ಶಿವಮೊಗ್ಗ: ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಖಾಸಗಿ ಬಸ್ ಗುದ್ದಿ ಮೂರು ಸಾವು, ಅರು ಜನರಿಗೆ ಗಂಭೀರ ಗಾಯ
ಚೆಕ್ ಪೋಸ್ಟ್ ಬಳಿ ಕೆಟ್ಟು ನಿಂತಿರೋದು ಆಂಧ್ರಪ್ರದೇಶ ನೋಂದಣಿಯ ಟ್ರಕ್, ವಾಹನವನ್ನು ಅದು ಕೆಟ್ಟ ಸ್ಥಿತಿಯಲ್ಲೇ ಚಾಲಕ ಬಿಟ್ಟುಹೋಗಿದ್ದಾನೆ. ಲಾರಿಯ ಅರ್ಧಭಾಗ ರಸ್ತೆಯ ಮೇಲಿದೆ ಎಂದು ಪ್ರಕಾಶ್ ಹೇಳುತ್ತಾರೆ. ಬೆಳಗಿನ ಜಾವ 3.50 ಕ್ಕೆ ಅಪಘಾತ ಸಂಭವಿಸಿದೆ. ನೈಟ್ ಸರ್ವಿಸ್ ಮಾಡುವ ವಾಹನಗಳ ಡ್ರೈವರ್ಗಳಿಗೆ ಅದು ನಿದ್ರೆಯ ಮಂಪರು ಅವರಿಸಿಕೊಳ್ಳುವ ಸಮಯ ಎಂದು ಹೇಳಲಾಗುತ್ತದೆ.
ಶಿವಮೊಗ್ಗ, ಜುಲೈ 30: ಮಂಗಳೂರಿನಿಂದ ಚಳ್ಳಕೆರೆ ಕಡೆ ಬರುತ್ತಿದ್ದ ಖಾಸಗಿ ಬಸ್ಸೊಂದು ಶಿವಮೊಗ್ಗ ತಾಲೂಕಿನ ಗಾಜನೂರು ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಗುದ್ದಿದ ಪರಿಣಾಮ ಬಸ್ಸಿನ ಕಂಡಕ್ಟರ್ ಅಣ್ಣಪ್ಪ (40) ಮತ್ತು ಹರ್ಷಿತಾ (35) ಹೆಸರಿನ ಇನ್ನೊಬ್ಬ ಮಹಿಳೆ ಸಾವಿಗೀಡಾಗಿದ್ದಾರೆ. ಆದರೆ, ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಬಸ್ಸಿನ ಮಾಲೀಕ ಪ್ರಕಾಶ್, ಒಬ್ಬ ಇಂಜಿನೀಯರಿಂಗ್ ವಿದ್ಯಾರ್ಥಿ (engineering student) ಕೂಡ ಅಪಘಾತದಲ್ಲಿ ಮರಣವನ್ನಪ್ಪಿದ್ದಾರೆ ಎಂದು ಹೇಳುತ್ತಾರೆ. ಅವನೊಂದಿಗಿದ್ದ ತಂದೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಮೆಗ್ಗಾನ್ ಅಸ್ಪತ್ರೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅಪಘಾತದಲ್ಲಿ ಒಟ್ಟು 6 ಜನ ಗಾಯಗೊಂಡಿರುವರೆಂದು ಪ್ರಕಾಶ್ ಹೇಳುತ್ತಾರೆ.
ಇದನ್ನೂ ಓದಿ: Karnataka Accidents: ಕರಾಳ ಗುರುವಾರ: ಕರ್ನಾಟಕದಾದ್ಯಂತ ಸರಣಿ ಅಪಘಾತಗಳಲ್ಲಿ 17 ಜನ ಸಾವು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

