ಇಸ್ರೇಲ್ ಮೇಲೆ ಹಮಾಸ್ ಉಗ್ರರಿಂದ ದಾಳಿ: ಸದ್ಯಕ್ಕೆ ಕರಾವಳಿಯ ಜನರು ಸೇಫ್

| Updated By: ಗಂಗಾಧರ​ ಬ. ಸಾಬೋಜಿ

Updated on: Oct 07, 2023 | 5:29 PM

ಇಸ್ರೇಲ್ ಮೇಲೆ ಹಮಾಸ್ ಉಗ್ರರಿಂದ ಶನಿವಾರ ದಾಳಿ ಮಾಡಿದ್ದು, ಈವರೆಗೆ 22 ಜನರು ಸಾವನ್ನಪ್ಪಿದರೆ, ಹಲವರಿಗೆ ಗಾಯಗಳಾಗಿವೆ. ಇಸ್ರೇಲ್​ನಲ್ಲಿ ಭಾರತೀಯರು ನೆಲೆಸಿರುವ ಪ್ರದೇಶಗಳ ಬಳಿ ಬಾಂಬ್ ದಾಳಿ ಮಾಡಲಾಗಿದೆ. ಇಸ್ರೇಲ್​ನಲ್ಲಿ ಕರಾವಳಿಯ ಸಾಕಷ್ಟು ಜನರು ನೆಲೆಸಿದ್ದು, ಅವರು ವಾಸಿಸುವ ಸುತ್ತಾಮುತ್ತಲಿನ ಪ್ರದೇಶದ ಬಳಿ ದಾಳಿ ಮಾಡಲಾಗಿದೆ ಸದ್ಯಕ್ಕೆ ಎಲ್ಲರೂ ಮನೆ ಒಳಗೆ ಸೇಫ್​ ಆಗಿದ್ದಾರೆ ಎನ್ನಲಾಗುತ್ತಿದೆ.    

ಇಸ್ರೇಲ್ ಮೇಲೆ ಹಮಾಸ್ ಉಗ್ರರಿಂದ ದಾಳಿ: ಸದ್ಯಕ್ಕೆ ಕರಾವಳಿಯ ಜನರು ಸೇಫ್
ಹಾಮಾಸ್ ಉಗ್ರರು, ಗ್ರೆನೇಡ್ ದಾಳಿ
Follow us on

ಮಂಗಳೂರು, ಅಕ್ಟೋಬರ್​​​ 07: ಇಸ್ರೇಲ್ (Israel) ಮೇಲೆ ಹಮಾಸ್ ಉಗ್ರರಿಂದ ಶನಿವಾರ ದಾಳಿ ಮಾಡಿದ್ದು, ಈವರೆಗೆ 22 ಜನರು ಸಾವನ್ನಪ್ಪಿದರೆ, ಹಲವರಿಗೆ ಗಾಯಗಳಾಗಿವೆ. ಇಸ್ರೇಲ್​ನಲ್ಲಿ ಭಾರತೀಯರು ನೆಲೆಸಿರುವ ಪ್ರದೇಶಗಳ ಬಳಿ ಬಾಂಬ್ ದಾಳಿ ಮಾಡಲಾಗಿದ್ದು, ನಿವಾಸಿಗಳು ಬೆಚ್ಚಿ ಬಿದಿದ್ದಾರೆ. ಇಸ್ರೇಲ್​ನಲ್ಲಿ ಕರಾವಳಿಯ ಸಾಕಷ್ಟು ಜನರು ನೆಲೆಸಿದ್ದು, ಅವರು ವಾಸಿಸುವ ಸುತ್ತಾಮುತ್ತಲಿನ ಪ್ರದೇಶದ ಬಳಿ ದಾಳಿ ಮಾಡಲಾಗಿದೆ ಸದ್ಯಕ್ಕೆ ಎಲ್ಲರೂ ಮನೆ ಒಳಗೆ ಸೇಫ್​ ಆಗಿದ್ದಾರೆ ಎನ್ನಲಾಗುತ್ತಿದೆ.

ಭಾರತೀಯರು ನೆಲೆಸಿರುವ ಪ್ರದೇಶಗಳ ಬಳಿ ಬಾಂಬ್ ದಾಳಿಗಳು ನಡೆಯುತ್ತಿವೆ. ಗ್ರೆನೇಡ್ ದಾಳಿಯಿಂದ ರಸ್ತೆ ಮೇಲೆ ದೊಡ್ಡ ದೊಡ್ಡ ಗುಂಡಿಗಳು ಆಗಿವೆ. ಸಮುದ್ರ ಮಾರ್ಗವಾಗಿ ಹಾಮಾಸ್ ಉಗ್ರರು ಆಗಮಿಸುತ್ತಿದ್ದಾರೆ. ಟಿವಿ9 ಗೆ ಇಸ್ರೇಲ್​ನಲ್ಲಿ ನೆಲೆಸಿರುವ ಭಾರತೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ವಿಡಿಯೋ ಕೂಡ ಲಭ್ಯವಾಗಿದೆ.

ಇದನ್ನೂ ಓದಿ: ಗಾಜಾದಿಂದ 5000 ರಾಕೆಟ್​ಗಳ ದಾಳಿ; ಯುದ್ಧ ಸ್ಥಿತಿ ಘೋಷಿಸಿದ ಇಸ್ರೇಲ್, ಒಬ್ಬರು ಸಾವು

ಇಸ್ರೇಲ್​​ನ ಸದ್ಯದ ಪರಿಸ್ಥಿತಿಯಲ್ಲಿ ಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಪಾಲಿಸಬೇಕು. ದಯವಿಟ್ಟು ಅನಗತ್ಯ ಓಡಾಟಗಳನ್ನು ತಪ್ಪಿಸಿ ಮತ್ತು ಸುರಕ್ಷವಾಗಿರಿ ಎಂದು ಇಸ್ರೇಲ್​​ನಲ್ಲಿರುವ ಭಾರತದ ರಾಯಭಾರ ಕಚೇರಿ ಸಂದೇಶವನ್ನು ನೀಡಿದೆ.

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ 2ನೇ ದೊಡ್ಡ ಯುದ್ಧ ಇದಾಗಿದೆ. ಗಾಜಾ ಪಟ್ಟಿಯಿಂದ ಹಲವಾರು ಭಯೋತ್ಪಾದಕರು ಇಸ್ರೇಲ್ ಪ್ರದೇಶದೊಳಗೆ ನುಸುಳಿದ್ದಾರೆ. ಗಾಜಾ ಪಟ್ಟಿಯ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ತಮ್ಮ ಮನೆಗಳಲ್ಲಿಯೇ ಉಳಿಯಲು ಸೂಚಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಮಾಹಿತಿ ನೀಡಿದೆ.

ಇದನ್ನೂ ಓದಿ: ಇಸ್ರೇಲ್ ಮೇಲೆ ದಾಳಿ: ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದ ರಾಯಭಾರ ಕಚೇರಿ

ಪವಿತ್ರ ನಗರವಾದ ಜೆರುಸಲೇಮ್ ಮತ್ತು ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗುತ್ತಿವೆ. ಈ ಹಿಂಸಾಚಾರದ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭದ್ರತಾ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿದ್ದು, ಯುದ್ಧ ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಸದ್ಯ ಇಸ್ರೇಲ್​ನಲ್ಲಿ 22 ಜನರು ಸಾವನ್ನಪ್ಪಿದರೆ, 250ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಉಗ್ರರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:12 pm, Sat, 7 October 23