ಪೊಲೀಸ್ ಕಮೀಷನರನ್ನೂ ಬಿಡದ ಸೈಬರ್ ವಂಚಕರು ಏನು ಮಾಡಿದ್ದಾರೆ ನೋಡಿ
Whatsapp scamster: ಈ ನಕಲಿ ಮೊಬೈಲ್ ನಂಬರ್ ಟ್ರೂ ಕಾಲರ್‌ನಲ್ಲಿ ಚಕ್ರವರ್ತಿ ಎಂಬ ಹೆಸರನ್ನು ಸೂಚಿಸುತ್ತಿದ್ದು, ಸದ್ಯ ಪೊಲೀಸ್ ಕಮೀಷನರ್ ಸೂಚನೆ ಬೆನ್ನಲೆ ಸೈಬರ್ ಕ್ರೈಮ್ ಪೊಲೀಸರು ನಕಲಿ ನಂಬರ್‌ನ ಹಿಂದಿರುವ ವಂಚಕನ ಬೆನ್ನ ಹತ್ತಿದ್ದಾರೆ. ಒಟ್ಟಿನಲ್ಲಿ ಈ ಹಿಂದೆ ಫೇಸ್‌ಬುಕ್‌ನಲ್ಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ವಂಚಕರು ಇದೀಗ ವಾಟ್ಸಪ್ ಮೂಲಕ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಖತರ್ನಾಕ್ ಐಡಿಯಾವನ್ನು ಬಳಸಿಕೊಂಡು ಸೈಬರ್ ಫ್ರಾಡ್ ಮಾಡಲಾಗುತ್ತಿದೆ. ಇದೀಗ ಪೊಲೀಸ್ ಕಮೀಷನರ್ ಅವರನ್ನು ಸಹ ಈ ಸೈಬರ್ ವಂಚಕರು (Cyber Crime) ಬಿಟ್ಟಿಲ್ಲ. ಪೊಲೀಸ್ ಕಮೀಷನರ್ ಹೆಸರಲ್ಲಿ ನಕಲಿ ವಾಟ್ಸಾಪ್ ಖಾತೆ ಸೃಷ್ಟಿ ಮಾಡಿ ( Whatsapp scamster) ಹಣ ದೋಚಲು ಪ್ರಯತ್ನಿಸಿರುವ ಘಟನೆ ನಡೆದಿದೆ.
ಅಂದ ಹಾಗೇ ಮಂಗಳೂರು ನಗರ IPS ಅಧಿಕಾರಿ, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಹೆಸರಿನಲ್ಲಿ ಈ ನಕಲಿ ವಾಟ್ಸಾಪ್ ಖಾತೆ ಸೃಷ್ಟಿ ಮಾಡಲಾಗಿದೆ. 8319051976 ನಂಬರ್ ನಲ್ಲಿ ವಾಟ್ಸಪ್ ಖಾತೆ ತೆರೆದು ಕಮೀಷನರ್ ಫೋಟೋವನ್ನು ಡಿ.ಪಿ.ಗೆ ಹಾಕಿಕೊಂಡು ವಂಚಿಸುವ ಪ್ರಯತ್ನವಾಗಿದೆ.
ಈ ವಾಟ್ಸಪ್ ಖಾತೆಯಿಂದ ನಾನು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಎಂದು ವಂಚಕ ಪರಿಚಯಿಸಿಕೊಂಡಿದ್ದು. ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ UPI ವರ್ಕ್ ಆಗ್ತಿಲ್ಲ. ತುರ್ತಾಗಿ ಹಣ ಬೇಕಾಗಿದ್ದು, ಹಣ ವರ್ಗಾವಣೆ ಮಾಡುವಂತೆ ಸಂದೇಶ ರವಾನಿಸುತ್ತಿದ್ದಾನೆ. ಇದರ ಜೊತೆಗೆ ಒಂದು ಗಂಟೆಯೊಳಗೆ ವಾಪಸು ಹಣ ಹಾಕುವ ಭರವಸೆಯನ್ನು ವಂಚಕ ನೀಡಿದ್ದಾನೆ. ಕೇವಲ ಟೆಕ್ಸ್ಟ್ ಮಾತ್ರವಲ್ಲದೇ ವಾಯ್ಸ್ ಕಾಲ್ ಸಹ ಮಾಡಿದ್ದಾನೆ.
Also Read: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೈಬರ್ ವಂಚನೆ ಪ್ರಕರಣದಲ್ಲಿ ಏರಿಕೆ, ಅನಕ್ಷರಸ್ಥರಿಗಿಂತ ಶಿಕ್ಷಿತರಿಗೇ ಹೆಚ್ಚು ವಂಚನೆ
ಇನ್ನು ತನ್ನ ಹೆಸರಲ್ಲಿ ಈ ರೀತಿ ನಕಲಿ ವಾಟ್ಸಾಪ್ ಖಾತೆ ಸೃಷ್ಟಿಯಾಗಿರುವ ವಿಚಾರ ತಿಳಿದು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಸ್ಪಷ್ಟನೆ ನೀಡಿದ್ದಾರೆ. ಇದೊಂದು ಫೇಕ್ ಕಾಲ್ ಆಗಿದ್ದು, ಇದಕ್ಕೆ ಯಾರು ಕೂಡಾ ಪ್ರತಿಕ್ರಿಯಿಸದಂತೆ ಕೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಅಸಲಿ ವಾಟ್ಸಪ್ ಅಕೌಂಟ್‌ನಲ್ಲಿ ಸ್ಟೇಟಸ್ ಹಾಕಿ ಈ ಬಗ್ಗೆ ಯಾರು ಎಂಟರ್ಟೈನ್ ಮಾಡದಂತೆ ಕೇಳಿಕೊಂಡಿದ್ದಾರೆ.
ಈ ನಕಲಿ ನಂಬರ್ ಟ್ರೂ ಕಾಲರ್‌ನಲ್ಲಿ ಚಕ್ರವರ್ತಿ ಎಂಬ ಹೆಸರನ್ನು ಸೂಚಿಸುತ್ತಿದ್ದು, ಸದ್ಯ ಪೊಲೀಸ್ ಕಮೀಷನರ್ ಸೂಚನೆ ಬೆನ್ನಲೆ ಸೈಬರ್ ಕ್ರೈಮ್ ಪೊಲೀಸರು ನಕಲಿ ನಂಬರ್‌ನ ಹಿಂದಿರುವ ವಂಚಕನ ಬೆನ್ನತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಹಿಂದೆ ಫೇಸ್‌ಬುಕ್‌ನಲ್ಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ವಂಚಕರು ಇದೀಗ ವಾಟ್ಸಪ್ ಮೂಲಕ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ