ಮಂಗಳೂರು, (ಸೆಪ್ಟೆಂಬರ್ 24): ಹಲವು ಕಾರಣ ಹೇಳಿ ಫೋನ್ ಮಾಡಿ ಒಟಿಪಿ ಪಡೆದು, ಹಣ ಲಪಟಾಯಿಸುವುದನ್ನು ನೋಡಿರುತ್ತೀರಾ.. ಆದ್ರೆ, ಇಲ್ಲಿ ಫೋನ್ ಬರುವುದಿಲ್ಲ. ಒಟಿಪಿನೂ ಕೊಡಂಗಿಲ್ಲ. ಬಯೋಮೆಟ್ರಿಕ್ ಥಂಬ್ ನೀಡಿದರೆ ಸಾಕು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಡಮಾರ್ ಆಗುತ್ತೆ. ಅದೂ ಸರ್ಕಾರಿ ಕಚೇರಿಯಲ್ಲೇ ಈ ರೀತಿ ನಡೆಯುತ್ತಿದ್ದು, ಜನ ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಹೌದು..ಮಂಗಳೂರಿನ(Manlauru) ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೀಗೆ ಥಂಬ್ ನೀಡಿದ ಜನರ ಬ್ಯಾಂಕ್ ಖಾತೆಯಿಂದ(Bank Account) 10 ರಿಂದ 40 ಸಾವಿರದವರೆಗೂ ಹಣ ವರ್ಗಾವಣೆ ಆಗಿದೆ.
ಅಕ್ಟೋಬರ್ 1 ರಿಂದ ಆಸ್ತಿ ನೊಂದಣಿ ಶುಲ್ಕ ಏರಿಕೆ ಆಗುತ್ತಿದೆ. ಇದರಿಂದ ಜನರು ಮುಗಿಬಿದ್ದು ಆಸ್ತಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಖದೀಮರೂ ಕೂಡ ಹಣ ಮಾಡುವುದಕ್ಕೆ ಸರ್ಕಾರಿ ಕಚೇರಿಯನ್ನೇ ಟಾರ್ಗೆಟ್ ಮಾಡ್ಕೊಂಡಿದ್ದಾರೆ. ಆಸ್ತಿ ನೋಂದಣಿಗೆ ಆಧಾರ್ ಪಡೆಯಲು ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ-2 ಸಾಫ್ಟ್ವೇರ್ಗೆ ಥಂಬ್ ನೀಡಬೇಕಾಗುತ್ತದೆ. ಹೀಗೇ ಥಂಬ್ ನೀಡಿದ ಬಳಿಕ ಕಂಪ್ಯೂಟರ್ನಲ್ಲಿ ಆಧಾರ್ ದಾಖಲೆಗಳು ಪಡೆದು ರಿಜಿಸ್ಟ್ರೇಷನ್ ಪ್ರಕ್ರಿಯೆ ಮುಂದುವರೆಯುತ್ತದೆ. ಆದ್ರೆ, ಮಂಗಳೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೀಗೆ ಥಂಬ್ ನೀಡಿದ ಜನರ ಬ್ಯಾಂಕ್ ಖಾತೆಯಿಂದ 10 ರಿಂದ 40ಸಾವಿರದವರೆಗೂ ಹಣ ವರ್ಗಾವಣೆ ಆಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದ್ರೆ, ಪೊಲೀಸರು ಮಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದು, ಏನೂ ಸುಳಿವು ಸಿಕ್ಕಿಲ್ಲ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಪೊಲೀಸರ ಹೆಸರಿನಲ್ಲಿ ನಕಲಿ ರೈಡ್ ಮಾಡಿ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್
ಆಸ್ತಿ ನೋಂದಣಿ ಮಾಡಬೇಕಾದ್ರೆ 2 ಬಾರಿ ಥಂಬ್ ನೀಡಬೇಕಾಗಿದೆ. ಮೊದಲು ಕಾವೇರಿ-2 ಸಾಫ್ಟವೇರ್ನಲ್ಲಿ. ನಂತರ ಮುದ್ರಾಂಕ ಶುಲ್ಕ ಕಟ್ಟಲು. ಆದ್ರೆ, ಜನರು ಕಾವೇರಿ-2 ಸಾಫ್ಟವೇರ್ನಲ್ಲಿ ಥಂಬ್ ನೀಡಿದ ತಕ್ಷಣವೇ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗುತ್ತಿದೆಯಂತೆ. ನಿತ್ಯ ಹತ್ತಾರು ಜನರು ಹಣ ಕಳೆದುಕೊಳ್ಳುತ್ತಿದ್ರೂ ಸಬ್ ರಿಜಿಸ್ಟ್ರಾರ್ ಅಧಿಕಾರಿಯಿಂದಾಗಲಿ, ಪೊಲೀಸರಿಂದಾಗಲಿ ಪರಿಹಾರ ಸಿಕ್ಕಿಲ್ಲ.
ಕಾವೇರಿ 2 ಸಾಫ್ಟ್ವೇರ್ ಸಂಪೂರ್ಣ ಕಂಟ್ರೋಲ್ ಸರ್ಕಾರದ ಕೈಲೇ ಇದ್ದು, ಬೆಂಗಳೂರಿನಿಂದಲೇ ಎಲ್ಲ ನಿಯಂತ್ರಣ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರದ ಸರ್ವರ್ಗೇ ಖದೀಮರು ಕನ್ನ ಹಾಕಿದ್ದಾರಾ ಅನ್ನೋ ಅನುಮಾನ ಕಾಡಿದ್ದು.. ತಕ್ಷಣ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ