಿಗೆ ಕಳೆದು ತಿಂಗಳು ನವೆಂಬರ್ 27ರಂದು ನಗರದ ಪಂಪ್ವೆಲ್ ಬಾರ್ ಬಳಿ ಕಂತೆ ಕಂತೆ ಹಣ ಇರುವ ಬಾಕ್ಸ್ ಸಿಕ್ಕಿದೆ. ಬಾಕ್ಸ್ನಲ್ಲಿ 500, 2,000 ರೂ. ಮುಖಬೆಲೆಯ ಗರಿ ಗರಿ ನೋಟುಗಳ ಹಣವಿತ್ತು.
ಹಣ ಸಿಕ್ಕಿದ್ದೇ ತಡ ಮದ್ಯ ವ್ಯಸನಿಯಾಗಿದ್ದ ಶಿವರಾಜ್ ಹಣದ ಬಾಕ್ಸ್ನಲ್ಲಿದ್ದ 1 ಸಾವಿರ ರೂ ನೀಡಿ ಮದ್ಯ ಸೇವಿಸಿದ್ದಾರೆ. ನಂತರ ತನ್ನ ಜೊತೆಗಿದ್ದವರಿಗೂ ನೋಟಿನ ಕಂತೆ ನೀಡಿದ್ದಾರೆ. ಈ ವಿಷಯ ಕಂಕನಾಡಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಖಾಕಿ ಹಣದ ಬಾಕ್ಸ್ ಸಮೇತ ಶಿವರಾಜ್ನನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಮದುಮಗ ತನ್ನ ಪ್ರೀತಿಯ ನಾಯಿಯೊಂದಿಗೆ ಮದುವೆ ಮಂಟಪಕ್ಕೆ ಬಂದಾಗ
ನಂತರ ಮೂರು ದಿನಗಳ ಕಾಲ ಠಾಣೆಯಲ್ಲಿ ಇಟ್ಟುಕೊಂಡು ಬಿಟ್ಟು ಕಳಿಸಿದ್ದಾರೆ. ಶಿವರಾಜ್ ಬಾಕ್ಸ್ನಲ್ಲಿ 5ರಿಂದ 10 ಲಕ್ಷ ಇತ್ತು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬಾಕ್ಸ್ನಲ್ಲಿ 49 ಸಾವಿರ ರೂ ಮಾತ್ರ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ .
ವಿಪರ್ಯಾಸವೆಂದರೆ ವಾರ ಕಳೆದರೂ ಹಣದ ವಾರಸುದಾರರು ಮಾತ್ರ ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಪೊಲೀಸರ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ. ಜೊತೆಗೆ ಚುನಾವಣೆ ಹೊಸ್ತಿನಲ್ಲಿ ಈ ರೀತಿ ಹಣದ ಕಂತೆ ಕಂತೆ ಬಾಕ್ಸ್ ಸಿಕ್ಕಿರುವುದು ಮಾತ್ರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ .
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Tue, 6 December 22