Fact Check: ಇವು ಧರ್ಮಸ್ಥಳದಲ್ಲಿ ಸಿಕ್ಕ ಅಸ್ತಿಪಂಜರಗಳೇ?: ವೈರಲ್ ಫೋಟೋದ ಸತ್ಯ ಇಲ್ಲಿದೆ ನೋಡಿ

Dharmasthala Case Latest News: ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದ ಶೋಧ ಕಾರ್ಯ ಹಾಗೂ ತನಿಖೆ ತೀವ್ರಗೊಂಡಿದೆ. ಒಂದೆಡೆ, ದೂರುದಾರ ತಿಳಿಸಿರುವ ಸ್ಥಳಗಳಲ್ಲಿ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಮಾನವ ಅಸ್ಥಿಪಂಜರಗಳನ್ನು ತೋರಿಸುವ ಫೋಟೋವೊಂದು ವೈರಲ್ ಆಗುತ್ತಿದೆ. ಇದು ಧರ್ಮಸ್ಥಳಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ.

Fact Check: ಇವು ಧರ್ಮಸ್ಥಳದಲ್ಲಿ ಸಿಕ್ಕ ಅಸ್ತಿಪಂಜರಗಳೇ?: ವೈರಲ್ ಫೋಟೋದ ಸತ್ಯ ಇಲ್ಲಿದೆ ನೋಡಿ
Dharmasthala Skeletons Fact Check
Updated By: Vinay Bhat

Updated on: Aug 11, 2025 | 10:01 PM

ಬೆಂಗಳೂರು (ಆ. 11): ಧರ್ಮಸ್ಥಳದಲ್ಲಿ (Dharmasthala) ನೂರಾರು ಶವ ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯನ್ನು ತೀವ್ರಗೊಳಿಸಿದ್ದು, ಉತ್ಖನನ ಕಾರ್ಯ ಮುಂದುವರಿಸಿದ್ದಾರೆ. ಇಲ್ಲಿಯವರೆಗೆ, ಅನಾಮಿಕ ದೂರುದಾರ ತೋರಿಸಿದ 15 ಸ್ಥಳಗಳನ್ನು ಎಸ್‌ಐಟಿ ಅಗೆದಿದ್ದು, ಸ್ಥಳ 6 ರಲ್ಲಿ ಮಾತ್ರ ಮಾನವ ಅವಶೇಷಗಳು ಪತ್ತೆಯಾಗಿವೆ. ಆದರೆ ಉಳಿದ ಕಡೆಗಳಲ್ಲಿ ಶವ ಪತ್ತೆಯಾಗದ ಕಾರಣ ಜಿಪಿಆರ್ ತಂತ್ರಜ್ಞಾನ ಬಳಸಲು ಎಸ್ಐಟಿ ನಿರ್ಧರಿಸಿದೆ. ಈವರೆಗೆ ಎರಡು ಕಡೆ ಮಾತ್ರ ಮೃತದೇಹಗಳ ಅವಶೇಷ ಸಿಕ್ಕಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗುತ್ತಿದೆ.

ಉತ್ಖನನ ಪ್ರಕ್ರಿಯೆಯಲ್ಲಿರುವ ಕೆಲವು ಮಾನವ ಅಸ್ಥಿಪಂಜರಗಳನ್ನು ತೋರಿಸುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದು ಧರ್ಮಸ್ಥಳದ ಉತ್ಖನನ ಸ್ಥಳಗಳದ್ದು ಎಂದು ಹೇಳಲಾಗುತ್ತಿದೆ. ‘‘ಈ ಅಸ್ಥಿಪಂಜರಗಳಲ್ಲಿ ಕನಿಷ್ಠ ಒಂದು ಪ್ರಾಣಿಯಾದರೂ ಇದ್ದರೆ ಒಳ್ಳೆಯದು, ಅವೆಲ್ಲವೂ ರಸ್ತೆಗಳಲ್ಲಿ ಬರುತ್ತವೆ. ಆದರೆ ಇಲ್ಲಿ ಎಲ್ಲರೂ ಮನುಷ್ಯರೇ. #ಧರ್ಮಸ್ಥಳ’’ ಎಂದು ಫೇಸ್‌ಬುಕ್‌ನಲ್ಲಿ ತೆಲುಗು ಭಾಷೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ
ಸ್ವಾತಂತ್ರ್ಯ ಪ್ರಯುಕ್ತ ಮುದ್ರಾ ಯೋಜನೆಯಡಿಯಲ್ಲಿ 1000 ರೂ. ನೀಡಲಾಗುತ್ತಿದೆ?
ಲೆಜೆಂಡ್ಸ್ ಟೂರ್ನಿ ಮಧ್ಯೆ ಅಫ್ರಿದಿ ಜೊತೆ ನಗುತ್ತಾ ಮಾತನಾಡಿದ ಅಜಯ್ ದೇವಗನ್?
ಉದಯಪುರ ಫೈಲ್ಸ್ ಸಿನಿಮಾ ನಟನ ಮನೆಗೆ ಬೆಂಕಿ ಹಂಚಿದ ಮುಸ್ಲಿಮರು?
ಲಾರ್ಡ್ಸ್‌ನಲ್ಲಿ ಕೊಹ್ಲಿ ಫೋಟೋದೊಂದಿಗೆ ಸಚಿನ್ ಪೋಸ್?: ಸುಳ್ಳು...

ಇದು ಫ್ರಾನ್ಸ್​ನ ಫೋಟೋ:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಫೋಟೋವು 2011 ಮತ್ತು 2013 ರ ನಡುವೆ ಫ್ರಾನ್ಸ್‌ನ ರೆನ್ನೆಸ್‌ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್‌ನಲ್ಲಿ ನಡೆದ ಉತ್ಖನನಕ್ಕೆ ಸಂಬಂಧಿಸಿದ್ದಾಗಿದೆ. ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಧರ್ಮಸ್ಥಳದಲ್ಲಿ ಅವಶೇಷಗಳು ಸಿಕ್ಕಿವೆಯೇ ಎಂಬ ಕುರಿತು ಮಾಹಿತಿ ಹುಡುಕಿದ್ದೇವೆ. ಈ ಸಂದರ್ಭ ಆಗಸ್ಟ್ 9 ರಂದು ಪ್ರಜಾವಾಣಿ ಪ್ರಕಟಿಸಿದ ವರದಿಯಲ್ಲಿ, ‘‘ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವ ಕುರಿತು ಧರ್ಮಸ್ಥಳ ಗ್ರಾಮದಲ್ಲಿ ಒಟ್ಟು 15 ಜಾಗಗಳನ್ನು ತೋರಿಸಿದ್ದು ಅವುಗಳಲ್ಲಿ 14 ಜಾಗಗಳ ಶೋಧಕಾರ್ಯ ಪೂರ್ಣಗೊಂಡಿದೆ. ಇವುಗಳಲ್ಲಿ ಎರಡು ಕಡೆ ಮಾತ್ರ ಮೃತದೇಹಗಳ ಅವಶೇಷ ಸಿಕ್ಕಿದೆ’’ ಎಂಬ ಮಾಹಿತಿ ಇದೆ.

ಆದರೆ, ವೈರಲ್ ಫೋಟೋವು ತಲೆಬುರುಡೆಗಳನ್ನು ಹೊಂದಿರುವ ಹಲವಾರು ಅಸ್ಥಿಪಂಜರಗಳನ್ನು ತೋರಿಸುತ್ತಿದೆ. ಅಲ್ಲದೆ ಎಸ್​ಐಟಿ ಈವರೆಗೆ ಉತ್ಖನನದ ಕುರಿತು ಯಾವುದೇ ಫೋಟೋ ಬಿಡುಗಡೆ ಮಾಡಿಲ್ಲ. ಹೀಗಾಗಿ ಇದು ಧರ್ಮಸ್ಥಳ ಉತ್ಖನನಗಳಿಗೆ ಸಂಬಂಧಿಸಿದ್ದಲ್ಲ ಎಂದು ದೃಢಪಡಿಸುತ್ತದೆ.

Fact Check: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮುದ್ರಾ ಯೋಜನೆಯಡಿಯಲ್ಲಿ ಎಲ್ಲರಿಗೂ 1,000 ರೂ. ನೀಡಲಾಗುತ್ತಿದೆಯೇ?

ನಂತರ ನಾವು ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ಸಂದರ್ಭ ಮೇ 5, 2021 ರಂದು ಫ್ರೆಂಚ್ ದಿನಪತ್ರಿಕೆ ಲೆಮೊಂಡೆಯ ಇದೇ ರೀತಿಯ ಛಾಯಾಚಿತ್ರವನ್ನು ಹೊಂದಿರುವ ಲೇಖನ ಪ್ರಕಟಿಸಿರುವುದು ಕಂಡುಬಂತು. ರೆನ್ನೆಸ್ (ಇಲ್ಲೆ-ಎಟ್-ವಿಲೈನ್) ನಲ್ಲಿರುವ ಜಾಕೋಬಿನ್ ಕಾನ್ವೆಂಟ್‌ನಲ್ಲಿ ಸಮಾಧಿ ಮಾಡಲಾದ ರಾಜ ಸೈನ್ಯದ ಸೈನಿಕರ ಸಮಾಧಿಯ ನೋಟ, ಎಂಬ ಶೀರ್ಷಿಕೆ ಇದಕ್ಕಿದ್ದು INRAP (ಫ್ರೆಂಚ್ ರಾಷ್ಟ್ರೀಯ ಪ್ರಿವೆಂಟಿವ್ ಆರ್ಕಿಯಲಾಜಿಕಲ್ ರಿಸರ್ಚ್ ಸಂಸ್ಥೆ) ಗೆ ಕ್ರೆಡಿಟ್ ನೀಡಲಾಗಿದೆ. ಮೇ 5, 2021 ರಂದು ಬಿಡುಗಡೆಯಾದ ಈ ಲೆ ಪ್ಯಾರಿಸಿಯನ್ ಲೇಖನದಲ್ಲಿಯೂ ಅದೇ ಛಾಯಾಚಿತ್ರವನ್ನು ನೋಡಿದ್ದೇವೆ. ಅದರಲ್ಲಿ ಫ್ರಾನ್ಸ್‌ನ ರೆನ್ನೆಸ್‌ನಲ್ಲಿ ಕಂಡುಬಂದ ಅಸ್ಥಿಪಂಜರಗಳು 1491 ರಲ್ಲಿ ಬ್ರೆಟನ್ ಸೈನ್ಯದ ವಿರುದ್ಧ ಹೋರಾಡಿದ ಸೈನಿಕರಿಗೆ ಸೇರಿವೆ ಎಂದು ಹೇಳಲಾಗಿದೆ.

2011 ಮತ್ತು 2013 ರ ನಡುವೆ, ಫ್ರೆಂಚ್ ರಾಷ್ಟ್ರೀಯ ಪ್ರಿವೆಂಟಿವ್ ಆರ್ಕಿಯಲಾಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (INRAP) ನ ತಂಡವು ರೆನ್ನೆಸ್‌ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್‌ನಿಂದ ನೂರಾರು ಮಾನವ ಅವಶೇಷಗಳನ್ನು ಉತ್ಖನನ ಮಾಡಿದೆ ಎಂದು ವರದಿ ಹೇಳಿದೆ. 15 ನೇ ಶತಮಾನದ ಅಂತ್ಯದಲ್ಲಿ ಬ್ರಿಟಾನಿಯ ಸ್ವಾತಂತ್ರ್ಯವು ಮರೆಯಾಗಿರುವ ಸ್ಥಳ, ಐತಿಹಾಸಿಕವಾಗಿ ಮಹತ್ವದ್ದಾಗಿರುವ ಈ ಪ್ರದೇಶವು ರೆನ್ನೆಸ್‌ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್‌ನಿಂದ ನೂರಾರು ಮಾನವ ಅವಶೇಷಗಳನ್ನು ಹೊರತೆಗೆದಿದೆ ಎಂಬ ಮಾಹಿತಿ ಇದರಲ್ಲಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, 2011 ಮತ್ತು 2013 ರ ನಡುವೆ ಫ್ರಾನ್ಸ್‌ನ ರೆನ್ನೆಸ್‌ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್‌ನಲ್ಲಿ ನಡೆದ ಉತ್ಖನನಕ್ಕೆ ಸಂಬಂಧಿಸಿದ ಫೋಟೋವನ್ನು ಸದ್ಯ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶೋಧಾಕಾರ್ಯಕ್ಕೆ ಸಂಬಂಧಿಸಿ ತಪ್ಪಾಗಿ ಶೇರ್ ಮಾಡಲಾಗುತ್ತದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:58 pm, Mon, 11 August 25