ಬೆಂಗಳೂರು: ಮಂಗಳೂರಿನ ಕುಖ್ಯಾತ ಭೂಗತ ಪಾತಕಿ ರಶೀದ್ ಮಲಬಾರಿ ಗ್ಯಾಂಗ್ಗೆ ಸೇರಿದ ವ್ಯಕ್ತಿಯನ್ನು ಬೆಂಗಳೂರಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಗೋವಿಂದಪುರದಲ್ಲಿ ಸೈಯದ್ ಕರೀಂ ಅಲಿ ಬರ್ಬರವಾಗಿ ಹತ್ಯೆಗೀಡಾದ ವ್ಯಕ್ತಿ.
ರೌಡಿ ಸೈಯದ್ ಕರೀಂ ಅಲಿ ನನ್ನು ಚಾಕುವಿನಿಂದ ಚುಚ್ಚಿ, ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರೌಡಿ ಅನೀಸ್ ಪತ್ನಿ ಜೊತೆ ಅಕ್ರಮ ಸಂಬಂಧದ ಶಂಕೆಯಿಂದ ಈ ಹತ್ಯೆ ಮಾಡಲಾಗಿದೆ. ಜೈಲಿನಲ್ಲಿರುವ ಅನೀಸ್ ಸಹಚರರಿಂದ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅನೀಸ್, ಸದ್ಯ ಜೈಲಿನಲ್ಲಿದ್ದಾನೆ. ಇನ್ನು ಕೊಲೆ ಮಾಡಿದ ಅರೋಪಿಗಳು ಎಸ್ಕೇಪ್ ಅಗಿದ್ದಾರೆ.
ಹತ್ಯೆಗೀಡಾದ ಸೈಯದ್ ಕರೀಂ ಅಲಿ ಎಂಬ ರೌಡಿ ಮಂಗಳೂರಿನ ಶಾರ್ಪ್ ಶೂಟರ್ ರಶೀದ್ ಮಲಬಾರಿ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿದ್ದವ. ಗೋವಿಂದಪುರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕೊಲೆಯಲ್ಲಿ ವಿಕೃತಿ ಮೆರೆದಿರುವ ಕೊಲೆಗಡುಕರು:
ಗೋವಿಂದಪುರದಲ್ಲಿ ಆಂಜನೇಯ ದೇವಾಲಯದ ಬಳಿ ಅಲಿ ಕೊಲೆ ನಡೆದಿದೆ. ಪೊಲೀಸರು ಈ ಹಿಂದೆ ಅನೀಸ್ ಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದರು. ತನ್ನ ಮೇಲೆ ನಡೆದ ಶೂಟೌಟ್ ಜಾಗದಲ್ಲೆ ಅಲಿಗೆ ಸ್ಪಾಟ್ ಫಿಕ್ಸ್ ಮಾಡಿಸಿ, ಅದೇ ಜಾಗದಲ್ಲೆ ಅಲಿ ಕೊಲೆಯಾಗುವಂತೆ ನೋಡಿಕೊಂಡಿದ್ದಾನೆ.
Suicide ರಾಯಲ್ ಎನ್‌ಫೀಲ್ಡ್ ಖರೀದಿಸುವುದು ಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್‌ವೇರ್ ಇಂಜಿನಿಯರ್
(Gangster Rashid Malabari aide murdered in bangalore over illicit relation with woman)
Published On - 2:16 pm, Tue, 22 June 21