ಸ್ವತಂತ್ರ ಹೋರಾಟಗಾರ ವೆಂಕಣ್ಣ ನಾಯಕ ವಿಧಿವಶ

| Updated By: ವಿವೇಕ ಬಿರಾದಾರ

Updated on: Sep 04, 2022 | 9:10 PM

ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ನಾಯಕ್​ ಅವರು ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದ ಸ್ವಗೃಹದಲ್ಲಿ (102) ನಿಧನರಾಗಿದ್ದಾರೆ.

ಸ್ವತಂತ್ರ ಹೋರಾಟಗಾರ ವೆಂಕಣ್ಣ ನಾಯಕ ವಿಧಿವಶ
ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ನಾಯಕ್
Follow us on

ಉತ್ತರ ಕನ್ನಡ: ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ನಾಯಕ್​ ಅವರು ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದ ಸ್ವಗೃಹದಲ್ಲಿ (102) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ.ವೆಂಕಣ್ಣ ನಾಯಕ್​ ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ವೆಂಕಣ್ಣ ನಾಯಕ್ ಅವರು ಉಪ್ಪಿನ ಸತ್ಯಾಗ್ರಹ, ಕರ ಬಂಧಿ ಹೋರಾಟದಲ್ಲಿ ಭಾಗವಹಿಸಿದ್ದರು. ವೆಂಕಣ್ಣ ನಾಯಕ ಅವರನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ, ಜನಪ್ರತಿನಿಧಿಗಳು ಸನ್ಮಾನಿಸಿದ್ದರು.