AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್ ಮೇಲೆ ದಾಳಿ: ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದ ರಾಯಭಾರ ಕಚೇರಿ

ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ ದಾಳಿಯನ್ನು ನಡೆಸಿದ್ದು, ಇದೀಗ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವೆ ಯುದ್ಧ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಭಾರತವು ಇಸ್ರೇಲ್‌ನಲ್ಲಿರುವ ತನ್ನ ಪ್ರಜೆಗಳಿಗೆ ಸಲಹೆಯನ್ನು ನೀಡಿದೆ. ಜಾಗರೂಕರಾಗಿರಲು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಗಮನಿಸುವಂತೆ ಕೇಳಿಕೊಂಡಿದೆ.

ಇಸ್ರೇಲ್ ಮೇಲೆ ದಾಳಿ: ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದ ರಾಯಭಾರ ಕಚೇರಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Oct 07, 2023 | 5:22 PM

Share

ಹಮಾಸ್ ಭಯೋತ್ಪಾದಕರು ಇಸ್ರೇಲ್ (Israel) ಮೇಲೆ ದಾಳಿಯನ್ನು ನಡೆಸಿದ್ದು, ಇದೀಗ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವೆ ಯುದ್ಧ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಭಾರತವು ಇಸ್ರೇಲ್‌ನಲ್ಲಿರುವ ತನ್ನ ಪ್ರಜೆಗಳಿಗೆ ಸಲಹೆಯನ್ನು ನೀಡಿದೆ. ಜಾಗರೂಕರಾಗಿರಲು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಗಮನಿಸುವಂತೆ ಕೇಳಿಕೊಂಡಿದೆ. ಈ ಬಗ್ಗೆ ಇಸ್ರೇಲ್​​ನಲ್ಲಿರುವ ಭಾರತದ ರಾಯಭಾರ ಕಚೇರಿ ಸಂದೇಶವನ್ನು ರವಾನೆ ಮಾಡಿದೆ. ಇಸ್ರೇಲ್​​ನ ಸದ್ಯದ ಪರಿಸ್ಥಿತಿಯಲ್ಲಿ ಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಪಾಲಿಸಬೇಕು. ದಯವಿಟ್ಟು ಜಾಗರೂಕರಾಗಿರಿ, ಅನಗತ್ಯ ಓಡಾಟಗಳನ್ನು ತಪ್ಪಿಸಿ ಮತ್ತು ಸುರಕ್ಷವಾಗಿರಿ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಸ್ರೇಲಿ ಹೋಮ್ ಫ್ರಂಟ್ ಕಮಾಂಡ್ ವೆಬ್‌ಸೈಟ್ ( https://www.oref.org.il/en )ಗೆ ಭೇಟಿ ನೀಡಿ. ಜತೆಗೆ ತುರ್ತು ಸಂದರ್ಭದಲ್ಲಿ, ದಯವಿಟ್ಟು ನಮ್ಮನ್ನು (ರಾಯಭಾರ ಕಚೇರಿ) +97235226748 ಗೆ ಕರೆ ಮಾಡಿ ಅಥವಾ cons1.telaviva@ mea.gov.in ನಲ್ಲಿ ಸಂದೇಶವನ್ನು ಕಳುಹಿಸಿ. ಯಾವುದೇ ಹೆಚ್ಚಿನ ಮಾರ್ಗದರ್ಶನಕ್ಕೆ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಎಂದು ಸಂದೇಶವನ್ನು ನೀಡಿದೆ.

ಇಂದು (ಅ.7) ಬೆಳಿಗ್ಗೆ ಪ್ಯಾಲೆಸ್ತೇನ್​​ನ ಹಮಾಸ್ ಭಯೋತ್ಪಾದಕರು ದಕ್ಷಿಣ ಮತ್ತು ಮಧ್ಯ ಇಸ್ರೇಲ್‌ಗೆ ರಾಕೆಟ್‌ ದಾಳಿ ಮಾಡುವ ಮೂಲಕ ಯುದ್ಧವನ್ನು ಪ್ರಾರಂಭಿಸಿದೆ. ಬೆಳಗ್ಗೆ 8:15ಕ್ಕೆ (ಸ್ಥಳೀಯ ಕಾಲಮಾನ) ದಾಳಿಯ ಬಗ್ಗೆ ಸೈರನ್‌ಗಳು ಹಲವು ಬಾರಿ ಕೇಳಿಬಂದವು. ಬೆಳಗ್ಗೆ 10:15ಕ್ಕೆ (ಸ್ಥಳೀಯ ಕಾಲಮಾನ) ಅಪಾಯದ ಸೈರನ್‌ಗಳು ಕೇಳಿ ಬಂದಿದೆ. ಇಸ್ರೇಲಿ ರಾಷ್ಟ್ರೀಯ ಸೇವೆಯಾದ ಮ್ಯಾಗೆನ್ ಡೇವಿಡ್ ಆಡಮ್ ಪ್ರಕಾರ, ಒಂದು ರಾಕೆಟ್ ನೇರವಾಗಿ ಗೆಡೆರೊಟ್ ಪ್ರಾದೇಶಿಕ ಮಂಡಳಿಯ ಕಟ್ಟಡಕ್ಕೆ ಅಪ್ಪಳಿಸಿದೆ. ಇದರಿಂದ 60 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಮದು ಹೇಳಿದೆ.

ಇನ್ನು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಅವರು ಭಾರತದ ಜನರ ನಮಗೆ ಬೆಂಬಲ ನೀಡುತ್ತಿದ್ದಾರೆ. ನಾವು ಭಯೋತ್ಪಾದನೆಯನ್ನು ಎದುರಿಸುತ್ತೇವೆ. ಹಮಾಸ್ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಗಾಜಾದಿಂದ ಕ್ಷಿಪಣಿ ದಾಳಿಯ ನಂತರ ಇಸ್ರೇಲ್ ಈಗಾಗಲೇ ದೇಶದಲ್ಲಿ ಯುದ್ಧದ ಸ್ಥಿತಿಯನ್ನು ಘೋಷಿಸಿದೆ ಎಂದು ಹೇಳಿದ್ದಾರೆ.

ಗಾಜಾ ಪಟ್ಟಿಯಲ್ಲಿರುವ ಹಮಾಸ್ ಗುಂಪಿನ ಮೇಲೆ ಇಸ್ರೇಲ್ ಫೈಟರ್ ಜೆಟ್‌ಗಳು ದಾಳಿ ನಡೆಸುತ್ತಿವೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ. ಇಸ್ರೇಲಿ ವಾಯುಪಡೆಯ ಫೈಟರ್ ಜೆಟ್‌ಗಳು ಗಾಜಾ ಪಟ್ಟಿಯಲ್ಲಿರುವ ಭಯೋತ್ಪಾದಕ ಸಂಘಟನೆಗಳ ಸ್ಥಳಗಳ ಮೇಲೆ ದಾಳಿ ಮಾಡುತ್ತಿವೆ.

ಇದನ್ನೂ ಓದಿ: ಗಾಜಾದಿಂದ 5000 ರಾಕೆಟ್​ಗಳ ದಾಳಿ; ಯುದ್ಧ ಸ್ಥಿತಿ ಘೋಷಿಸಿದ ಇಸ್ರೇಲ್, ಒಬ್ಬರು ಸಾವು

ಇಸ್ರೇಲ್​​ ಮೇಲಿನ ದಾಳಿಯನ್ನು ಖಂಡಿಸಿದ ವಿಶ್ವ ನಾಯಕರು

ಇಸ್ರೇಲ್​ ಮೇಲೆ ನಡೆಸಿದ ಈ ದಾಳಿಯನ್ನು ಜಗತ್ತಿನ ಅನೇಕ ನಾಯಕರು ವಿರೋಧಿಸಿದ್ದಾರೆ. ಪ್ರಧಾನಿ ಮೋದಿ ಅವರು X (ಹಿಂದಿನ ಟ್ವಿಟರ್​) ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. “ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿಯಿಂದ ತೀವ್ರ ಆಘಾತವಾಗಿದೆ. ಸಾವನ್ನಪ್ಪಿರುವ ಕುಟುಂಬಕ್ಕೆ ಸ್ವಾಂತನ ಹೇಳಲು ಬಯಸುತ್ತೇನೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಬ್ರಿಟನ್​​ ಅಧ್ಯಕ್ಷರಾದ ರಿಷಿ ಸುನಕ್ ಬೇಜಾರು ವ್ಯಕ್ತಪಡಿಸಿದ್ದಾರೆ. “ಇಸ್ರೇಲಿ ನಾಗರಿಕರ ವಿರುದ್ಧ ಹಮಾಸ್ ಭಯೋತ್ಪಾದಕರು ಇಂದು ಬೆಳಿಗ್ಗೆ ನಡೆಸಿದ ದಾಳಿಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಂಪೂರ್ಣ ಪ್ರಯತ್ನ ಮಾಡುತ್ತಿದೆ. ನಾವು ಕೂಡ ಇಸ್ರೇಲ್​ ಜತೆಗೆ ಇದ್ದೇವೆ. ಇದರ ಜತೆಗೆ ಬ್ರಿಟಿಷ್ ಪ್ರಜೆಗಳು ಅಧಿಕಾರಿಗಳ ಸಲಹೆಯನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:51 pm, Sat, 7 October 23