ಮಂಗಳೂರು: ಪೊಲೀಸರ ಮುಂದೆಯೇ ಮಗಳ ಹತ್ಯೆಗೆ ಯತ್ನಿಸಿದ ತಂದೆ, ಕಾರಣವೇನು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 27, 2023 | 9:07 AM

ಗಂಡ-ಹೆಂಡತಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದ್ದು, ಅದು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಆತನ ಪತ್ನಿ, ಮಂಗಳೂರು ಪೂರ್ವ ಪೊಲೀಸ್​ ಠಾಣೆಗೆ ಹೋಗಿ ‘ನನ್ನ ಪತಿ ಜಗಳ ಮಾಡುತ್ತಿದ್ದಾನೆ. ನನ್ನ ಹಾಗೂ ಮಕ್ಕಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಮಂಗಳೂರು: ಪೊಲೀಸರ ಮುಂದೆಯೇ ಮಗಳ ಹತ್ಯೆಗೆ ಯತ್ನಿಸಿದ ತಂದೆ, ಕಾರಣವೇನು?
ಮಂಗಳೂರು ಪೂರ್ವ ಪೊಲೀಸ್​
Follow us on

ಮಂಗಳೂರು, ಸೆ.27: ತಂದೆಯೇ ತನ್ನ ಒಂದುವರೆ ವರ್ಷದ ಮಗಳ ಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ(ಸೆ.24) ಬೆಳಗ್ಗೆ 2.10 ರ ಸುಮಾರಿಗೆ ನಡೆದಿದೆ. ಹೌದು, ಗಂಡ-ಹೆಂಡತಿ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದ್ದು, ಅದು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಆತನ ಪತ್ನಿ, ಮಂಗಳೂರು ಪೂರ್ವ ಪೊಲೀಸ್​ ಠಾಣೆ(Mangalore East Police Station)ಗೆ ಹೋಗಿ ‘ನನ್ನ ಪತಿ ಜಗಳ ಮಾಡುತ್ತಿದ್ದಾನೆ. ನನ್ನ ಹಾಗೂ ಮಕ್ಕಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಈ ವೇಳೆ ಮಹಿಳೆ ಗಾಬರಿಯಲ್ಲಿ ತನ್ನ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದು, ಕೂಡಲೇ ಪೊಲೀಸರು 112 ಗೆ ಕರೆ ಮಾಡಿ ತಮ್ಮ ಸಿಬ್ಬಂದಿಗೆ ಘಟನಾ ಸ್ಥಳಕ್ಕೆ ಹೋಗಿ, ಆಕೆಯ ಪತಿ ಹಾಗೂ ಆತನ ಇಬ್ಬರು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಬರುವಂತೆ ಸೂಚಿಸಿದ್ದಾರೆ. ಅದರಂತೆ ಆತನ ಜೊತೆ ಮಕ್ಕಳನ್ನು ಕರೆತಂದಿದ್ದಾರೆ. ಈ ವೇಳೆ ನನ್ನ ಮೇಲೆಯೇ ದೂರು ನೀಡುತ್ತಿಯಾ ಎಂದು ಪತ್ನಿಯ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ಜೊತೆಗೆ ಪೊಲೀಸ್​ ಮುಂದೆಯೇ ತನ್ನ ಸ್ವಂತ ಮಕ್ಕಳನ್ನೇ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ.

ಇದನ್ನೂ ಓದಿ:ಪ್ರೀತಿಸಿದ ಹುಡುಗಿಯ ಜತೆಗೆ ಜಗಳ, ಮನನೊಂದು ಶಾಸಕರ ಫ್ಲಾಟ್​​​​ನಿಂದ​ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ

ಇನ್ನು ಗಲಾಟೆ ವೇಳೆ ಚಿಕ್ಕ ಮಗುವನ್ನು ನೆಲಕ್ಕೆ ಎಸೆದು ಹಲ್ಲೆ ಮಾಡಿದ್ದರಿಂದ ಕುತ್ತಿಗೆ ಮತ್ತು ತಲೆಗೆ ಗಾಯಗಳಾಗಿತ್ತು. ಈ ವೇಳೆ ರಾತ್ರಿ ಪಾಳಿಯಲ್ಲಿದ್ದ ಪಿಎಸ್​ಐ ಪ್ರತಿಭಾ ಅವರನ್ನು ಠಾಣೆಗೆ ಕರೆಸಿ, ಅವರ ಜೊತೆ ತಾಯಿ ಹಾಗೂ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನು ಮಗಳ ಹತ್ಯೆಗೆ ನಿರ್ಧಿಷ್ಟ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಪತಿ ಮಹೇಶ್​ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:05 am, Wed, 27 September 23