ವೇಣೂರಿನಲ್ಲಿ ಪಟಾಕಿ ಸ್ಫೋಟ ಪ್ರಕರಣ: ಈ ಗೋಡಾನ್​ನಲ್ಲಿ ತಯಾರಾಗುತ್ತಿತ್ತಾ ಗ್ರೆನೇಡ್?

| Updated By: ಆಯೇಷಾ ಬಾನು

Updated on: Jan 29, 2024 | 8:54 AM

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿ ಜ.28ರ ಸಂಜೆ 5.30 ಸುಮಾರಿಗೆ ಕುಕ್ಕೇಡಿ ಎಂಬಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಪೋಟವಾಗಿತ್ತು. ಈ ಪಟಾಕಿ ಗೋದಾಮಿನಲ್ಲಿ ಕೇವಲ ಪಟಾಕಿಯಷ್ಟೇ ತಯಾರಾಗುತ್ತಿತ್ತಾ?ಗ್ರೆನೇಡ್ ಮಾದರಿಯನ್ನೂ ಇಲ್ಲಿ ತಯಾರು ಮಾಡುತ್ತಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ.

ವೇಣೂರಿನಲ್ಲಿ ಪಟಾಕಿ ಸ್ಫೋಟ ಪ್ರಕರಣ: ಈ ಗೋಡಾನ್​ನಲ್ಲಿ ತಯಾರಾಗುತ್ತಿತ್ತಾ ಗ್ರೆನೇಡ್?
ಪಟಾಕಿ ಸ್ಫೋಟವಾದ ಜಾಗ
Follow us on

ಮಂಗಳೂರು, ಜ.29: ಮೇಣೂರಿನ ತೋಟದ ಮನೆಯಲ್ಲಿದ್ದ ಪಟಾಕಿ ಗೋಡಾನ್​ನಲ್ಲಿ (Crackers Godown) ನಡೆದ ಅವಘಡಕ್ಕೆ ಮೂವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಆರು ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇನ್ನು ಘಟನೆಯಲ್ಲಿ ಮೃತಪಟ್ಟವರ ದೇಹ ಛಿದ್ರ ಛಿದ್ರವಾಗಿದೆ. ಇದನ್ನು ನೋಡಿದರೆ ಈ ಗೋಡಾನ್​ನಲ್ಲಿ ಕೇವಲ ಪಟಾಕಿಯಷ್ಟೇ ತಯಾರಾಗುತ್ತಿತ್ತಾ?ಗ್ರೆನೇಡ್ ಮಾದರಿಯನ್ನೂ ಇಲ್ಲಿ ತಯಾರು ಮಾಡುತ್ತಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಮೇಲ್ನೋಟಕ್ಕೆ ಬಾಂಬ್​ ಸ್ಫೋಟದಂತೆ ಶಬ್ದ ಕೇಳಿ ಬಂದಿತ್ತು. ಸ್ಥಳದಲ್ಲಿ ಗ್ರೆನೇಡ್ ಮಾದರಿಯ ಸ್ಫೋಟಕ​ ತಯಾರಿಸುವುದರ ಬಗ್ಗೆ ಅನುಮಾನ‌ ವ್ಯಕ್ತವಾಗಿದೆ. ಸ್ಫೋಟವಾದ ಗೋಡಾನ್​ಯೊಳಗೆ ಮತ್ತು ಅಕ್ಕ-ಪಕ್ಕ ಸಾಕಷ್ಟು ಗ್ರೆನೇಡ್ ಮಾದರಿ ವಸ್ತು ಪತ್ತೆಯಾಗಿದೆ. ಪಟಾಕಿ ಸ್ಫೋಟದ ತೀವೃತೆ ಇಷ್ಟೊಂದು ಇರಲ್ಲ ಎಂದು ಸ್ಥಳೀಯರು ಶಂಕಿಸಿದ್ದಾರೆ. ಐದಾರು ಕಿಲೋಮೀಟರ್ ದೂರದವರೆಗೆ ಸ್ಪೋಟದ ಶಬ್ಧ‌ ಕೇಳಿ ಬಂದಿದೆ. ಮೊಬೈಲ್​ ಫೋರೆನ್ಸಿಕ್​​ ತಂಡದಿಂದ ಗ್ರೆನೇಡ್ ಮಾದರಿ ವಸ್ತು ಸಂಗ್ರಹಿಸಲಾಗಿದೆ.

ಘಟನೆ ವಿವರ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿ ಜ.28ರ ಸಂಜೆ 5.30 ಸುಮಾರಿಗೆ ಕುಕ್ಕೇಡಿ ಎಂಬಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಪೋಟವಾಗಿತ್ತು. ಭಾರೀ ಶಬ್ಧದಿಂದ ಆದ ಸ್ಪೋಟದ ಸದ್ದು ಕೇಳಿ ಅಕ್ಕ ಪಕ್ಕದವರು ಸ್ಥಳಕ್ಕೆ ಬಂದಾಗ ಅಲ್ಲಿ ಇಡೀ ಗೋಡಾನ್ ಬ್ಲಾಸ್ಟ್ ಆಗಿ ಬೆಂಕಿ ಆವರಿಸಿತ್ತು. 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು. ಈ ಪೈಕಿ ಕೇರಳದ ವರ್ಗೀಸ್ (68), ಹಾಸನದ ಚೇತನ್(25) ಕೇರಳದ ಸ್ವಾಮಿ(60) ಮೃತಪಟ್ಟಿದ್ರು. ಉಳಿದಂತೆ ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ, ಕೇಶವ ಕೇರಳ ಕೆಲಸ ನಿರ್ವಹಿಸುತ್ತಿದ್ದರು. ಮೃತಪಟ್ಟ ಮೂವರು ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿದ್ದರು. ಕುಚ್ಚೋಡಿ ನಿವಾಸಿ ಬಶೀರ್ ಎಂಬುವರು 2011-12 ರಲ್ಲಿ ಸ್ಟೋಟಕ ತಯಾರಿಕೆಗೆ ಲೈಸೆನ್ಸ್ ಪಡೆದುಕೊಂಡಿದ್ರು.

ಇದನ್ನೂ ಓದಿ: ದಕ್ಷಿಣ ಕನ್ನಡ: ವೇಣೂರಿನಲ್ಲಿ ಪಟಾಕಿ ಗೋದಾಮಿನಲ್ಲಿ ಸ್ಫೋಟ: ಮೂವರು ಕಾರ್ಮಿಕರು ಸಾವು, ಇಬ್ಬರು ವಶಕ್ಕೆ

ಮೃತದೇಹಗಳು ಸ್ಫೋಟವಾದ ಸುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಛಿದ್ರವಾಗಿ ಬಿದ್ದಿದೆ. ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ಸಿಬಂದಿ ತಕ್ಷಣ ಆಗಮಿಸಿ ಬೆಂಕಿನಂದಿಸಿದ್ದಾರೆ. ಸ್ಥಳದಲ್ಲಿ ಶೆಡ್ ಸಂಪೂರ್ಣ ದ್ವಂಸವಾಗಿದ್ದು ಇದರ ಸದ್ದು 4 ಕಿ.ಮೀ. ವ್ಯಾಪ್ತಿಯಷ್ಟು ದೂರಕ್ಕೆ ಕೇಳಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ರು. 50 ಸೆನ್ಸ್ ಜಾಗದಲ್ಲಿ ಸಯ್ಯದ್ ಬಷೀರ್ ಎಂಬುವವರು ಪಟಾಕಿ ಮಾಡಲು ಲೈಸೆನ್ಸ್ ಪಡೆದಿದ್ದಾರೆ. 2011-2012 ನಲ್ಲಿ ತಗೊಂಡಿರೋ ಲೈಸೆನ್ಸ್ 2019 ರಲ್ಲಿ ರಿನಿವಲ್ ಆಗಿದೆ. 2024 ಮಾರ್ಚ್ ವರೆಗೂ ವ್ಯಾಲಿಡ್ ಆಗಿದೆ. ಡಿಮ್ಯಾಂಡ್ ಗೆ ತಕ್ಕ ಹಾಗೆ ಪಟಾಕಿ ಮಾಡುತ್ತಿದ್ರು ಅನ್ನೊದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪಟಾಕಿ ಮಾಡುವಾಗ ಯಾವ ರೀಸನ್ ಗೆ ಬ್ಲಾಸ್ಟ್ ಆಗಿದೆ ಅನ್ನೊದು ಗೊತ್ತಾಗಿಲ್ಲ. ಇಲ್ಲಿ ಏನಾಯ್ತು, ಯಾಕಾಯ್ತು ಅನ್ನೊದ್ರ ಬಗ್ಗೆ ತನಿಖೆ ಮಾಡ್ತಾ ಇದ್ದೀವಿ ಅಂತಾ ಎಸ್ಪಿ ಹೇಳಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ