ಗಾಜಾದಿಂದ 5000 ರಾಕೆಟ್​ಗಳ ದಾಳಿ; ಯುದ್ಧ ಸ್ಥಿತಿ ಘೋಷಿಸಿದ ಇಸ್ರೇಲ್, ಒಬ್ಬರು ಸಾವು

Israel- Gaza Attack: ಇಂದು ಬೆಳಗ್ಗೆಯಿಂದಲೇ ಇಸ್ರೇಲ್ ಮೇಲೆ ರಾಕೆಟ್ ದಾಳಿ ಆರಂಭವಾಗಿದ್ದು, ದಿಗ್ಭಂಧನಕ್ಕೊಳಗಾಗಿರುವ ಗಾಜಾ ಪಟ್ಟಿಯ ಹಲವಾರು ಕಡೆಗಳಿಂದ ರಾಕೆಟ್‌ ಉಡಾಯಿಸಲಾಗಿದೆ ಎನ್ನಲಾಗಿದೆ. ಈ ಹಿಂಸಾಚಾರದ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭದ್ರತಾ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿದ್ದು, ಯುದ್ಧ ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಗಾಜಾದಿಂದ 5000 ರಾಕೆಟ್​ಗಳ ದಾಳಿ; ಯುದ್ಧ ಸ್ಥಿತಿ ಘೋಷಿಸಿದ ಇಸ್ರೇಲ್, ಒಬ್ಬರು ಸಾವು
ಇಸ್ರೇಲ್​ನಲ್ಲಿ ರಾಕೆಟ್ ದಾಳಿ
Follow us
|

Updated on:Oct 07, 2023 | 12:13 PM

ಜೆರುಸಲೇಂ: ಪ್ಯಾಲೆಸ್ತೇನ್​ನ ಗಾಜಾ (Gaza) ಪಟ್ಟಿಯ ಕಡೆಯಿಂದ ಇಸ್ರೇಲ್ ಮೇಲೆ 5000 ರಾಕೆಟ್​ಗಳ ದಾಳಿ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧವನ್ನೇ (Israel War) ಘೋಷಣೆ ಮಾಡಿದೆ. ಇಂದು ಬೆಳಗ್ಗೆಯಿಂದಲೇ ಇಸ್ರೇಲ್ ಮೇಲೆ ರಾಕೆಟ್ ದಾಳಿ ಆರಂಭವಾಗಿದ್ದು, ದಿಗ್ಭಂಧನಕ್ಕೊಳಗಾಗಿರುವ ಗಾಜಾ ಪಟ್ಟಿಯ ಹಲವಾರು ಕಡೆಗಳಿಂದ ರಾಕೆಟ್‌ ಉಡಾಯಿಸಲಾಗಿದೆ ಎನ್ನಲಾಗಿದೆ. ಹಮಾಸ್ ಉಗ್ರಗಾಮಿಗಳು ಇದನ್ನು “ಮೊದಲ ದಾಳಿ” ಎಂದು ಕರೆದಿದ್ದಾರೆ. ಇಸ್ರೇಲ್ ರಕ್ಷಣಾ ಪಡೆ ಯುದ್ಧದ ಸ್ಥಿತಿಯನ್ನು ಘೋಷಿಸಿದ್ದರಿಂದ ಒಬ್ಬರು ಸಾವನ್ನಪ್ಪಿದ್ದಾರೆ, ಮೂವರು ಗಾಯಗೊಂಡಿದ್ದಾರೆ.

‘ಆಪರೇಷನ್ ಅಲ್-ಅಕ್ಸಾ ಫ್ಲಡ್’ ಆರಂಭವಾದಾಗ 5,000 ರಾಕೆಟ್‌ಗಳನ್ನು ಹಾರಿಸಲಾಯಿತು ಎಂದು ಹಮಾಸ್ ಸಶಸ್ತ್ರ ವಿಭಾಗ ಹೇಳಿದೆ. ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್) ಯೋಧನನ್ನು ಅಪಹರಿಸಲಾಗಿದೆ. ದಕ್ಷಿಣ ಇಸ್ರೇಲ್‌ನಲ್ಲಿ ಒತ್ತೆಯಾಳಾಗಿಟ್ಟುಕೊಂಡ ಸನ್ನಿವೇಶಗಳು ಕೂಡ ವರದಿಯಾಗಿವೆ.

ಇದನ್ನೂ ಓದಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು: ವರದಿ

ಇಸ್ರೇಲ್‌ನಲ್ಲಿ ಭಯೋತ್ಪಾದಕರೆಂದು ಪರಿಗಣಿಸಲ್ಪಟ್ಟಿರುವ ಹಮಾಸ್ ಉಗ್ರಗಾಮಿಗಳ ಒಳನುಸುಳುವಿಕೆಯ ಬಗ್ಗೆ ದೇಶದ ರಕ್ಷಣಾ ಪಡೆಗಳು ಎಚ್ಚರಿಕೆ ನೀಡಿವೆ. ಈ ದಾಳಿಯಲ್ಲಿ ಪ್ಯಾರಾಗ್ಲೈಡರ್‌ಗಳನ್ನು ಬಳಸಲಾಗಿದ್ದು, ಇಸ್ರೇಲ್‌ ಆ ದೃಶ್ಯದ ತುಣುಕುಗಳನ್ನು ಬಿಡುಗಡೆ ಮಾಡಿದೆ.

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ 2ನೇ ದೊಡ್ಡ ಯುದ್ಧ ಇದಾಗಿದೆ.ಗಾಜಾ ಪಟ್ಟಿಯಿಂದ ಹಲವಾರು ಭಯೋತ್ಪಾದಕರು ಇಸ್ರೇಲ್ ಪ್ರದೇಶದೊಳಗೆ ನುಸುಳಿದ್ದಾರೆ. ಗಾಜಾ ಪಟ್ಟಿಯ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ತಮ್ಮ ಮನೆಗಳಲ್ಲಿಯೇ ಉಳಿಯಲು ಸೂಚಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಮಾಹಿತಿ ನೀಡಿವೆ.

ಪವಿತ್ರ ನಗರವಾದ ಜೆರುಸಲೇಮ್ ಮತ್ತು ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗುತ್ತಿವೆ. ಈ ಹಿಂಸಾಚಾರದ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭದ್ರತಾ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿದ್ದು, ಯುದ್ಧ ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:09 pm, Sat, 7 October 23