ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ, ಇಲ್ಲಿಯವರೆಗೂ ಸಿಗದ ಕುರುಹು
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯನ್ನು ತೀವ್ರಗೊಳಿಸಿದ್ದು, ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯದಲ್ಲಿ ಉತ್ಖನನ ಕಾರ್ಯ ಮುಂದುವರಿಸಿದ್ದಾರೆ. ಆದ್ರೆ, ವ್ಯಕ್ತಿ ತೋರಿಸಿದ್ದ ಮೊದಲ ಪಾಯಿಂಟ್ ನಲ್ಲಿ ನಿನ್ನೆ ಏನು ಸಿಕ್ಕಿರಲಿಲ್ಲ. ಇಂದು 2ನೇ ದಿನವೂ ಸಹ ಕಾರ್ಯಚರಣೆ ನಡೆಸಿದ್ದು, ಇಂದೂ ಸಹ 2 ಹಾಗೂ ಮೂರನೇ ಪಾಯಿಂಟ್ ನಲ್ಲೂ ಸಹ ಅಗೆದು ನೋಡಿದ್ರೆ ಯಾವುದೇ ಕುರುಹುಗಳು ಸಿಕ್ಕಿಲ್ಲ.
ಮಂಗಳೂರು, (ಜುಲೈ 30): ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾಗಿ ತಪ್ಪೊಪ್ಪಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯನ್ನು ತೀವ್ರಗೊಳಿಸಿದ್ದು, ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯದಲ್ಲಿ ಉತ್ಖನನ ಕಾರ್ಯ ಮುಂದುವರಿಸಿದ್ದಾರೆ. ಆದ್ರೆ, ವ್ಯಕ್ತಿ ತೋರಿಸಿದ್ದ ಮೊದಲ ಪಾಯಿಂಟ್ ನಲ್ಲಿ ನಿನ್ನೆ ಏನು ಸಿಕ್ಕಿರಲಿಲ್ಲ. ಇಂದು 2ನೇ ದಿನವೂ ಸಹ ಕಾರ್ಯಚರಣೆ ನಡೆಸಿದ್ದು, ಇಂದೂ ಸಹ 2 ಹಾಗೂ ಮೂರನೇ ಪಾಯಿಂಟ್ ನಲ್ಲೂ ಸಹ ಅಗೆದು ನೋಡಿದ್ರೆ ಯಾವುದೇ ಕುರುಹುಗಳು ಸಿಕ್ಕಿಲ್ಲ. 6 ಅಡಿ ಅಳ-ಅಗಲ ಅಗೆದರೂ ಸಹ ಎರಡನೇ ಸ್ಥಳದಲ್ಲೂ ಅಸ್ಥಿಪಂಜರ ಪತ್ತೆಯಾಗಿಲ್ಲ. ಅಲ್ಲದೇ ವ್ಯಕ್ತಿ ತೋರಿಸಿದ ಮೂರನೇ ಸ್ಥಳವನ್ನು ಸಹ 20 ಮಂದಿ ಕಾರ್ಮಿಕರು ಭೂಮಿ ಅಗೆದು ನೋಡಿದ್ರೆ ಏನು ಪತ್ತೆಯಾಗಿಲ್ಲ. ಹೀಗಾಗಿ ಇದೀಗ 4ನೇ ಸ್ಥಳದಲ್ಲಿ ಶೋಧಾ ಕಾರ್ಯ ಮುಂದುವರೆದಿದೆ.
Published on: Jul 30, 2025 04:00 PM
Latest Videos

